Site icon Vistara News

Cricket Viral Video: ಕೈಯಿಂದ ಚೆಂಡು ತಡೆದು ಔಟ್​ ಆದ ಮುಷ್ಫಿಕರ್‌ ರಹೀಂ

Mushfiqur Rahim

ಢಾಕಾ: ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಷ್ಫಿಕರ್‌ ರಹೀಂ(Mushfiqur Rahim) ಅವರು ನ್ಯೂಜಿಲ್ಯಾಂಡ್​ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಅತ್ಯಂತ ಅವಮಾನಕರ ರೀತಿಯಲ್ಲಿ ವಿಕೆಟ್​ ಕೈಚೆಲ್ಲಿದ್ದಾರೆ. ವಿಕೆಟ್​ಗೆ ಬಡಿಯುವ ಚೆಂಡನ್ನು ಕೈ ಯಿಂದ ತಡೆದು ವಿಚಿತ್ರವಾಗಿ ಔಟ್ ಆಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Cricket Viral Video)​ ಆಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಎದುರಿಸಿತು. 50 ರನ್​ ಗಳಿಸುವ ಮುನ್ನವೇ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಬ್ಯಾಟಿಂಗ್​ಗೆ ಇಳಿದ ಮುಷ್ಫಿಕರ್‌ ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ ಕೈಲ್​ ಜಾಮಿಸನ್​ ಅವರ ಓವರ್​ನಲ್ಲಿ ಚೆಂಡನ್ನು ಡಿಫೆನ್ಸ್ ಮಾಡುವ ವೇಳೆ ಚೆಂಡು ಬ್ಯಾಟ್​ಗೆ ಬಡಿದು ವಿಕೆಟ್​ಗೆಎ ಬಡಿಯಲು ಮುಂದಾಗಿತ್ತು. ಇದೇ ವೇಳೆ ಗಲಿಬಿಲಿಗೊಂಡ ಮುಷ್ಫಿಕರ್‌, ತಮ್ಮ ಕೈಗಳಿಂದ ಚೆಂಡನ್ನು ತಡೆದರು.

ಮುಷ್ಫಿಕರ್‌ ರಹೀಂ ಚೆಂಡನ್ನು ಕೈಗಳಿಂದ ತಡೆದ ಕಾರಣ ಕಿವೀಸ್​ ಆಟಗಾರರು ಔಟ್​ಗಾಗಿ ಅಂಪೈರ್​ ಬಳಿ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಮೊದಲಿಗೆ ಔಟ್​ ನೀಡದೆ. ಲೆಗ್​ ಅಂಪೈರ್​ ಬಳಿ ಚರ್ಚಿಸಿ ಬಳಿಕ ಮೂರನೇ ಅಂಪೈರ್​ಗೆ ಪರಿಶೀಲಿಸುವಂತೆ ಮನವಿ ಮಾಡಿದರು. ಚೆಂಡನ್ನು ಕೈಗಳಿಂದ ತಡೆದಿರುವುದು ದೊಡ್ಡ ಪರದೆಯಲ್ಲಿ ಕಾಣಿಸಿದ ಮೂರನೇ ಅಂಪೈರ್​ ಇದನ್ನು ಔಟ್​ ಎಂದು ಘೋಷಿಸಿದರು.

ನಿಯಮ ಏನು ಹೇಳುತ್ತದೆ?

ಬೌಲರ್​ ಒಬ್ಬ ಎಸೆದ ಎಸೆತ ಬ್ಯಾಟ್​ಗೆ ಬಡಿದು ಚೆಂಡು ವಿಕೆಟ್​ಗೆ ಬಡಿಯುವ ಮುನ್ನ ಬ್ಯಾಟ್​ನಿಂದ ಅಥವಾ ಕಾಲಿನಿಂದ ಇದನ್ನು ತಡೆದರೆ ಇದನ್ನು ಔಟ್​ ಎಂದು ಪರಿಗಣಿಸುವುದಿಲ್ಲ. ಈ ನಿಯಮ ಐಸಿಸಿಯಲ್ಲಿದೆ. ಆದರೆ ಕೈಗಳಿಂದ ಚೆಂಡನ್ನು ತಡೆದರೆ ಇದನ್ನು ಔಟ್​ ಎಂದು ಒಂದು ತೀರ್ಪು ನೀಡಲಾಗುತ್ತದೆ. ಒಂದೊಮ್ಮೆ ಬ್ಯಾಟರ್​ ಕ್ರೀಸ್​ ಬಿಟ್ಟು ಮುಂದೆ ಬಂದ ವೇಳೆ ಫೀಲ್ಡರ್​ ಒಬ್ಬ ವಿಕೆಟ್​ನತ್ತ ಚೆಂಡನ್ನು ಎಸೆದರೆ ಅದನ್ನು ಬ್ಯಾಟರ್​ ತಡೆದರೆ ಇದು ಕೂಡ ಔಟ್​ ಎಂದು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

ಮುಷ್ಫಿಕರ್‌ ರಹೀಂ ಅವರು ಈ ರೀತಿ ಔಟ್​ ಆದ 11ನೇ ಆಟಗಾರ ಎನಿಸಿಕೊಂಡರು. ವಿಕೆಟ್​ಗೆ ಬಡಿಯುವ ಚೆಂಡನ್ನು ಕೂದಲೆಳೆ ಅಂತರದಲ್ಲಿ ಬ್ಯಾಟ್​ ಮತ್ತು ಕಾಲಿನಿಂದ ತಡೆದು ನಿಲ್ಲಿಸಿ ವಿಕೆಟ್​ ಉಳಿಸಿಕೊಂಡ ನಿದರ್ಶನವೂ ಹಲವಾರಿದೆ. ರಹೀಂ 83 ಎಸೆತಗಳಲ್ಲಿ 35 ರನ್ ಗಳಿಸಿ ಪೆವಿಲಿಯನ್​ ಸೇರಿದರು. ಅಂತಿಮವಾಗಿ ಬಾಂಗ್ಲಾದೇಶ 172 ರನ್​ಗೆ ಆಲೌಟ್​ ಆಯಿತು.

36 ವರ್ಷದ ಮುಷ್ಫಿಕರ್‌ ರಹೀಂ ಅವರಿಗೆ ಈ ಬಾರಿ ನಡೆದ ವಿಶ್ವಕಪ್​ ಟೂರ್ನಿ ಕೊನೆಯದಾಗಿತ್ತು. ಇದುವರೆಗೆ ಬಾಂಗ್ಲಾ ಪರ 265 ಏಕದಿನ ಪಂದ್ಯಗಳನ್ನು ಆಡಿರುವ ಅವರು 7,608 ರನ್​ ಗಳಿಸಿದ್ದಾರೆ. 144 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 9 ಶತಕ ಮತ್ತು 48 ಅರ್ಧಶತಕ ಒಳಗೊಂಡಿದೆ. 88 ಟೆಸ್ಟ್​ ಪಂದ್ಯಗಳನ್ನು ಆಡಿ 5667 ರನ್​ ಬಾರಿಸಿದ್ದಾರೆ. 102 ಟಿ20 ಪಂದ್ಯಗಳಿಂದ 1500 ರನ್​ ಕಲೆ ಹಾಕಿದ್ದಾರೆ.

Exit mobile version