Site icon Vistara News

Asian Games : ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಅವಿನಾಶ್ ಅವಿನಾಶ್ ಸಾಬ್ಲೆ

Avinash Sable

ಹ್ಯಾಂಗ್ಝ್​: 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ (Asian Games) ಭಾನುವಾರ ನಡೆದ ವಿಶ್ವ ಚಾಂಪಿಯನ್ ಶಿಪ್ ನ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಓಟಗಾರ ಅವಿನಾಶ್ ಸಾಬ್ಲೆ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಏಷ್ಯಾಡ್​​ನಲ್ಲಿ ತನ್ನ ಅಥ್ಲೆಟಿಕ್ಸ್ ಅಭಿಯಾನವನ್ನು ಪ್ರಾರಂಭಿಸಿದ ಭಾರತವು ಟ್ರ್ಯಾಕ್ ಮತ್ತು ಫೀಲ್ಡ್​ನಲ್ಲಿ ಸಾಬ್ಲೆ ಮೂಲಕ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಂಡಿತು. ಅವರು 3000 ಮೀಟರ್ ಓಟವನ್ನು 8: 19.50 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೊದಲ ಸ್ಥಾನ ಪಡೆದರು.

ಏಷ್ಯನ್ ಗೇಮ್ಸ್​​ನಲ್ಲಿ 3000 ಮೀಟರ್ ಸ್ಟೀಪಲ್​ಚೇಸ್​​ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಪುರುಷರ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸಾಬ್ಲೆ ಪಾತ್ರರಾಗಿದ್ದಾರೆ. ಹ್ಯಾಂಗ್ಝೌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್​ನಲ್ಲಿ ಭಾರತದ ಖಾತೆಯನ್ನು ತೆರೆದಿರುವ 29 ವರ್ಷದ ಸಾಬ್ಲೆ , ಸುಧಾ ಸಿಂಗ್ ಅವರೊಂದಿಗೆ ವಿಶೇಷ ಪಟ್ಟಿಯಲ್ಲಿ ಸೇರಿದ್ದಾರೆ. ಗುವಾಂಗ್​ನಲ್ಲಿ 2010 ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಸುಧಾ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ : Asian Games 2023 : ಏಷ್ಯನ್ ಗೇಮ್ಸ್​ನಲ್ಲಿ ನೇಪಾಳ ತಂಡ ಸೃಷ್ಟಿಸಿದ ಮಾಡಿದ ದಾಖಲೆಗಳ ವಿವರ ಇಲ್ಲಿದೆ

ಏಷ್ಯನ್ ಗೇಮ್ಸ್ ನ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಸಾಬ್ಲೆ ಐತಿಹಾಸಿಕ ಚಿನ್ನ ಗೆದ್ದ ನಂತರ, ಶಾಟ್​ಪಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಮೂಲಕ ಭಾರತದ ಪದಕಗಳ ಪಟ್ಟಿಯನ್ನು ಹಿಗ್ಗಿಸಿದರು.ಪುರುಷರ ಫೈನಲ್ನಲ್ಲಿ ತೂರ್ ತಮ್ಮ ಸೌದಿ ಅರೇಬಿಯಾದ ಪ್ರತಿಸ್ಪರ್ಧಿಯನ್ನು ಸೋಲಿಸಿದರು. 2018 ರ ಜಕಾರ್ತಾ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿರವು ತೂರ್​ ತಮ್ಮ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 20.36 ಮೀಟರ್ ಎಸೆಯುವ ಮೂಲಕ ಮೊಹಮ್ಮದ್ ದಾವುಡಾ ಟೊಲೊ ಅವರನ್ನು ಸೋಲಿಸಿದರು.

ಗಾಲ್ಫ್​ನಲ್ಲಿ ಚಿನ್ನದ ಪದಕ

ಶ್ರೀಮಂತರ ಕ್ರೀಡೆ ಎಂದೇ ಹೆಸರಾದ ಗಾಲ್ಫ್ ನಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದು ಸದ್ದು ಮಾಡಿದೆ. 25 ವರ್ಷದ ಕರ್ನಾಟಕದ ಕುವರಿ ಅದಿತಿ ಅಶೋಕ್(Aditi Ashok) ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​ನಲ್ಲಿ (Asian Games 2023) ಗಾಲ್ಫ್ ಕೋರ್ಟ್​ನಲ್ಲಿ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : Asian Games 2023: ಶೂಟಿಂಗ್​ನಲ್ಲಿ ಮತ್ತೊಂದು ಪದಕ; ಕಂಚಿಗೆ ಗುರಿಯಿಟ್ಟ ಕಿನಾನ್ ಚೆನೈ

ಮೂರನೇ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಅದಿತಿ ಅಶೋಕ್‌ ಇಂದು ನಡೆದ ಅಂತಿಮ ಸುತ್ತಿನಲ್ಲಿ 267 ಅಂಕ ಪಡೆದು ಬೆಳ್ಳಿ ಪದಕ ಜಯಿಸಿದರು. ಇದು ಗಾಲ್ಫ್ ನಲ್ಲಿ ಭಾರತದಕ್ಕೆ ಒಲಿದ ಮೊದಲ ಪದಕವಾಗಿದೆ. 2 ಅಂಕದ ಹಿನ್ನಡೆಯಿಂದ ಚಿನ್ನದ ಪದಕ ಕೈತಪ್ಪಿತು. ಥಾಯ್ಲೆಂಡ್​ನ ಅರ್ಪಿಚಯಾ ಯುಬೊಲ್​ಗೆ ಚಿನ್ನ ಒಲಿಯಿತು.

ಶನಿವಾರ ನಡೆದ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಅದಿತಿ ಕೇವಲ 61 ಅವಕಾಶಗಳನ್ನು (11 ಅಂಡರ್‌) ತೆಗೆದುಕೊಂಡರು. ಮೂರು ಸುತ್ತುಗಳ ಬಳಿಕ 194 ಸ್ಕೋರ್‌ (22 ಅಂಡರ್‌) ಹೊಂದಿದ್ದರು. ಅರ್ಪಿಚಯಾ ಯುಬೊಲ್ (201) ಮತ್ತು ಚೀನಾದ ಲಿನ್ ಕ್ಸಿಯು (202) ಅವರು ಬಳಿಕದ ಸ್ಥಾನದಲ್ಲಿದ್ದರು.

ಇದನ್ನೂ ಓದಿ Asian Games 2023: ಮಿಕ್ಸೆಡ್‌ ಡಬಲ್ಸ್​ನಲ್ಲಿ ಚಿನ್ನ ಗೆದ್ದ ಬೋಪಣ್ಣ-ರುತುಜಾ ಜೋಡಿ

Exit mobile version