ಬೆಂಗಳೂರು: ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಯಾವಾಗಲೂ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಾರೆ. ಹೀಗಾಗಿ ಅವರಿಗಾಗಿ ವಿಶೇಷ ರಣ ತಂತ್ರ ರೂಪಿಸುತ್ತಿದ್ದಾರೆ. ಕೊಹ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಇನ್ನೂ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಆದರೆ, ವೈಟ್-ಬಾಲ್ ಸ್ವರೂಪಗಳಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಹಾಗೆಯೇ ಮುಂದಿನ ಟಿ20 ವಿಶ್ವ ಕಪ್ನಲ್ಲಿಯೂ (T20 World Cup) ಪಾರಮ್ಯ ಸಾಧಿಸುವ ಯೋಜನೆ ಹೊಂದಿದ್ದಾರೆ.
ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 52.15ರ ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಟಿ20ಐನಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿಯ ಪ್ರಾಬಲ್ಯವು ಪರಿಣಾಮಕಾರಿಯಾಗಿದೆ. ಅವರು 10 ಪಂದ್ಯಗಳಲ್ಲಿ 81.33 ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ ಮತ್ತು ಐದು ಅರ್ಧಶತಕಗಳೊಂದಿಗೆ 123.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಮತ್ತೊಮ್ಮೆ ತಂಡಕ್ಕಾಗಿ ಪ್ರದರ್ಶನ ನೀಡುವ ಜವಾಬ್ದಾರಿ ಕೊಹ್ಲಿ ಹೆಗಲ ಮೇಲಿದೆ. ಇದು ಪಾಕಿಸ್ತಾನ ತಂಡದ ಚಿಂತೆಯನ್ನು ಹೆಚ್ಚಳ ಮಾಡಿದೆ. ಆದರೆ, ವಿರಾಟ್ ತಮಗೆ ಏನೂ ಆಗಿಲ್ಲ ಎಂಬುದಾಗಿ ಹೇಳಿದ್ದಾರೆ. ಜತೆಗೆ ಕೊಹ್ಲಿಗಾಗಿ ರಣ ತಂತ್ರ ರೆಡಿಯಾಗಿದೆ ಎಂಬುದಾಗಿಯೂ ನುಡಿದಿದ್ದಾರೆ.
ಎಲ್ಲರಿಗೂ ಇದೆ ಯೋಜನೆ
ಒಂದು ತಂಡವಾಗಿ ನೀವು ಯಾವಾಗಲೂ ವಿಭಿನ್ನ ತಂಡಗಳ ವಿರುದ್ಧ ಮತ್ತು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜಿಸುತ್ತೀರಿ. ನಾವು ಕೇವಲ ಒಬ್ಬ ಆಟಗಾರನ ವಿರುದ್ಧ ಏನನ್ನೂ ಯೋಜಿಸುವುದಿಲ್ಲ. ನಾವು ಎಲ್ಲಾ 11 ಆಟಗಾರರಿಗಾಗಿ ಯೋಜಿಸಿದ್ದೇವೆ. ನ್ಯೂಯಾರ್ಕ್ನ ಪರಿಸ್ಥಿತಿಗಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ ನಾವು ಅದಕ್ಕೆ ಅನುಗುಣವಾಗಿ ಯೋಜಿಸುತ್ತೇವೆ. ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾವು ಅವರ ವಿರುದ್ಧವೂ ಯೋಜನೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಐರ್ಲೆಂಡ್ ಪ್ರವಾಸಕ್ಕೆ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಹೇಳಿದರು.
ಇದನ್ನೂ ಓದಿ: T20 World Cup : ಬುಮ್ರಾಗೆ ವಿಶ್ರಾಂತಿ ನೀಡಲು ನಿರಾಕರಿಸಿದ ಮುಂಬೈ ಇಂಡಿಯನ್ಸ್; ವಿಶ್ವ ಕಪ್ ಆಡಲು ಸಮಸ್ಯೆ
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 2022 ರ ಆವೃತ್ತಿಯ ಟಿ 20 ವಿಶ್ವಕಪ್ನ್ಲಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. 160 ರನ್ಗಳ ಗುರಿ ಬೆನ್ನತ್ತಿದ ಮೆನ್ ಇನ್ ಬ್ಲೂ ತಂಡ 6.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿತು. ಒತ್ತಡದ ಪರಿಸ್ಥಿತಿಯ ನಡುವೆ, ಕೊಹ್ಲಿ 53 ಎಸೆತಗಳಲ್ಲಿ 82* ರನ್ ಗಳಿಸಿದ್ದರು. ಮತ್ತು ಹಾರ್ದಿಕ್ ಪಾಂಡ್ಯ (37 ಎಸೆತಗಳಲ್ಲಿ 40 ರನ್) ಅವರೊಂದಿಗೆ 113 ರನ್ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು.