ಕೊಲಂಬೊ: ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ(Lanka Premier League 2023) ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಟೂರ್ನಿಯಲ್ಲಿ ಚೊಚ್ಚಲ ಟಿ20 ಶತಕ ಸಿಡಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(Babar Azam) ತಮ್ಮ ಪ್ರದರ್ಶನಕ್ಕಿಂತ ಬೇರೆಯೇ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ನಮಾಜ್ ಮಾಡಲು ಸಮಯವಾಗುತ್ತಿದೆ, ಬೇಗ ಸಂದರ್ಶನವನ್ನು ಮುಗಿಸಿದರೆ ಒಳಿತು ಎಂದು ಅಳಲು ತೋಡಿಕೊಂಡ ವಿಡಿಯೊ ವೈರಲ್ ಆಗಿದೆ.
ಕ್ಯಾಂಡಿಯ ಪಲೆಕೆಲೆ ಕ್ರೀಡಾಂಗಣದಲ್ಲಿ ಗಾಲೆ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಬಾಬರ್ ಶತಕ ಸಿಡಿಸುವ ಮೂಲಕ ಯುನಿವರ್ಸ್ ಬಾಸ್(Universe Boss) ಖ್ಯಾತಿಯ ಕ್ರಿಸ್ ಗೇಲ್(Chris Gayle) ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಜತೆಗೆ ತಮ್ಮ ಟಿ20 ಕ್ರಿಕೆಟ್‌ನಲ್ಲಿ 10ನೇ ಶತಕ ಪೂರ್ಣಗೊಳಿಸಿದ್ದಾರೆ. ಕ್ರೀಸ್ ಗೇಲ್ ಬಳಿಕ ಅಧ್ಯಧಿಕ 10 ಟಿ20 ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಸ್ಫೋಟಕ ಇನಿಂಗ್ಸ್
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಬಾಬರ್ ಟೈಟನ್ಸ್ ಬೌಲರ್ಗಳನ್ನು ದಂಡೆತ್ತಿ ಹೋಗಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಹೊಡೆದು ನೆರದಿದ್ದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 59 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 8 ಬೌಂಡರಿ ನೆರವಿನಿಂದ 104 ರನ್ ಬಾರಿಸಿ ಗೆಲುವಿನ ರುವಾರಿಯಾದರು.
ಪ್ರಾರ್ಥನೆಗೆ ತೆರಳಬೇಕಿದೆ…
ದಾಖಲೆಯ ಇನಿಂಗ್ಸ್ ಆಡಿದ ಬಳಿಕ ಸಂದರ್ಶಕರೊಂದಿಗೆ ಮಾತನಾಡುವ ವೇಳೆ ಬಾಬರ್, ”ಪ್ರಾರ್ಥನೆಗೆ ತೆರಳಬೇಕಿದೆ. ಈಗಾಗಾಗಲೇ ತಡವಾಗಿದೆ, ಆದಷ್ಟು ಬೇಗ ಸಂದರ್ಶನ ಮುಗಿಸಿ” ಎಂದು ಹೇಳುವ ಮೂಲ ಅವಸರಿಸಿದ್ದಾರೆ. ಈ ವಿಡಿಯೊವನ್ನು ಫರೀದ್ ಖಾನ್ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಷ್ಟೇ ದೊಡ್ಡ ಸಾಧನೆ ಮಾಡಿದರೂ ದೇವರ ಪ್ರಕ್ರಿಯೆಯನ್ನು ಮರೆತಿಲ್ಲ ಎಂದು ಬಾಬರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬಾಬರ್ ಅವರನ್ನು ಟ್ರೋಲ್ ಮಾಡಿದಕ್ಕೆ ‘ಇದು ಅವರ ವಿವೇಚನೆ ಬಿಟ್ಟದ್ದು ಈ ಬಗ್ಗೆ ಯಾವುದೇ ರೀತಿಯ ಕಮೆಂಟ್ ಮಾಡುವುದು ಸರಿಯಲ್ಲ. ಎಲ್ಲರಿಗೂ ಅವದ್ದೇ ಆದ ಕೆಲ ನಂಬಿಕೆಗಳು ಇರುತ್ತದೆ. ಅದನ್ನು ಪಾಲಿಸುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದಿದ್ದಾರೆ.
ಇದನ್ನೂ ಓದಿ Shubman Gill: ಪಾಕ್ ನಾಯಕ ಬಾಬರ್ ಅಜಂ ವಿಶ್ವ ದಾಖಲೆ ಪುಡಿಗಟ್ಟಿದ ಶುಭಮನ್ ಗಿಲ್
Babar Azam asking the reporters to hurry up as he has to go for prayers. The key to his success Ma Shaa Allah ❤️ #LPL2023 #LPLT20 pic.twitter.com/MbHysWLVFW
— Farid Khan (@_FaridKhan) August 7, 2023
ಗೆಲುವು ಕಂಡ ಕೊಲಂಬೊ
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ನಡೆಸಿದ ಗಾಲೆ ಟೈಟಾನ್ಸ್(Galle Titans) ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿಸಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಕೊಲಂಬೊ ಸ್ಟ್ರೈಕರ್ಸ್ 19.5 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿ ಗೆಲುವು ಸಾಧಿಸಿತು. ಗಾಲೆ ಟೈಟಾನ್ಸ್(Colombo Strikers) ಪರ ಟಿಮ್ ಸಿಫರ್ಟ್ 35 ಎಸೆತಗಳಲ್ಲಿ ಅಜೇಯ 54 ರನ್ ಸಿಡಿಸಿದರೆ, ಶೆವೊನ್ ಡೆನಿಯಲ್ 49 ಮತ್ತು ಲಸಿತ್ ಕ್ರೂಸ್ಪುಲ್ 36 ರನ್ ಗಳಿಸಿದರು. ಕೊಲಂಬೊ ಪರ ನಸೀಂ ಶಾ, ಮೆಂಡಿಸ್ ಮತ್ತು ಸಂದಕನ್ ತಲಾ 1 ವಿಕೆಟ್ ಪಡೆದು ವಿಂಚಿದರು.