ನವ ದೆಹಲಿ: ವಿಕೆಟ್ ಕೀಪರ್‌ನ ಗ್ಲೌಸ್ ಧರಿಸಿ ಬಾಲ್ ಹಿಡಿದು ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ Babar Azam ನಿಯಮ ಉಲ್ಲಂಘಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪಾಕಿಸ್ತಾನ ತಂಡವು 5 ರನ್‌ಗಳ ದಂಡ ಕಟ್ಟಬೇಕಾಯಿತು.
ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯ ಶುಕ್ರವಾರ ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು 275 ರನ್ ಬಾರಿಸಿತ್ತು. 276 ರನ್ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ಆರಂಭದಿಂದಲೇ ರನ್ ಹೊಡೆಯಲು ಪರದಾಡುತ್ತಿತ್ತು. 29ನೇ ಓವರ್‌ನಲ್ಲಿ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಅಜಾಮ್ ವಿಕೆಟ್ ಹಿಂದೆ ನಿಂತು ಕೀಪರ್ ಗ್ಲೌಸ್ ಹಾಕಿಕೊಂಡು ಬಾಲ್ ಹಿಡಿದ ದೃಶ್ಯ ಕಂಡುಬಂದಿದೆ.
ಇದು ಕ್ರಿಕೆಟ್ ನಿಯಮದ ಉಲ್ಲಂಘನೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 5 ರನ್‌ಗಳನ್ನು ನೀಡಲಾಯಿತು! ಇಷ್ಟಾಗಿಯೂ ವೆಸ್ಟ್ ಇಂಡೀಸ್ ತಂಡವನ್ನು 155ಕ್ಕೆ ಆಲೌಟ್ ಮಾಡುವಲ್ಲಿ ಪಾಕಿಸ್ತಾನ ತಂಡ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಪಾಕ್ 120 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ, ʼಬಾಬರ್ ಅಜಾಮ್ ಅವರ ಈ ವಿಚಿತ್ರ ವರ್ತನೆ ಅವರ ಉದ್ಧಟತನವನ್ನು ತೋರಿಸುತ್ತದೆ. ಅನವಶ್ಯಕವಾಗಿ ಕೀಪರ್ ಗ್ಲೌಸ್ ಹಾಕಿ ಫೀಲ್ಡಿಂಗ್ ಮಾಡಿ ಬೇಜವಾಬ್ದಾರಿತನವನ್ನು ತೋರಿಸಿದ್ದಾರೆʼ ಎಂಬ ಟೀಕೆಗಳು ಕೇಳಿ ಬಂದಿವೆ.
ಕ್ರಿಕೆಟ್‌ನ ʼ28.1 ರಕ್ಷಣಾ ಸಾಧನಗಳʼ ನಿಯಮದ ಪ್ರಕಾರ ವಿಕೆಟ್ ಕೀಪರ್ ಹೊರತುಪಡಿಸಿ ಯಾವುದೇ ಫೀಲ್ಡರ್‌ಗಳು ಗ್ಲೌಸ್ ಅಥವಾ ಗಾರ್ಡ್‌ಗಳನ್ನು ಧರಿಸಿ ಫೀಲ್ಡಿಂಗ್ ಮಾಡುವ ಹಾಗಿಲ್ಲ. ಅಂಪೈರ್‌ಗಳ ಅನುಮತಿಯನ್ನು ಪಡೆದು ಮಾತ್ರ ಕೈ ಅಥವಾ ಬೆರಲುಗಳಿಗೆ ಪೆಟ್ಟಾಗದಂತೆ ಸಣ್ಣ ಪ್ರಮಾಣದ ರಕ್ಷಾ ಕವಚ ಧರಿಸಬಹುದು.
ಇದನ್ನೂ ಓದಿ: Mithali raj | ಆಟಗಾರ್ತಿಯಾಗಿ ಇನಿಂಗ್ಸ್ ಅಂತ್ಯಗೊಳಿಸಿದ ಮಿಥಾಲಿ ರಾಜ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ