Site icon Vistara News

Australian Open Finla: ಸತತ 2ನೇ ಬಾರಿ ಆಸ್ಟ್ರೇಲಿಯಾ ಓಪನ್ ಟ್ರೋಫಿ ಗೆದ್ದ ಅರಿನಾ ಸಬಲೆಂಕಾ

Aryna Sabalenka wins title

ಮೆಲ್ಬರ್ನ್​: ಆಸ್ಟ್ರೇಲಿಯಾ ಓಪನ್(Australian Open Finla)​ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ, ಹಾಲಿ ಚಾಂಪಿಯನ್ ಆಗಿದ್ದ​ ಅರಿನಾ ಸಬಲೆಂಕಾ(Aryna Sabalenka) ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್​ನ ಫೈನಲ್​ ಕಾದಾಟದಲ್ಲಿ ಬೆಲಾರೂಸ್​ನ ಅನುಭವಿ ಆಟಗಾರ್ತಿ ಸಬಲೆಂಕಾ ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್​ ಆಡಿದ ಚೀನದ 21 ವರ್ಷದ ಕ್ವಿನೆನ್​ ಝಂಗ್(Qinwen Zheng)​ ಅವರನ್ನು 6-3, 6-2 ನೇರ ಸೆಟ್​ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಗುರುವಾರ ನಡೆದಿದ್ದ ಮಹಿಳಾ ಸಿಂಗಲ್ಸ್​ನ ಸೆಮಿ ಫೈನಲ್​ ಪಂದ್ಯದಲ್ಲಿ ಸಬಲೆಂಕಾ 7-6, 4-6 ನೇರ ಸೆಟ್​ಗಳಿಂದ ಅಮೆರಿಕದ ಕೊಕೊ ಗಾಫ್ ಅವರನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದರು. ಕ್ವಿನೆನ್​ ಝಂಗ್​ 6-4, 6-4 ನೇರ ಸೆಟ್​ಗಳಿಂದ ಉಕ್ರೇನ್​ನ ಡಯಾನ ಯಾಸ್ಟ್ರೆಮ್ಸ್ಕಾ ವಿರುದ್ಧ ಗೆಲುವು ಸಾಧಿಸಿ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಆದರೆ, ತಮ್ಮ ಚೊಚ್ಚಲ ಫೈನಲ್​ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು.

ಟೂರ್ನಿದುದ್ದಕ್ಕೂ ತನ್ನ ಬದ್ಧತೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದ ಸಬಲೆಂಕಾ ಫೈನಲ್ ಪಂದ್ಯದಲ್ಲಿಯೂ ಇದೇ ಪ್ರದರ್ಶನವನ್ನು ತೋರ್ಪಡಿಸಿದರು. ಯಾವುದೇ ಆತಂಕವಿಲ್ಲದೆ. 12ನೇ ಶ್ರೇಯಾಂಕಿತ ಕ್ವಿನೆನ್​ ಝಂಗ್ ಎದುರು ಸುಲಭ ಜಯ ದಾಖಲಿಸಿದರು.

ಇದನ್ನೂ ಓದಿ Padma Awards: ರೋಹನ್ ಬೋಪಣ್ಣ, ಅನುಪಮಾ ಹೊಸಕೆರೆ, ಸಿ.ಆರ್ ಚಂದ್ರಶೇಖರ್ ಸೇರಿ 8 ಕನ್ನಡಿಗರಿಗೆ ಪದ್ಮಶ್ರೀ

ಪ್ರಶಸ್ತಿ ಗೆದ್ದು ದಾಖಲೆ ಬರೆದ ಸಬಲೆಂಕಾ


ಸಬಲೆಂಕಾ ಆಸ್ಟ್ರೇಲಿಯನ್ ಓಪನ್​ ಫೈನಲ್ ತಲುಪುವ ಮೂಲಕ ಸೆರೆನಾ ವಿಲಿಯಮ್ಸ್ ನಂತರ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸತತವಾಗಿ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸೆರೆನಾ 2016 ಹಾಗೂ 2017ರಲ್ಲಿ ಈ ಸಾಧನೆ ಮಾಡಿದ್ದರು. ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಮೂಲಕ 2013ರ ನಂತರ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನಿಸಿಕೊಂಡರು. 2013ರಲ್ಲಿ ವಿಕ್ಟೋರಿಯ ಅಜರೆಂಕಾ ಈ ಸಾಧನೆ ಮಾಡಿದ್ದರು.

Exit mobile version