ಲಹೋರ್: ನಿರೀಕ್ಷೆಯಂತೆ ಬಾಬರ್ ಅಜಂ(Babar Azam) ಅವರು ಮತ್ತೆ ಪಾಕಿಸ್ತಾನ ತಂಡದ ನಾಯಕನಾಗಿ ಮರು ಆಯ್ಕೆಗೊಂಡಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ನಾಯಕನಾಗಿದ್ದ ಶಾಹೀನ್ ಶಾ ಅಫ್ರೀದಿ(Shaheen Afridi) ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರು ಭಾನುವಾರ ಬಾಬರ್ ನಾಯಕದ ಸುದ್ದಿಯನ್ನು ಪ್ರಕಟಿಸಿದರು.
ಕೆಲವು ದಿನಗಳಿಂದಲೇ ಬಾಬರ್ ಮತ್ತೆ ನಾಯಕನಾಗುತ್ತಾರೆ ಮತ್ತು ಈಗಾಗಲೇ ಪಾಕ್ ಕ್ರಿಕೆಟ್ ಮಂಡಳಿ ಬಾಬರ್ ಜತೆ ಚರ್ಚಿಸಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಈ ವರದಿ ನಿಜವಾಗಿದೆ. ಬಾಬರ್ ನಾಯಕನಾಗಿ ಮರು ಆಯ್ಕೆ ಆಯ್ಕೆಯಾಗಿದ್ದಾರೆ.
Babar Azam appointed as white-ball captain
— Pakistan Cricket (@TheRealPCB) March 31, 2024
Following unanimous recommendation from the PCB’s selection committee, Chairman PCB Mohsin Naqvi has appointed Babar Azam as white-ball (ODI and T20I) captain of the Pakistan men's cricket team. pic.twitter.com/ad4KLJYRMK
ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್ ವಿರುದ್ಧ ಪಾಕ್ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಅಫ್ರೀದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.
Babar Azam back at the helm 👀
— ICC (@ICC) March 31, 2024
More from Pakistan's selection committee ahead of the #T20WorldCup 👇https://t.co/ZsMbLhoJnx
ಇದನ್ನೂ ಓದಿ Babar Azam: ಕೊಹ್ಲಿಯ ಸಂಭ್ರಮಾಚರಣೆಯನ್ನು ಕಾಪಿ ಮಾಡಿದ ಬಾಬರ್ ಅಜಂ
ಟೆಸ್ಟ್ ಕ್ರಿಕೆಟ್ನಲ್ಲಿ ಶಾನ್ ಮಸೂದ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಇದೆ ಜೂನ್ 1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತೆ ಬಾಬರ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನಡೆಯಲಿದೆ. ಬಾಬರ್ ಕೂಡ ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ‘ಬ್ಯಾಕ್'( ಹಿಂದಿರುಗಿರುವೆ) ಎಂದು ಬರೆದುಕೊಂಡಿದ್ದಾರೆ.
Back 🇵🇰 pic.twitter.com/WzITu2yflS
— Babar Azam (@babarazam258) March 29, 2024
ಬಾಬರ್ ನಾಯಕತ್ವದ ಸಾಧನೆ
ಬಾಬರ್ ಅಜಮ್ ಪಾಕಿಸ್ತಾನದ ನಾಯಕನಾಗಿ 133 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 78 ಪಂದ್ಯಗಳು ಗೆದ್ದರೆ, 43 ಪಂದ್ಯಗಳಲ್ಲಿ ಸೋತಿದ್ದಾರೆ. ಒಂದು ಟೈ ಮತ್ತು ನಾಲ್ಕು ಪಂದ್ಯ ಡ್ರಾಗೊಂಡಿದೆ. ಏಕದಿನ ವಿಶ್ವಕಪ್ ಟೂರ್ನಿ ಹೊರತುಪಡಿಸಿ ಉಳಿದ ಎಲ್ಲ ಸರಣಿಯಲ್ಲೂ ಬಾಬರ್ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿತ್ತು. ಇದೀಗ ನೆಲ ಕಚ್ಚಿರುವ ಪಾಕ್ ತಂಡವನ್ನು ಗೆಲುವಿನ ಟ್ರ್ಯಾಕ್ಗೆ ಮರಳಿ ತರುವ ನಿಟ್ಟಿನಲ್ಲಿ ಮತ್ತೆ ಬಾಬರ್ಗೆ ನಾಯಕನ ಪಟ್ಟ ಕಟ್ಟಲು ಪಿಸಿಬಿ ಮುಂದಾಗಿದೆ. ಇದೇ ವರ್ಷ ಟಿ20 ವಿಶ್ವಕಪ್ ಕೂಡ ನಡೆಯಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.