ಮೀರ್ಪುರ : ಬಾಂಗ್ಲಾದೇಶ (INDvsBAN) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವಿನ ಅವಕಾಶ ಸೃಷ್ಟಿಯಾಗಿದ್ದು, 145 ರನ್ ಬಾರಿಸಿದರೆ ಪಂದ್ಯದ ಜತೆಗೆ ಸರಣಿಯೂ ಕೈವಶವಾಗಲಿದೆ. ಪಂದ್ಯದ ಮೂರನೇ ದಿನವಾದ ಶನಿವಾರ ಆತಿಥೇಯ ಬಾಂಗ್ಲಾದೇಶ ತಂಡ ಎರಡನೇ ಇನಿಂಗ್ಸ್ನಲ್ಲಿ 231 ರನ್ಗಳಿಗೆ ಸರ್ವಪತನಗೊಂಡಿತು.
ಶುಕ್ರವಾರ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡ ಹೆಚ್ಚು 70.2 ಓವರ್ಗಳಲ್ಲಿ ಆಲ್ಔಟ್ ಆಯಿತು. ಆರಂಭಿಕ ಬ್ಯಾಟರ್ ಜಾಕಿರ್ ಹಸನ್ (51) ಹಾಗೂ ಲಿಟನ್ ದಾಸ್ (73) ಸವಾಲಿನ ಮೊತ್ತ ಪೇರಿಸಲು ನೆರವಾದರು. ಅದೇ ರೀತಿ ಬಾಲಂಗೋಚಿ ಬ್ಯಾಟರ್ಗಳಾದ ನೂರುಲ್ ಹಸನ್ ಹಾಗೂ ಟಸ್ಕಿನ್ ಅಹ್ಮದ್ ತಲಾ 31 ರನ್ ಬಾರಿಸಿದರು.
ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್ನಲ್ಲಿ227 ರನ್ ಬಾರಿಸಿದ್ದರೆ ಭಾರತ ತಂಡ 314 ರನ್ಗಳನ್ನು ಪೇರಿಸಿತ್ತು.
ಇದನ್ನೂ ಓದಿ | INDvsBAN | 227 ರನ್ಗಳಿಗೆ ಬಾಂಗ್ಲಾದೇಶ ಆಲ್ಔಟ್, ಉಮೇಶ್ ಯಾದವ್, ಆರ್ ಅಶ್ವಿನ್ಗೆ 4 ವಿಕೆಟ್