ಮೆಲ್ಬರ್ನ್: ವಿಶ್ವ ನಂ.1 ಟೆನಿಸಿಗ, 24 ಗ್ರ್ಯಾನ್‌ಸ್ಲಾಂಗಳ ಒಡೆಯ ಸರ್ಬಿಯಾದ ನೋವಾಕ್ ಜೋಕೋವಿಕ್(Novak Djokovic) ಆಸ್ಟ್ರೇಲಿಯಾ ಓಪನ್(Australian Open) ಟೂರ್ನಿಯಲ್ಲಿ ಸೋಲಿನ ಆಘಾತ ಎದುರಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಇಟಲಿಯ 4ನೇ ಶ್ರೇಯಾಂಕಿತ ಜಾನಿಕ್ ಸಿನ್ನರ್(Jannik Sinner) ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. 36 ವರ್ಷದ ಜೊಕೊವಿಚ್‌ಗೆ 2018ರ ಬಳಿಕ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಎದುರಾದ ಮೊದಲ ಸೋಲು ಇದಾಗಿದೆ.
ಶುಕ್ರವಾರ ನಡೆದ ಪುರುಷ ಸಿಂಗ್ಸಲ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ 22 ವರ್ಷದ ಜಾನಿಕ್ ಸಿನ್ನರ್ ಅವರು ತಮ್ಮ ಶ್ರೇಷ್ಠ ಆಟ ಪ್ರದರ್ಶಿಸುವ ಮೂಲಕ ಅನುಭವಿ ಜೋಕೋವಿಕ್ಗೆ 6-1 6-2 6-7(6) 6-3 ಅಂತರದಿಂದ ಸೋಲುಣಿಸಿದರು. ಈ ಮೂಲಕ ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್ಗೆ ಲಗ್ಗೆಯಿಟ್ಟರು.
11ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದ ಜೋಕೊ 25ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ, ಸೆಮಿಯಲ್ಲಿ ಎದುರಾದ ಸೋಲು ಅವರ ನಿರೀಕ್ಷೆಗಳನ್ನು ಹುಸಿಯಾಗುವಂತೆ ಮಾಡಿತು. ಯಾರೂ ಊಹಿಸದ ರೀತಿಯಲ್ಲಿ ಜಾನಿಕ್ ಸಿನ್ನರ್ ಅವರು ಜೋಕೊಗೆ ಸೋಲಿನ ಏಟು ನೀಡಿದರು.
Scintillating Sinner 🇮🇹🔥
— #AusOpen (@AustralianOpen) January 26, 2024
He achieves the impossible defeating 10x #AusOpen champion Djokovic 6-1 6-2 6-7(6) 6-3.@janniksin • #AO2024 • @wwos • @espn • @eurosport • @wowowtennis@Kia_Worldwide • #Kia • #MakeYourMove pic.twitter.com/X6qFAtegq7
ಮೊದಲ ಎರಡು ಸೆಟ್‌ಗಳನ್ನು 6-1, 6-2 ಅಂತರದಿಂದ ಗೆದ್ದುಕೊಂಡ ಇಟಾಲಿಯನ್ ಆಟಗಾರ ಮೂರನೇ ಸೆಟ್‌ನಲ್ಲಿ 6-7 ಅಂತರದಲ್ಲಿ ಸೋಲು ಕಂಡರು. ನಾಲ್ಕನೇ ಸೆಟ್‌ನಲ್ಲಿ ಪುಟಿದೇದ್ದು ಗೆಲುವು ಸಾಧಿಸಿದರು. ಫೈನಲ್ ಪಂದ್ಯದಲ್ಲಿ ಜಾನಿಕ್ ಸಿನ್ನರ್ ಅವರು ಡೇನಿಯಲ್ ಮೆಡ್ವೆಡೆವ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಣ ವಿಜೇತರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ Australian Open: ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಜೋಡಿ
ಚೀನದ 21 ವರ್ಷದ ಸಬಲೆಂಕಾ ಫೈನಲ್ ಫೈಟ್
ಮಹಿಳಾ ಸಿಂಗಲ್ಸ್ನ ಫೈನಲ್ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ, ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ(Aryna Sabalenka) ಮತ್ತು ಚೀನದ 21 ವರ್ಷದ ಕ್ವಿನೆನ್ ಝಂಗ್(Qinwen Zheng) ಮಧ್ಯೆ ಫೈನಲ್ ಕಾದಾಟ ನಡೆಯಲಿದೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್ನ ಸೆಮಿ ಫೈನಲ್ ಪಂದ್ಯದಲ್ಲಿ ಸಬಲೆಂಕಾ 7-6, 4-6 ನೇರ ಸೆಟ್ಗಳಿಂದ ಅಮೆರಿಕದ ಕೊಕೊ ಗಾಫ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. ದಿನದ ಮತ್ತೊಂದು ಸೆಮಿ ಪಂದ್ಯದಲ್ಲಿ ಕ್ವಿನೆನ್ ಝಂಗ್ 6-4, 6-4 ನೇರ ಸೆಟ್ಗಳಿಂದ ಉಕ್ರೇನ್ನ ಡಯಾನ ಯಾಸ್ಟ್ರೆಮ್ಸ್ಕಾ ವಿರುದ್ಧ ಗೆಲುವು ಸಾಧಿಸಿದ್ದರು.