1. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ; ಯುವ ನಾಯಕನಿಗೆ ಪಟ್ಟ
ಬೆಂಗಳೂರು: ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷರ (BJP State President) ನೇಮಕವಾಗಿದೆ. ಶಿಕಾರಿಪುರ ಶಾಸಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಪ್ರಭಾವಿ ಯುವ ನಾಯಕ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ನೇಮಕವನ್ನು ಪ್ರಕಟಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: BY Vijayendra: ಚತುರ ಸಂಘಟಕ, ನಿಪುಣ ರಾಜಕೀಯ ತಂತ್ರಗಾರ ಬಿ ವೈ ವಿಜಯೇಂದ್ರ
ಈ ಸುದ್ದಿಯನ್ನೂ ಓದಿ: BY Vijayendra : ರಾಜ್ಯ ಬಿಜೆಪಿಗೆ ಇನ್ನು ಬಿ ವೈ ವಿಜಯೇಂದ್ರ ಸಾರಥ್ಯ; ಆಯ್ಕೆಗೆ 10 ಕಾರಣಗಳು
2. ಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್! ದಿಕ್ಕಾಪಾಲಾಗಿ ಓಡಿದ ಭಕ್ತರು!
ಹಾಸನ: ನವೆಂಬರ್ 10ರ ಶುಕ್ರವಾರ ಹಾಸನಾಂಬೆ ದೇವಾಲಯದ (Hasanamba Temple) ಬಳಿ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು. ಕರೆಂಟ್ ಶಾಕ್‌ನಿಂದಾಗಿ ದಿಢೀರ್ ನೂಕು ನುಗ್ಗಲು ಉಂಟಾಗಿ, ಧರ್ಮ ದರ್ಶನದ ಸರತಿ ಸಾಲಿನ ನಿಂತಿದ್ದ ಮಹಿಳೆಯರು ದಿಕ್ಕಾಪಾಲಾಗಿ ಓಡಿದ್ದಾರೆ. ಗಾಬರಿಯಲ್ಲಿ ಒಬ್ಬರ ಮೇಲೆ ಒಬ್ಬರು ಬಿದ್ದು ನೂಕು ನುಗ್ಗಲು ಉಂಟಾಗಿತ್ತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
3. ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಕೊನೆಗೂ ಬಂಧನ
ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ (Exam Scam) ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಅಫಜಲಪುರ- ಮಹಾರಾಷ್ಟ್ರ ಗಡಿಯಲ್ಲಿ ಕಲಬುರಗಿ ಜಿಲ್ಲೆ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
4. ನ. 14ರಂದು ಈ ಬಾರಿ ರಜೆ, ಹಾಗಿದ್ದರೆ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಯಾವಾಗ?
ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ (Jawaharlal Nehru) ಅವರ ಜನ್ಮದಿನವಾದ ನವೆಂಬರ್ 14ನ್ನು (November 14) ಮಕ್ಕಳ ದಿನಾಚರಣೆಯಾಗಿ Children’s day) ಶಾಲೆಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಈ ಬಾರಿ ನವೆಂಬರ್ 14ರಂದು ದೀಪಾವಳಿಯ ಹಬ್ಬದಲ್ಲಿ (Deepavali Festival) ಬರುವ ಬಲಿ ಪಾಡ್ಯಮಿ ನಿಮಿತ್ತ ರಜೆ ಇದೆ. ಹಾಗಿದ್ದರೆ ಈ ಬಾರಿ ಮಕ್ಕಳ ದಿನಾಚರಣೆ ಹೇಗೆ ಮಾಡುವುದು ಎನ್ನುವುದು ದೊಡ್ಡ ಪ್ರಶ್ನೆ. ಇದಕ್ಕೆ ಶಿಕ್ಷಣ ಇಲಾಖೆಯೇ (Education department) ಪರಿಹಾರ ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
5. ರಾಜಧಾನಿ ಹೊರ ವಲಯದಲ್ಲಿ ಮತ್ತೊಂದು ಟೋಲ್; ಯಾವಾಗ ಆರಂಭ?
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಟೋಲ್ ದರ ಹೆಚ್ಚಳಕ್ಕೆ ವಾಹನ ಸವಾರರು ಈಗಾಗಲೇ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ರಾಜಧಾನಿಯ ಹೊರ ವಲಯದಲ್ಲಿ ಮತ್ತೊಂದು ಕಡೆ ವಾಹನ ಸವಾರರಿಗೆ ಸುಂಕದ ಹೊರೆ (STRR Toll) ಬೀಳುವ ಸಾಧ್ಯತೆ ಇದೆ. ಏಕೆಂದರೆ, ಇನ್ನು ಮುಂದೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಲ್ಲಿ (ಎಸ್‌ಟಿಆರ್‌ಆರ್) ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗವನ್ನು ಬಳಸುವ ವಾಹನಗಳು ಕೂಡ ಟೋಲ್ ಕಟ್ಟಬೇಕಾಗುತ್ತದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Namma Metro : ಕೆಲವೇ ವರ್ಷದಲ್ಲಿ ಬಿಡದಿವರೆಗೂ ಓಡಲಿದೆ ನಮ್ಮ ಮೆಟ್ರೋ
6. ರಾಜ್ಯದಲ್ಲಿ ತಗ್ಗಿದ ಮಳೆ; ಏರಲಿದೆ ಕನಿಷ್ಠ ತಾಪಮಾನ
ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ (Rain News) ಕಡಿಮೆ ಆಗಿದೆ. ನಾಳೆ (ನ.11) ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Karnataka Weather Forecast) ಇದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣಹವೆ ಇರಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
7. ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸವಾಲಾಗುವುದೇ ಬಾಂಗ್ಲಾದೇಶ?
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ 2023ರ (ICC World Cup 2023) 42ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಆಸ್ಟ್ರೇಲಿಯಾ ಆರು ಪಂದ್ಯಗಳ ಗೆಲುವಿನ ಹಾದಿಯಲ್ಲಿ ಸಾಗಿ ಸೆಮಿಫೈನಲ್ ತಲುಪಿದೆ. ಬಾಂಗ್ಲಾದೇಶವು ಪ್ಲೇಆಫ್ನಿಂದ ಹೊರಗುಳಿದಿದೆ. ಆದರೆ ಅಗ್ರ ಎಂಟರಲ್ಲಿ ಉಳಿಯಲು ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಬಾಂಗ್ಲಾ ಬಳಗ ನೋಡುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
8. ಈ ವಾರ ಒಟಿಟಿಯಲ್ಲಿ ರಿಲೀಸ್ ಆಗುವ ಸಿನಿಮಾ, ಶೋಗಳಿವು!
ಬೆಂಗಳೂರು: ಒಟಿಟಿ ವೀಕ್ಷಕರಿಗೆ ಈ ವಾರ ಹಬ್ಬದ ವಾತಾವರಣ. ಯಾಕೆಂದರೆ ವಿವಿಧ ಅಭಿರುಚಿಗೆ ತಕ್ಕಂತೆ ಆ್ಯಕ್ಷನ್, ಡ್ರಾಮಾ, ರೊಮ್ಯಾನ್ಸ್, ಮಿಸ್ಟ್ರಿ ಹೀಗೆ ವೈವಿಧ್ಯಮಯ ಸಿನಿಮಾ, ಸೀರಿಸ್‌ಗಳು ಪ್ರಸಾರವಾಗುತ್ತಿವೆ (OTT releases). ಹೇಗೂ ದೀಪಾವಳಿ ಪ್ರಯುಕ್ತ ರಜೆ ಇರುವುದರಿಂದ ನೆಚ್ಚಿನ ಸಿನಿಮಾ ನೋಡುತ್ತ ಕಾಲ ಕಳೆಯಬಹುದು ಎನ್ನುವುದೇ ಹಲವರ ಪಾಲಿಗೆ ʼಡಬಲ್ ಧಮಾಕʼ. ಹಾಗಾದರೆ ಒಟಿಟಿಯಲ್ಲಿ ಈ ವಾರದ ರಿಲೀಸ್ ಯಾವುವು ಎನ್ನುವುದನ್ನು ನೋಡೋಣ: ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
9. ನೌಕರರ ಖಾತೆಗೆ ಪಿಎಫ್ ಬಡ್ಡಿ ಜಮೆ ಆರಂಭ; ಬ್ಯಾಲೆನ್ಸ್ ಹೀಗೆ ಪರಿಶೀಲಿಸಿ
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation-EPFO) ಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ನೌಕರರಿಗೆ ದೀಪಾವಳಿ ಉಡುಗೊರೆ ಸಿಕ್ಕಂತಾಗಿದೆ (Deepavali Gift). 2022-23ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆ ಹೂಡಿಕೆಯ ಮೇಲಿನ ಬಡ್ಡಿದರ 8.15% ಇದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
10. ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ; ರಚಿನ್ ರವೀಂದ್ರ
ಬೆಂಗಳೂರು: ವಿಶ್ವಕಪ್ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಮನೆ ಮಾತಾಗಿರುವ ನ್ಯೂಜಿಲ್ಯಾಂಡ್ ತಂಡದ ಆಟಗಾರ ರಚಿನ್ ರವೀಂದ್ರ(Rachin Ravindra) ಅವರು ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ