ಮುಂಬಯಿ: ಉತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ(AUSW vs INDW) ಮಹಿಳಾ ತಂಡ ಭಾರತ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 3 ರನ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿದೆ.
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರವಾಸಿ ಆಸ್ಟ್ರೇಲಿಯಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 258 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ, ರಿಚಾ ಘೋಷ್(96) ಮತ್ತು ಜೆಮಿಮಾ ರೋಡ್ರಿಗಸ್(44) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನ ಹೊರತಾಗಿಯೂ ಮೂರು ರನ್ಗಳ ವಿರೋಚಿತ ಸೋಲು ಕಂಡಿತು. ಭಾರತ 50 ಓವರ್ ಆಡಿ 8 ವಿಕೆಟ್ ಕಳೆದುಕೊಂಡು 255 ರನ್ ಬಾರಿಸಲಷ್ಟೇ ಶಕ್ತವಾಯಿತು. ಸರಣಿಯ ಅಂತಿಮ ಪಂದ್ಯ ಜನವರಿ 2 ರಂದು ನಡೆಯಲಿದೆ.
Australia hold their nerve in a thriller to gain an unassailable lead in the ODI series 💪#INDvAUS 📝: https://t.co/fSEcJLGqLC pic.twitter.com/X5MxO17M4e
— ICC (@ICC) December 30, 2023
ನಾಟಕೀಯ ಕುಸಿತ ಕಂಡ ಭಾರತ
ಚಸಿಂಗ್ ವೇಳೆ ಉತ್ತಮ ಆರಂಭ ಸಿಗದಿದ್ದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿ ನಿಂತ ರಿಚಾ ಘೋಷ್ ಮ್ತು ಜೆಮಿಮಾ ರೋಡ್ರಿಗಸ್ ತಾಳ್ಮೆಯುತ ಬ್ಯಾಟಿಂಗ್ಸ್ ನಡೆಸಿ ಉತ್ತಮ ಇನಿಂಗ್ಸ್ ಕಟ್ಟಿದರು. ಈ ಮೂಲಕ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ನಿಲ್ಲಿಸಿದ್ದರು. ಆದರೆ ಉಭಯ ಆಟಗಾರ್ತಿಯರ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡ ಭಾರತ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿತು.
117 ಎಸೆತ ಎದುರಿಸಿ 13 ಬೌಂಡರಿ ಬಾರಿಸಿದ ರಿಚಾ 96 ರನ್ಗೆ ವಿಕೆಟ್ ಕಳೆದುಕೊಂಡು ಕೇವಲ 4 ರನ್ ಅಮತರದಿಂದ ಶತಕ ವಂಚಿತರಾದರು. ಜೆಮಿಮಾ 3 ಬೌಂಡರಿ ಬಾರಿಸಿ 44 ರನ್ ಗಳಿಸಿದರು. ಇವರಿಬ್ಬರ ವಿಕೆಟ್ ಪತನಗೊಂಡರೂ ಕೂಡ ಭಾರತಕ್ಕೆ ಗೆಲ್ಲುವ ಅವಕಾಶ ಬೆಟ್ಟದಷ್ಟಿತ್ತು. ಆದರೆ ಬಳಿಕ ಬಂದ ಯಾವುದೇ ಆಟಗಾರ್ತಿಯರು ಕೂಡ ನಿಂತು ಆಡುವಲ್ಲಿ ಯಶಸ್ವಿಯಾಗಲಿಲ್ಲ.
ಇದನ್ನೂ ಓದಿ IND vs SA: ದ್ವಿತೀಯ ಪಂದ್ಯಕ್ಕೆ ಜಡೇಜಾ ಲಭ್ಯ; ಆಡುವ ಬಳಗದಲ್ಲಿ ಬದಲಾವಣೆ
ಲೆಕ್ಕ ಭರ್ತಿಗೆ ಆಡುವಂತೆ ತಂಡದಲ್ಲಿರುವ ನಾಯಕಿ ಹರ್ಮನ್ಪ್ರೀತ್ ಕೌರ್ ಕೇವಲ 5 ರನ್ಗಳಿಸಿ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿದರು. ಕನಿಷ್ಠ 20 ರನ್ ಬಾರಿಸುತ್ತಿದ್ದರೆ ಪಂದ್ಯ ಗೆಲ್ಲಬಹುದಿತ್ತು. ಅಮನ್ಜೋತ್ ಕೌರ್(4), ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಪೂಜಾ ವಸ್ತ್ರಾಕರ್(8) ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು.
6ನೇ ಕ್ರಮಾಂಕದಲ್ಲಿ ಆಡಲಿಳಿದ ಆಲ್ರೌಂಡರ್ ದೀಪ್ತಿ ಶರ್ಮ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಪಟ್ಟರೂ ಕೂಡ ಮತ್ತೊಂದು ತುದಿಯಲ್ಲಿ ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ. 24 ರನ್ ಗಳಿಸಿ ಅಜೇಯರಾಗಿ ಉಳಿದರು. ಬೌಲಿಂಗ್ನಲ್ಲಿಯೂ ಮಿಂಚಿದ ಅವರು ಕೇವಲ 38 ರನ್ ನೀಡಿ ಪ್ರಮುಖ 5 ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಪಂದ್ಯ ಸೋಲಿನಿಂದಾಗಿ ಈ ಪ್ರದರ್ಶನ ವ್ಯರ್ಥವಾಯಿತು.
ಎಲ್ಲಿಸ್ ಪೆರ್ರಿ-ಲಿಚ್ಫೀಲ್ಡ್ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟಿಂಗ್ ನಡಸಿದ ಆಸ್ಟ್ರೇಲಿಯಾ ಪರ ಎಲ್ಲಿಸ್ ಪೆರ್ರಿ ಮತ್ತು ಫೋಬೆ ಲಿಚ್ಫೀಲ್ಡ್ ಅರ್ಧಶತಕ ಬಾರಿಸಿ ಮಿಂಚಿದರು. 6 ಬೌಂಡರಿ ನೆರವಿನಿಂದ ಫೋಬೆ ಲಿಚ್ಫೀಲ್ಡ್ 63 ರನ್ ಗಳಿಸಿದರೆ, ಪೆರ್ರಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಭರ್ತಿ 50 ರನ್ ಗಳಿಸಿದರು. ಪೆರ್ರಿ ಮೊದಲ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಮೂರು ಸಿಕ್ಸರ್ ಚಚ್ಚಿದ ಅಲಾನಾ ಕಿಂಗ್ ಅಜೇಯ 28 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಬೌಲಿಂಗ್ನಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ 47 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು.