ಕೋಲ್ಕೊತಾ: ಐಪಿಎಲ್ 16ನೇ (IPL 2023) ಆವೃತ್ತಿಯಲ್ಲಿ ತನ್ನ ತಂಡ ಪರವಾಗಿ ಆಡಲು ಕೋಲ್ಕೊತಾ ನೈಟ್ ರೈಡರ್ಸ್ ತಂಡ ಇಬ್ಬರು ಬಾಂಗ್ಲಾದೇಶ ಆಟಗಾರರ ಜತೆ ಒಪ್ಪಂದ ಮಾಡಿಕೊಂಡಿತ್ತು. ಅದರಲ್ಲಿ ಒಬ್ಬರಾಗಿರುವ ಆಲ್ರೌಂಡರ್ ಶಕಿಬ್ ಅಲ್ ಹಸನ್ ತಾವು ಬರುವುದು ಸಾಧ್ಯವಿಲ್ಲ ಎಂದು ಫ್ರಾಂಚೈಸಿಗೆ ತಿಳಿಸಿದೆ. ಇನ್ನೊಬ್ಬರು ಕೂಡ ಅದೇ ಕಾರಣಕ್ಕೆ ಹಿಂದೆ ಸರಿದರೆ ಕೋಲ್ಕೊತಾ ತಂಡ ಹಿನ್ನಡೆಗೆ ಒಳಗಾಗಲಿದೆ. ಜತೆಗೆ ಪರ್ಯಾಯ ಆಟಗಾರರಿಗಾಗಿ ಹುಡುಕಬೇಕಾಗಿದೆ.
ಶಕಿಬ್ ಅಲ್ ಹಸನ್ ಭಾನುವಾರ ಫ್ರಾಂಚೈಸಿಗೆ ಮಾಹಿತಿ ರವಾನಿಸಿದೆ. ರಾಷ್ಟ್ರೀಯ ತಂಡದಲ್ಲಿ ಆಡಬೇಕಾಗಿರುವ ಅನಿವಾರ್ಯತೆ ಎದುರಾಗಿದೆ ಹಾಗೂ ವೈಯಕ್ತಿಕ ಕಾರಣಗಳಿಂದ ಆಡುವುದಕ್ಕೆ ಬರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ತಂಡಕ್ಕೆ ಆಯ್ಕೆಯಾಗಿರುವ ಇನ್ನೊಬ್ಬರ ಆಟಗಾರ ಲಿಟನ್ ದಾಸ್. ಸ್ಫೋಟಕ ಬ್ಯಾಟರ್ ಇನ್ನೂ ಕೆಕೆಆರ್ ತಂಡವನ್ನು ಸೇರಿಕೊಂಡಿಲ್ಲ. ಅವರೂ ರಾಷ್ಟ್ರೀಯ ತಂಡದಲ್ಲಿ ಆಡಬೇಕಾಗಿರುವ ಕಾರಣ ಅದೇ ನೆಪದಲ್ಲಿ ಐಪಿಎಲ್ನಿಂದ ಹೊರಕ್ಕುಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ಟ್ವೀಟ್ ಇಲ್ಲಿದೆ
ಬಾಂಗ್ಲಾದೇಶ ತಂಡ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದ ಕಾರಣ ಈ ಇಬ್ರು ಆಟಗರರು ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಅವರಿಬ್ಬರನ್ನೂ ಐರ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ. ಹೀಗಾಗಿ ಅದರಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿರುವ ಕಾರಣ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಎನ್ಒಸಿ ಕೊಡುವ ಸಾಧ್ಯತೆಗಳು ಇಲ್ಲ. ಅದಾದ ಬಳಿಕ ಬಾಂಗ್ಲಾದೇಶ ತಂಡ ಐರ್ಲೆಂಡ್ ವಿರುದ್ಧ ಏಕ ದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಜತೆಗೆ ಇಂಗ್ಲೆಂಡ್ ಪ್ರವಾಸ ನಿಗದಿಯಾಗಿದೆ.
ಐಪಿಎಲ್ ಆರಂಭಗೊಳ್ಳುವ ಮೊದಲು ವಿದೇಶಿ ಆಟಗಾರರಿಗೆ ತಮ್ಮ ಲಭ್ಯತೆ ಕುರಿತು ಮಾಹಿತಿ ನೀಡುವಂತೆ ಬಿಸಿಸಿಐ ಸೂಚನೆ ಕೊಟ್ಟಿತ್ತು. ಈ ವೇಳೆ ಪ್ರತಿಕ್ರಿಯೆ ಕೊಟ್ಟಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಮ್ಮಿಬ್ಬರು ಆಟಗಾರರು ಐರ್ಲೆಂಡ್ ವಿರುದ್ಧದ ಸರಣಿಯ ಬಳಿಕ ಲಭ್ಯರಿದ್ದಾರೆ ಎಂದು ಹೇಳಿತ್ತು. ಏಪ್ರಿಲ್ 8ರಿಂದ ಮೇ1ರ ತನಕ ಆಟಗಾರರನ್ನು ಕಳುಹಿಸುವುದಕ್ಕೆ ಆಕ್ಷೇಪ ಇಲ್ಲ ಎಂದಿತ್ತು.
ಇದನ್ನೂ ಓದಿ: IPL 2023 : ವೈಯಕ್ತಿಕ ದಾಳಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೊಹಮ್ಮದ್ ಸಿರಾಜ್
ಮಾರ್ಚ್ 18ರಂದು ಈ ಕುರಿತು ಮಾಹಿತಿ ನೀಡಿದ್ದ ಕೋಲ್ಕೊತಾ ನೈಟ್ ರೈಡರ್ಸ್ ತಂಡ, ಶಕಿಬ್ ಅಲ್ ಹಸನ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮುಕ್ತಾಯಗೊಂಡ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಿಕೆ ಕೊಟ್ಟಿತ್ತು. ಅಲ್ಲದೆ, ಲಿಟನ್ ದಾಸ್ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಮುಗಿದ ಬಳಿಕ ತಂಡ ಸೇರಿಕೊಳ್ಳುತ್ತಾರೆ ಎಮದು ಹೇಳಿತ್ತು. ಆದರೆ, ಇಬ್ಬರೂ ಆಟಗಾರರು ಈ ಬಾರಿ ಲಭ್ಯರಾಗುವುದು ಅನುಮಾನ ಎನಿಸಿದೆ. ಹೀಗಾಗಿ ಪರ್ಯಾಯ ಆಟಗಾರರ ಹುಡುಕಾಟದಲ್ಲಿದೆ ಲಕ್ನೊ ತಂಡ.
ಶಕಿಬ್ ಅವರನ್ನು ಹೊರತುಪಡಿಸಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದಲ್ಲಿ ಆರು ವಿದೇಶಿ ಆಟಗಾರರು ಇದ್ದಾರೆ. ಅವರಲ್ಲೊಬ್ಬರು ಲಿಟನ್ ದಾಸ್. ಅವರು ಕೂಡ ಬರುವುದಿಲ್ಲ ಎಂದು ಏನಾದರೂ ಹೇಳಿದರೆ ವಿದೇಶಿ ಆಟಗಾರರ ಸಂಖ್ಯೆ ಐದಕ್ಕೆ ಇಳಿಯುತ್ತದೆ. ಕೆಕೆಆರ್ ಬಳಗ ಈಗಾಗಲೇ ಆಟಗಾರರ ಕೊರತೆಯಿಂದ ಬಳಸುತ್ತಿದೆ. ಕಾಯಂ ನಾಯಕ ಶ್ರೇಯಸ್ ಅಯ್ಯರ್ ಅಲಭ್ಯತೆಯಿಂದಲೇ ತಂಡ ದೊಡ್ಡ ಮಟ್ಟಿನ ಹಿನ್ನಡೆಗೆ ಒಳಗಾಗಿದೆ.