ಬೆಂಗಳೂರು: ಭಾನುವಾರ ರಾತ್ರಿ ಅಹಮದಾಬಾದ್ನಲ್ಲಿ ನಡೆದ ಐಸಿಸಿ ವಿಶ್ವಕಪ್ 2023ರಲ್ಲಿ (ICC World Cup 2023) ಪ್ಯಾಟ್ ಕಮಿನ್ಸ್ ಪಡೆ ಗೆದ್ದ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗರು ಮತ್ತು ಅವರ ಕುಟುಂಬಗಳನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಗುರಿಯಾಗಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತದ 1.3 ಲಕ್ಷ ಅಭಿಮಾನಿಗಳ ಮುಂದೆ ಟ್ರೋಫಿ ಗೆದ್ದಿತ್ತು. ಸತತ 10 ಏಕದಿನ ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಪಂದ್ಯಾವಳಿಯ ಅತ್ಯುತ್ತಮ ತಂಡವಾದ ಭಾರತವನ್ನು ಸೋಲಿಸುವ ಮೂಲಕ ಅವರು ಶತಕೋಟಿ ಹೃದಯಗಳನ್ನು ಛಿದ್ರ ಮಾಡಿದ್ದರು. ಇದಾದ ಬೆನ್ನಲ್ಲೇ ಕೆಲವು ಕಿಡಿಗೇಡಿ ಅಭಿಮಾನಿಗಳು ಆಸ್ಟ್ರೇಲಿಯಾದ ಆಟಗಾರರ ಪತ್ನಿಯರು ಹಾಗೂ ಪುಟಾಣಿ ಮಕ್ಕಳಿಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ.
Absolutely vile and shocking. Indian cricket fans giving r@pe threats to the wife and daughter of Travis Head after the WC win.
— Singh (@APSvasii) November 19, 2023
His daughter is only 1 year old 🥲 pic.twitter.com/livmWjlioH
ಆಸ್ಟ್ರೇಲಿಯಾದ 241 ರನ್ಗಳ ಚೇಸಿಂಗ್ ಸಮಯದಲ್ಲಿ 137 ರನ್ ಗಳಿಸುವ ಮೂಲಕ ಫೈನಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಟ್ರಾವಿಸ್ ಹೆಡ್ ಅವರ ಪತ್ನಿಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಗುರಿಯಾಗಿಸಿಕೊಂಡರು. ಅದೇ ರೀತಿ ದಕ್ಷಿಣ ಭಾರತದ ಮೂಲವನ್ನು ಹೊಂದಿರುವ ಮ್ಯಾಕ್ಸ್ವೆಲ್ ಅವರ ಪತ್ನಿ ವಿನಿ ರಾಮನ್ ಅವರನ್ನೂ ನಿಂದಿಸಿದ್ದಾರೆ.
ರಾಮನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀಗೆ ಬರೆದಿದ್ದಾರೆ. ಶೀತದ ಮಾತ್ರೆ ತೆಗೆದುಕೊಳ್ಳಿ ಮತ್ತು ಕೋಪವನ್ನು ಕಡಿಮೆ ಮಾಡಿಕೊಳ್ಳಿ ಎಂದು ವಿನಿ ರಾಮನ್ ಬೆದರಿಕೆ ಹಾಕಿದವರಿಗೆ ಉತ್ತರ ಬರೆದಿದ್ದಾರೆ.
ಹೆಡ್ ಅವರ ಪತ್ನಿ ಜೆಸ್ಸಿಕಾ ಡೇವಿಸ್ ಮತ್ತು ಅವರ ಒಂದು ವರ್ಷದ ಮಗಳನ್ನು ಸಹ ಕೆಲವು ಭಾರತೀಯ ಅಭಿಮಾನಿಗಳು ಬಿಡಲಿಲ್ಲ ಎಂಬುದು ಅಚ್ಚರಿಯ ಸಂಗತಿ.
1987, 1999, 2003, 2007 ಮತ್ತು 2015ರ ಬಳಿಕ ಆಸ್ಟ್ರೇಲಿಯಾ ತಂಡ ಏಕದಿನ ಕ್ರಿಕೆಟ್ನಲ್ಲಿ 6ನೇ ಗೆಲುವು ದಾಖಲಿಸಿದೆ. ಭಾರತದಲ್ಲಿ ಪ್ರಶಸ್ತಿ ಗೆದ್ದ ನಂತರ ತವರು ತಂಡಗಳು ಕಪ್ ಗೆಲ್ಲುವ ಪ್ರವೃತ್ತಿಯನ್ನು ಮುರಿದರು. ಏತನ್ಮಧ್ಯೆ, ಕಳೆದ 10 ವರ್ಷಗಳಲ್ಲಿ ಗೆಲ್ಲಲಾಗದ ಐಸಿಸಿ ಪ್ರಶಸ್ತಿಗಾಗಿ ಭಾರತ ತಂಡ ಇನ್ನೂ ಒಂದು ವರ್ಷ ಕಾಯಬೇಕಾಗಿದೆ.
2 ವಿಶ್ವಕಪ್ನಲ್ಲಿ ಕಂಟಕವಾದ ಹೆಡ್
ಟ್ರಾವಿಸ್ ಹೆಡ್ ಅವರು ಭಾರತಕ್ಕೆ ಕಂಟಕವಾಗಿ ಪರಿಣಮಿಸಿದ್ದು ಇದು ಇರಡನೇ ನಿದರ್ಶನ. ನಾಲ್ಕು ತಿಂಗಳ ಹಿಂದಷ್ಟೇ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್ ಟೆಸ್ಟ್ ಫೈನಲ್ ಪಂದ್ಯದಲ್ಲಿಯೂ ಭಾರತ ವಿರುದ್ಧ ಶತಕ ಬಾರಿಸಿ ಸೋಲುಣಿಸಿದ್ದರು. ಇದೀಗ ಏಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ಅವರು ಶತಕ ಬಾರಿಸಿ ಮತ್ತೊಮ್ಮೆ ಭಾರತದ ಟ್ರೋಫಿ ಗೆಲುವಿಗೆ ಅಡ್ಡಗಾಲಿಟ್ಟರು.
ಇದನ್ನೂ ಓದಿ : Mohammed Shami : ಒಳ್ಳೆಯವರು ಮಾತ್ರ ಗೆಲ್ತಾರೆ; ಶಮಿಯ ಪತ್ನಿ ಹೀಗೆ ಹೇಳಿದ್ದು ಯಾರಿಗೆ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲೂ ಅವರು ಬಾಬರ್ ನೀಡಿದ ಬ್ಯಾಟ್ನಿಂದಲೇ ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಭಾರತಕ್ಕೆ ಸೋಲು ಕಾಣುವಂತೆ ಮಾಡಿದ್ದರು. ಇದೀಗ ಏಕದಿನದಲ್ಲೂ ಬಾಬರ್ ಅವರ ಬ್ಯಾಟ್ನಿಂದಲೇ ಶತಕ ಬಾರಿಸಿದ್ದಾರೆ ಎನ್ನಲಾಗಿದೆ.
ಟ್ರಾವಿಸ್ ಹೆಡ್ ಅವರು ಫೈನಲ್ ಪಂದ್ಯದಲ್ಲಿ ಭಾರತೀಯ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಈ ಅಸಾಮಾನ್ಯ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಇದು ಹೆಡ್ ಅವರ 2ನೇ ವಿಶ್ವಕಪ್ ಶತಕವಾಗಿದೆ. ಮೊದಲ ಶತಕ ಇದೇ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ದಾಖಲಿಸಿದ್ದರು.
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 137 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.