Site icon Vistara News

Pakistan Cricket Team : ಹಮಾಸ್​ಗೆ ಬೆಂಬಲ ನೀಡಿದ ಪಾಕ್​ ಆಟಗಾರನಿಗೆ ಪಾಕಿಸ್ತಾನದಲ್ಲೇ ಶಿಕ್ಷೆ !

Azam Khan

ನವದೆಹಲಿ: ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟ್ ತಾರೆ (Pakistan Cricket Team) ಅಜಂ ಖಾನ್ (Azam Khan) ತಪ್ಪು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸ್ಫೋಟಕ ಬ್ಯಾಟರ್​ ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಟಿ 20 ಕಪ್ ಪಂದ್ಯದ ವೇಳೆ ದಿರಸು ಮತ್ತು ಕ್ರಿಕೆಟ್ ಸಲಕರಣೆಗಳ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ವಿಕೆಟ್ ಕೀಪರ್- ಬ್ಯಾಟರ್​ಗೆ ಪಂದ್ಯದ ಶುಲ್ಕದ 50% ದಂಡ ವಿಧಿಸಿದೆ ಎಂದು ವರದಿಯಾಗಿದೆ.

ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಕರಾಚಿ ವೈಟ್ಸ್ ಮತ್ತು ಲಾಹೋರ್ ಬ್ಲೂಸ್ ನಡುವಿನ ಪಂದ್ಯದ ವೇಳೆ ಯುವ ಬ್ಯಾಟ್ಸ್ಮನ್ ತಮ್ಮ ಬ್ಯಾಟ್ನಲ್ಲಿ ಪ್ಯಾಲೆಸ್ಟೈನ್ ಧ್ವಜವನ್ನು ಪ್ರದರ್ಶಿಸಿದ್ದರು. ಆದಾಗ್ಯೂ, ಈ ಕ್ರಮವು ಕ್ರಿಕೆಟ್ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ್ಲ ಹಾಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ತನ್ನ ಎಲ್ಲಾ ಬ್ಯಾಟ್ಗಳು ಒಂದೇ ರೀತಿಯ ಸ್ಟಿಕ್ಕರ್​ಗಳನ್ನು ಹೊಂದಿವೆ ಎಂಬುದಾಗಿಯೂ ಅಜಮ್ ನಂತರ ಸಮರ್ಥಿಸಿಕೊಂಡಿದ್ದರು. ದೊಡ್ಡ ವಿಷಯವೇ ಅಲ್ಲ ಎಂದು ಹೇಳಿದ್ದರು.

“ಯುವ ಬ್ಯಾಟ್ಸ್​ಮನ್​ಗೆ ಪಂದ್ಯದ ಶುಲ್ಕದ 50% ದಂಡ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಅಜಮ್​ ತನ್ನ ಬ್ಯಾಟ್​ನಲ್ಲಿ ಅನುಮೋದಿಸದ ಲೋಗೋವನ್ನು (ಪ್ಯಾಲೆಸ್ಟೈನ್ ಧ್ವಜ) ಪ್ರದರ್ಶಿಸಿದ್ದರು. ಈ ಹಿಂದೆಯೂ ಅವರಿಗೆ ರೆಫರಿ ಎಚ್ಚರಿಕೆ ನೀಡಿದ್ದರು. ಆದರೆ ತಪ್ಪು ಪುನರಾವರ್ತನೆ ಮಾಡಿದ್ದಾರೆ, ಎಂಬುದಾಗಿ ಪಾಕಿಸ್ತಾನ ಕ್ರಿಕೆಟ್​ ಸಂಸ್ಥೆಯ ಮೂಲಗಳು ಹೇಳಿವೆ.

ಆಶ್ಚರ್ಯಕರವಾಗಿ, ಅಜಂ ವಿವಾದಾತ್ಮಕ ಸ್ಟಿಕ್ಕರ್ ಅನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ಅವರು ಯಾವುದೇ ಮುನ್ಸೂಚನೆಗಳಿಲ್ಲದೆ ಇದನ್ನು ಬಳಸಿದ್ದಾರೆ ಎಂದು ವರದಿ ಹೇಳಿದೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು.

ಇದನ್ನೂ ಓದಿ : IPL 2024: ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ; ಪಾಂಡ್ಯ ಮುಂಬೈ ಪಾಲು!

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್​ ವೇಳೆ ಪಾಕಿಸ್ತಾನ ರಾಷ್ಟ್ರೀಯ ತಂಡದ ವಿಕೆಟ್​ ಕೀಪರ್​ ಮೊಹಮ್ಮದ್​ ರಿಜ್ವಾನ್​ ಶ್ರೀಲಂಕಾ ವಿರುದ್ದ ಗೆಲುವನ್ನು ‘ಗಾಜಾದ ಸಹೋದರ ಸಹೋದರಿಯರಿಗೆ ಅರ್ಪಣೆ ಎಂದು ಹೇಳಿದ್ದರು. ಅವರ ಟ್ವೀಟ್ ವಿವಾದ ಹುಟ್ಟು ಹಾಕಿತ್ತು. ಆದರೆ, ಅವರು ಕ್ರೀಡಾಂಗಣದ ಹೊರಗೆ ಈ ಟ್ವೀಟ್ ಮಾಡಿದ್ದ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳುವುದು ಸಾಧ್ಯವೇ ಇರಲಿಲ್ಲ.

ಕ್ರೀಡಾಂಗಣದಲ್ಲಿ ರಾಜಕೀಯಕ್ಕೆ ಅವಕಾಶ ಇಲ್ಲ

ಐಸಿಸಿಯ ಜೆರ್ಸಿ ಕಿಟ್​ ಮತ್ತು ಆಟದ ಸಲಕರಣೆಗಳ ಕುರಿತ ಐಸಿಸಿ ನಿಯಮವು, ಆಟಗಾರರು ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಪ್ರದರ್ಶಿಸುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಹೀಗಾಗಿ ಅಜಮ್​ ಕೃತ್ಯ ಚರ್ಚೆಗೆ ಈಡಾಗಿದೆ. ಕೆಲವರು ಅಜಮ್ ಕೃತ್ಯವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಕ್ರಿಕೆಟ್ ಮತ್ತು ರಾಜಕೀಯವು ಪ್ರತ್ಯೇಕವಾಗಿರಬೇಕು ಎಂದು ವಾದಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಂತೆ, ಪಿಸಿಬಿ ರಾವಲ್ಪಿಂಡಿಯಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಿದೆ. ಕ್ಯಾನ್ಬೆರಾದ ಮನುಕಾ ಓವಲ್ನಲ್ಲಿ ಡಿಸೆಂಬರ್ 6 ರಂದು ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯದೊಂದಿಗೆ ಪಾಕಿಸ್ತಾನ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಟೆಸ್ಟ್ ಡಿಸೆಂಬರ್ 16 ರಂದು ಪರ್ತ್ನ ಪರ್ತ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.

Exit mobile version