Site icon Vistara News

ಉದ್ದೀಪನ ಮದ್ದು ತಡೆ ಸಂಸ್ಥೆಯ ಕರ್ಮಕಾಂಡ ಬಯಲಿಗೆಳೆದ ಬಜರಂಗ್

Bajrang Punia

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ(Bajrang Punia), ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ)(National Anti-Doping Agency) ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಅಥ್ಲೀಟ್‌ಗಳ ಮೇಲೆ ಡೋಪ್ ಪರೀಕ್ಷೆ ನಡೆಸುವಾಗ ಅವಧಿ ಮೀರಿದ ಮತ್ತು ಹಳೆಯ ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಾಕ್ಷ್ಯ ಸಮೇತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ನಾಡಾದ ಅಧಿಕಾರಿಗಳು ಬಜರಂಗ್ ಪುನಿಯಾ ಅವರ ಪರೀಕ್ಷೆಗಾಗಿ ಬಂದ ವೇಳೆ ಅವರ ಬಳಿಯಿದ್ದ ಉಪಕರಣಗಳು ಸಿರಿಂಜ್ ಮತ್ತು ಬಾಟಲಿಗಳನ್ನು ಬಜರಂಗ್ ಪರೀಕ್ಷಿಸಿದ್ದಾರೆ. ಈ ವೇಳೆ ಇವುಗಳೆಲ್ಲ ಅವಧಿ ಮೀರಿದ ಮತ್ತು ಹಳೆಯ ಉಪಕರಣ ಎನ್ನುವುದು ಬೆಳಕಿಗೆ ಬಂದಿದೆ ತಕ್ಷಣ ಬಜರಂಗ್ ಅವರು ಇದನ್ನೆಲ್ಲ ವಿಡಿಯೊ ಮಾಡಿ ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಪೋಸ್ಟ್‌ನಲ್ಲಿ ನಾಡಾ ಸಂಸ್ಥೆಗೂ ಟ್ಯಾಗ್ ಮಾಡಿದ್ದಾರೆ.

ವಿಡಿಯೊದಲ್ಲಿ ಕಳವಳ ವ್ಯಕ್ತಪಡಿಸಿದ ಬಜರಂಗ್‌

“ಇದು ನಾವೆಲ್ಲರೂ ವೀಕ್ಷಿಸಲು ಮತ್ತು ಎಚ್ಚೆತ್ತುಕೊಳ್ಳಲು ಬಹಳ ಮುಖ್ಯವಾದ ವಿಡಿಯೊವಾಗಿದೆ. ಕಾರ್ಯವಿಧಾನಗಳನ್ನು ಸರಿಯಾಗಿ ಅನುಸರಿಸದಿದ್ದರೆ ವ್ಯವಸ್ಥೆಯನ್ನು ನಂಬುವುದು ಹೇಗೆ. ಇಡೀ ಪ್ರಕ್ರಿಯೆಯಲ್ಲಿ ಯಾವುದೇ ಕುಶಲತೆ ಇಲ್ಲ. ವಿಶೇಷವಾಗಿ ಜೂನಿಯರ್ ಕ್ರೀಡಾಪಟುಗಳು ಡೋಪಿಂಗ್‌ಗೆ ಸಂಬಂಧಿಸಿದ ನಿಮ್ಮ ಹಕ್ಕುಗಳು ಮತ್ತು ಕಾರ್ಯವಿಧಾನದ ಬಗ್ಗೆ ದಯವಿಟ್ಟು ತಿಳಿದುಕೊಳ್ಳಿ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಡೋಪಿಂಗ್‌ ಟೆಸ್ಟ್‌ ಮಾಡುವಾಗ ಎಲ್ಲ ಕ್ರೀಡಾಪಟುಗಳು ಜಾಗರೂಕರಾಗಿ. ಪರೀಕ್ಷೆ ಮಾಡುವ ಉಪಕರಣಗಳನ್ನು ಪರಿಶೀಲಿಸಿ” ಎಂದು ಬಜರಂಗ್‌ ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ Pro Kabaddi: ಹಾಲಿ ಚಾಂಪಿಯನ್​ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್

ಈ ಹಿಂದೆ, ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಅಗ್ರ ಕುಸ್ತಿಪಟು ತಮ್ಮ ಹೇಳಿಕೆಯಿಂದ ತಮ್ಮ ಇಮೇಜ್‌ಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿ ಕೋಚ್ ನರೇಶ್ ದಹಿಯಾ ಸಲ್ಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಪುನಿಯಾ ಅವರಿಗೆ ದೆಹಲಿ ನ್ಯಾಯಾಲಯವು ಜಾಮೀನು ನೀಡಿತ್ತು. ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ವಂಚಿತರಾಗಿದ್ದರು.

Exit mobile version