Site icon Vistara News

CWG- 2022 | ಸ್ಟೀಪಲ್‌ಚೇಸ್‌ನಲ್ಲಿ ರಜತ ಪದಕ ಗೆದ್ದ ಅವಿನಾಶ್‌ ಸಾಬ್ಲೆ

CWG-2022

ಬರ್ಮಿಂಗ್ಹಮ್‌ : ಭಾರತದ ಸ್ಟೀಪಲ್‌ಚೇಸ್‌ ಓಟಗಾರ ಅವಿನಾಶ್‌ ಮುಕುಂದ್ ಸಾಬ್ಲೆ ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಗೇಮ್ಸ್‌ (CWG- 2022) ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಅವರ ಸಾಧನೆಯೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೨೮ಕ್ಕೆ ಏರಿಕೆಯಾಗಿದೆ.

೩೦೦೦ ಮೀಟರ್‌ ಸ್ಟೀಪಲ್‌ ಚೇಸ್‌ ಒಟವನ್ನು 8:11:20 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಅವರು ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರಲ್ಲದೆ, ರಜತ ಪದಕಕ್ಕೆ ಪಾತ್ರರಾದರು. ಇದು ಭಾರತಕ್ಕೆ ಕಾಮನ್ವೆಲ್ತ್ ಗೇಮ್ಸ್‌ ಇತಿಹಾಸದಲ್ಲಿ ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ಲಭಿಸಿದ ಮೊದಲ ಪದಕವಾಗಿದೆ.

ಮೊದಲ ಸ್ಥಾನ ಪಡೆದುಕೊಂಡಿದ್ದ ಕೀನ್ಯಾದ ಅಬ್ರಾಹಮ್‌ ಕಿಬಿಯೋಟ್‌ ಅವರಿಗಿಂತ ಕೇವಲ 0.05 ಸೆಕೆಂಡ್‌ಗಳಷ್ಟು ಹಿಂದೆ ಉಳಿದ ಅವರು ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು.

ಆರಂಭದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಅವಿನಾಶ್‌ ಸಾಬ್ಲೆ,ಕೊನೆಯ ಸಾವಿರ ಕಿಲೋಮೀಟರ್‌ ಬಾಕಿ ಇರುವ ವೇಳೆ ವೇಗಮ ವೃದ್ಧಿಸಿಕೊಂಡು ಎರಡನೆಯವರಾಗಿ ಅಂತಿಮ ಹಂತಕ್ಕೆ ತಲುಪಿದರು.

Exit mobile version