ನವದೆಹಲಿ: ಟೋಕಿಯ ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತದ ಕುಸ್ತಿಪಟು ಬಜರಂಗ್ ಪುನಿಯಾ(Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿ (National Anti-Doping Agency) ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ(bajrang punia Suspend) ಎಂದು ವರದಿಯಾಗಿದೆ. ಈ ಕ್ರಮದಿಂದಾಗಿ ಇದೇ ಜುಲೈನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆ ಉಂಟುಮಾಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಆಯ್ಕೆ ಪ್ರಯೋಗಗಳಿಗೆ ತನ್ನ ಮೂತ್ರದ ಮಾದರಿಯನ್ನು ಒದಗಿಸಲು ಪುನಿಯಾ ವಿಫಲರಾಗಿದ್ದರು. ಇದರಿಂದಾಗಿ ಭವಿಷ್ಯದ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅವರನ್ನು ಅಮಾನತುಗೊಳಿಸುವ ಆದೇಶವನ್ನು ನಾಡಾ(NADA) ಹೊರಡಿಸಿದೆ ಎನ್ನಲಾಗಿದೆ.
“ನಾಡಾ 2021 ರ ಆರ್ಟಿಕಲ್ 7.4 ರ ಪ್ರಕಾರ, ಈ ವಿಷಯದಲ್ಲಿ ವಿಚಾರಣೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಯಾವುದೇ ಸ್ಪರ್ಧೆ ಅಥವಾ ಚಟುವಟಿಕೆಯಲ್ಲಿ ಭಾಗವಹಿಸದಂತೆ ಬಜರಂಗ್ ಪುನಿಯಾ ಅವರನ್ನು ತಕ್ಷಣವೇ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ನಾಡಾ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
🤼🚨 BREAKING! According to @the_bridge_in, The star Indian wrestler Bajrang Punia refused to submit his urine sample to the National Anti-Doping Agency during selection trials in Sonepat on March 10.
— India at Paris 2024 Olympics (@sportwalkmedia) May 5, 2024
👀 If the problem isn't solved, he won't be allowed to compete at the Olympic… pic.twitter.com/PhrR0gcM57
ಬಜರಂಗ್ ಅವರನ್ನು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸದಂತೆ ತಡೆಯುವ ಸಾಧ್ಯತೆಯಿದೆ. 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಬಜರಂಗ್ ಇದುವರೆಗೂ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿಲ್ಲ. ಒಂದೊಮ್ಮೆ ಅವರು ಅಮಾನತು ಶಿಕ್ಷೆಗೆ ಗುರಿಯಾದರೆ ಒಲಿಂಪಿಕ್ಸ್‌ನಲ್ಲಿ 65 ಕೆಜಿ ವಿಭಾಗದಲ್ಲಿ ಭಾರತದ ಸ್ಪರ್ಧೆ ಇಲ್ಲವಾದಂತಾಗುತ್ತದೆ. ಏಕೆಂದರೆ ಈ ವಿಭಾಗದಿಂದ ಇದುವರೆಗೆ ಒಲಿಂಪಿಕ್ ಕೋಟಾ ಸಿಕ್ಕಿಲ್ಲ.
ಇದನ್ನೂ ಓದಿ Bajrang Punia : ಪದ್ಮ ಶ್ರೀ ಪ್ರಶಸ್ತಿಯನ್ನು ಫುಟ್ಪಾತ್ ಮೇಲೆ ಇಟ್ಟು ಹೋದ ಬಜರಂಗ್ ಪೂನಿಯಾ!
ನಾಡಾ ವಿರುದ್ಧವೇ ಗಂಭೀರ ಆರೋಪ ಮಾಡಿದ್ದ ಬಜರಂಗ್
ಕೆಲವು ತಿಂಗಳ ಹಿಂದೆ ಪುನಿಯಾ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ)) ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಅಥ್ಲೀಟ್‌ಗಳ ಮೇಲೆ ಡೋಪ್ ಪರೀಕ್ಷೆ ನಡೆಸುವಾಗ ಅವಧಿ ಮೀರಿದ ಮತ್ತು ಹಳೆಯ ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು. ಜತೆಗೆ ಸಾಕ್ಷ್ಯ ಸಮೇತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದರು.
यह हम सभी के देखने और विचार करने के लिए बहुत महत्वपूर्ण वीडियो है। यदि प्रक्रिया का पालन नहीं किया गया तो सिस्टम पर भरोसा कैसे किया जाए। कोई यह कैसे सुनिश्चित कर सकता है कि पूरी प्रक्रिया में कोई हेराफेरी नहीं हुई है। यह किसी के साथ भी हो सकता है, खासकर जूनियर एथलीटों के साथ।… pic.twitter.com/weMSNGPq0m
— Bajrang Punia 🇮🇳 (@BajrangPunia) December 13, 2023
ನಾಡಾದ ಅಧಿಕಾರಿಗಳು ಬಜರಂಗ್ ಪುನಿಯಾ ಅವರ ಪರೀಕ್ಷೆಗಾಗಿ ಬಂದ ವೇಳೆ ಅವರ ಬಳಿಯಿದ್ದ ಉಪಕರಣಗಳು ಸಿರಿಂಜ್ ಮತ್ತು ಬಾಟಲಿಗಳನ್ನು ಬಜರಂಗ್ ಪರೀಕ್ಷಿಸಿದ್ದರು. ಈ ವೇಳೆ ಇವುಗಳೆಲ್ಲ ಅವಧಿ ಮೀರಿದ ಮತ್ತು ಹಳೆಯ ಉಪಕರಣ ಎನ್ನುವುದು ಬೆಳಕಿಗೆ ಬಂದಿತ್ತು. ತಕ್ಷಣ ಬಜರಂಗ್ ಇದನ್ನೆಲ್ಲ ವಿಡಿಯೊ ಮಾಡಿ ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜತೆಗೆ ಕಳವಳ ಕೂಡ ವ್ಯಕ್ತಪಡಿಸಿದ್ದರು.