ನವ ದೆಹಲಿ: ಅಜ್ಮಲ್ ಹೊಸೈನ್ ಶಾಂಟೊ (90) ಹಾಗೂ ನಾಯಕ ಶಕಿಬ್ ಅಲ್ ಹಸನ್ (82) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ 3 ವಿಕೆಟ್ಗಳ ಗೆಲುವು ಸಾಧಿಸಿದೆ. ಇದು ಹಾಲಿ ವಿಶ್ವ ಕಪ್ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಲಭಿಸಿದ ಎರಡನೇ ಜಯವಾಗಿದೆ. ಇದರೊಂದಿಗೆ ಒಟ್ಟು ನಾಲ್ಕು ಅಂಕಗಳನ್ನು ಸಂಪಾದಿಸಿ ವಿಶ್ವ ಕಪ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಅತ್ತ ಶ್ರೀಲಂಕಾ ತಂಡವೂ ಮತ್ತೊಂದು ಗೆಲುವು ಪಡೆಯಲು ನಡೆಸಿದ ಪ್ರಯತ್ನ ವಿಫಲಗೊಂಡಿದ್ದು ನಾಲ್ಕು ಅಂಕಗಳಿಗೆ ತೃಪ್ತಿಗೊಂಡು ಎಂಟನೇ ಸ್ಥಾನದಲ್ಲಿದೆ.
Shakib Al Hasan produced an impressive all-round show to win the @aramco #POTM 🏅#BANvSL #CWC23 pic.twitter.com/ObQOHsf17x
— ICC Cricket World Cup (@cricketworldcup) November 6, 2023
ಇಲ್ಲಿನ ಅರುಣ್ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕಿಬ್ ಅಲ್ ಹಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 49.3 ಓವರ್ಗಳಲ್ಲಿ 279 ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ಬಾಂಗ್ಲಾ ಹುಲಿಗಳು ಇನ್ನೂ 53 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು 282 ರನ್ ಬಾರಿಸಿ ಜಯ ಸಾಧಿಸಿತು.
ಬ್ಯಾಟಿಂಗ್ಗೆ ಪೂರಕವಾಗಿರುವ ಡೆಲ್ಲಿ ಪಿಚ್ನಲ್ಲಿ ಶ್ರಿಲಂಕಾ ತಂಡದ ಆಟಗಾರರು ಬ್ಯಾಟಿಂಗ್ಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡರು. ಅದೇ ರೀತಿ ಚೇಸಿಂಗ್ಗೆ ನೆರವಾಗುವ ಪಿಚ್ನ ಲಾಭ ಪಡೆದುಕೊಂಡ ಬಾಂಗ್ಲಾ ತಂಡ ಯೋಜನೆಯಂತೆ ಗೆಲುವು ತನ್ನದಾಗಿಸಿಕೊಂಡಿತು. ಕೊನೇ ಹಂತದಲ್ಲಿ ಬಾಂಗ್ಲಾದೇಶ ತಂಡ ಸತತವಾಗಿ ವಿಕೆಟ್ ಕಳೆದುಕೊಂಡ ಹೊರತಾಗಿರೂ ಉತ್ತಮ ಆರಂಭ ಪಡೆದ ಕಾರಣ ಗೆಲುವು ತನ್ನದಾಗಿಸಿಕೊಂಡಿತು. ಇದೇ ವೇಳೆ ಲಂಕಾ ಪರ ಶತಕ ಬಾರಿಸಿ ಮಿಂಚಿದ್ದ ಚರಿತ್ ಅಸಲಂಕಾ (108 ರನ್) ಅವರ ಪರಿಶ್ರಮ ವ್ಯರ್ಥಗೊಂಡಿತು.
ಲಂಕಾ ಬ್ಯಾಟಿಂಗ್ ವೈಫಲ್ಯ
ಲಂಕಾ ತಂಡ ಬ್ಯಾಟಿಂಗ್ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಸತತವಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ಎದುರಾಳೀ ತಂಡದ ಬೌಲರ್ಗಳಿಗೆ ಭರ್ಜರಿ ಮುನ್ನಡೆ ಪಡೆಯಲು ಅನುಕೂಲ ಮಾಡಿಕೊಟ್ಟರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಚರಿತ್ ಅಸಲಂಕಾ ಉತ್ತಮವಾಗಿ ಬ್ಯಾಟ್ ಬೀಸುವ ಮೂಲಕ ತಂಡಕ್ಕೆ ಆಧಾರವಾದರು. ಅವರ ಶತಕದ ನೆರವಿನಿಂದ ಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಸದೀರ ಸಮರ ವಿಕ್ರಮ 41 ರನ್ ಬಾರಿಸಿದರೆ, ಧನಂಜಯ ಡಿಸಿಲ್ವಾ 34 ರನ್ ರನ್ ಬಾರಿಸಿದರು.
ಬಾಂಗ್ಲಾದೇಶದ ಪರ ತಂಜಿಮ್ ಹಸನ್ 3 ವಿಕೆಟ್ ಪಡೆದರೆ ಶೊರಿಫುಲ್ ಇಸ್ಲಾಂ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್ ಉರುಳಿಸಿದರು.
ಇದನ್ನೂ ಓದಿ: ICC World Cup 2023 : ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ಗೆ ಆರೋಗ್ಯ ಸಮಸ್ಯೆ
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ಬಾಂಗ್ಲಾದೇಶ ತಂಡ 66 ರನ್ಗಳಿಗೆ ಮೊದಲೆರಡು ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ಆ ಬಳಿಕ ಶಾಂಟೊ ಹಾಗೂ ಶಕಿಬ್ ಶತಕದ ಜತೆಯಾಟವಾಡಿದರು. ಮಹಮದುಲ್ಲಾ 22 ರನ್ ಬಾರಿಸಿದರೆ ಕೊನೆಯಲ್ಲಿ ತೌಹಿದ್ 15 ರನ್ ಕೊಡುಗೆ ಕೊಟ್ಟರು.
ವಿವಾದಾತ್ಮಕ ಔಟ್
ದ್ಯದಲ್ಲಿ ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್(Angelo Mathews) ಅವರು ಬ್ಯಾಟಿಂಗ್ ನಡೆಸದೆಯೇ ಔಟ್ ಆಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಬ್ಯಾಟಿಂಗ್ ನಡೆಸಲು ತಡ ಮಾಡಿದ ಕಾರಣದಿಂದ ಅವರು ಟೈಮ್ಡ್ ಔಟ್(timed out) ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.
ನಾಲ್ಕನೇ ವಿಕೆಟ್ ಬಿದ್ದ ಬಳಿಕ ಆಡಲಿಳಿದ ಏಂಜೆಲೊ ಮ್ಯಾಥ್ಯೂಸ್ ಅವರು ಕ್ರೀಸ್ಗೆ ಬಂದಾಗ ಹೆಲ್ಮೆಟ್ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಅವರು ಸಹ ಆಟಗಾರನ ಬಳಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದಾರೆ. ಹೊಸ ಹೆಲ್ಮೆಟ್ ತರುವಲ್ಲಿ ಕೊಂಚ ತಡವಾಗಿದೆ. ಇದೇ ವೇಳೆ ಬಾಂಗ್ಲಾದೇಶ ಆಟಗಾರರು ಅಂಪೈರ್ ಬಳಿ ಐಸಿಸಿ ನಿಯಮದಂತೆ ಟೈಮ್ ಔಟ್ ಅಫೀಲ್ ಮಾಡಿದ್ದಾರೆ. ಇದನ್ನು ಅಂಪೈರ್ ಕೂಡ ಮಾನ್ಯ ಮಾಡಿ ಓಟ್ ಎಂದು ತೀರ್ಪು ನೀಡಿದರು. ಆದರೆ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಎಲ್ಲರು ಅಚ್ಚರಿಯಿಂದ ಚರ್ಚಿಸತೊಡಗಿದರು.