Site icon Vistara News

Bajrang Punia: ತ್ರಿವರ್ಣ ಧ್ವಜದ ಪೋಸ್ಟರ್​ ಮೇಲೆ ಕಾಲಿಟ್ಟ ಬಜರಂಗ್ ಪೂನಿಯಾ; ವಿಡಿಯೊ ವೈರಲ್

Bajrang Punia

Bajrang Punia: Bajrang Punia Spotted Standing On 'Tiranga' Poster While Receiving Vinesh Phogat In Delhi, Gets Criticised Heavily

ನವದೆಹಲಿ: ಪ್ಯಾರಿಸ್​ನಿಂದ ಇಂದು ನವದೆಹಲಿಗೆ ಆಗಮಿಸಿದ್ದ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat)​ ಅವರಿಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಗಿತ್ತು. ಇದೇ ವೇಳೆ ಕುಸ್ತಿಪಟು ಬಜರಂಗ್​ ಪೂನಿಯ(Bajrang Punia) ಮಾಧ್ಯಮದವರನ್ನು ಸಂಬಾಳಿಸುವ ಫಜೀತಿಯಲ್ಲಿ ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ಕಾಲಿಟ್ಟಿ ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ವಿನೇಶ್ ಅವರನ್ನು ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ನೆರದಿದ್ದ ಪತ್ರಕರ್ತರು ವಿನೇಶ್​ ಅವರ ಬೈಟ್ಸ್​ಗಳಿಗೆ ಮೈಕ್​ ಹಿಡಿದು ಕಾರಿಗೆ ಸುತ್ತುವರಿದಿದ್ದರು. ಇವರನ್ನು ಸಂಬಾಳಿಸುವ ಭರದಲ್ಲಿ ಕಾರ್‌ನ ಬಾನೆಟ್‌ ಮೇಲೆ ಹಾಕಲಾಗಿದ್ದ ತ್ರಿವರ್ಣ ಧ್ವಜದ ಪೋಸ್ಟರ್ ಇರುವ ಬ್ಯಾನರ್‌ ಮೇಲೆ ಬಜರಂಗ್ ಪೂನಿಯಾ ನಿಂತಿದ್ದರು. ಸದ್ಯ ಈ ಫೋಟೊ ಮತ್ತು ವಿಡಿಯೊ ವೈರಲ್​ ಆಗಿದ್ದು, ರಾಷ್ಟ್ರ ಧ್ವಜದ ಮೇಲೆ ಕಾಲಿಡಬಾರದು ಎಂಬ ಕಿಂಚಿತ್ತು ಬುದ್ಧಿ ಕೂಡ ನಿಮಗಿಲ್ಲವೇ ಎಂದು ನೆಟ್ಟಿಗರು ಬಜರಂಗ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿನೇಶ್​ ಫೋಗಟ್(Vinesh Phogat)​ ಸೆಮಿಫೈನಲ್​ ಪ್ರವೇಶಿಸಿದ್ದ ವೇಳೆ ಬಜರಂಗ್‌ ಪೂನಿಯ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ವಿನೇಶ್ ಸಾಧನೆಯನ್ನು ಕೊಂಡಾಡಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದರು.

“ಜಗತನ್ನೇ ಗೆಲ್ಲಲು ಹೊರಟಿರುವ ವಿನೇಶಾ ಫೋಗಟ್ ಹಿಂದೊಮ್ಮೆ ತನ್ನದೇ ದೇಶದಲ್ಲಿ ಸೋಲು ಎದುರಿಸಿದ್ದಳು. ಲೈಗಿಂಕ ಕಿರುಕುಳದ ವಿರುದ್ಧ ನ್ಯಾಯಕ್ಕಾಗಿ ಹೋರಾಡಿದ್ದ ಈಕೆಯ ಮೇಲೆ ತನ್ನದೇ ದೇಶದಲ್ಲಿ ಲಾಠಿಯಿಂದ ಹೊಡೆದು ದಮನಿಸಲಾಗಿತ್ತು. ಬೀದಿಯಲ್ಲಿ ಎಳೆದಾಡಿ ತುಳಿದು ಅವಾಮಾನಿಸಲಾಗಿತ್ತು. ಇಂದು ಈ ಹುಡುಗಿಯ ಸಾಧನೆಯ ಮುಂದೆ ದೇಶದ ವ್ಯವಸ್ಥೆ ಸೋಲು ಕಂಡಿದೆ” ಎಂದು ಬರೆದುಕೊಂಡಿದ್ದರು.

ಡಬ್ಲ್ಯೂಎಫ್‌ಐ ವಿವಾದಕ್ಕೆ ಸಂಬಂಧಿಸಿದಂತೆ ಬಜರಂಗ್‌ ಪೂನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಕರ್ತವ್ಯ ಪಥದಲ್ಲಿ ಪದ್ಮಶ್ರೀ ಬಿಟ್ಟು ಹೋಗಿದ್ದರು. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪದಕವನ್ನು ಮನೆಗೆ ಕೊಂಡೊಯ್ಯುವುದಿಲ್ಲ. ಹೀಗಾಗಿ ಅಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದರು. ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್ ವಿರುದ್ಧ ನಡೆಸಿದ್ದ ಪ್ರತಿಭಟನೆ ರೂವಾರಿಗಳಲ್ಲಿ ಬಜರಂಗ್​ ಕೂಡ ಒಬ್ಬರಾಗಿದ್ದರು.

ಇದನ್ನೂ ಓದಿ Bajrang Punia: ‘ದೇಶದಲ್ಲಿ’ ಸೋತು ಒಲಿಂಪಿಕ್ಸ್​ನಲ್ಲಿ ಗೆಲುವಿನ ಹೆಜ್ಜೆಯಿಟ್ಟ​ ವಿನೇಶ್​​; ಬಜರಂಗ್‌ ಪೂನಿಯ ಟಾಂಗ್​

ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಪೋಗಟ್‌(Vinesh Phogat) ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್,​ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್​, ಬಜರಂಗ್​ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ​ಜತೆಗಿದ್ದರು.

Exit mobile version