Site icon Vistara News

U19 Asia Cup : ಬಾಂಗ್ಲಾ ವಿರುದ್ಧ ಸೆಮೀಸ್​ನಲ್ಲಿ ಸೋಲು, ಕಿರಿಯರ ಪ್ರಶಸ್ತಿ ಆಸೆ ಭಗ್ನ

Bangladesh Cricket Team

ದುಬೈ: ದುಬೈನಲ್ಲಿ ಶುಕ್ರವಾರ (ಡಿಸೆಂಬರ್ 15) ನಡೆದ 19 ವರ್ಷದೊಳಗಿನವರ ಏಷ್ಯಾಕಪ್ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾವನ್ನು ಮಣಿಸಿದ ಬಾಂಗ್ಲಾದೇಶ 2020ರ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದ ನೆನಪುಗಳನ್ನು ಮೆಲುಕು ಹಾಕಿದೆ. ಇದರೊಂದಿಗೆ ಬಾಂಗ್ಲಾದೇಶ ತಂಡ ಫೈನಲ್​ಗೆ ತಲುಪಿದೆ.

ಟಾಸ್​ ಗೆದ್ದ ಮೊದಲು ಫೀಲ್ಡಿಂಗ್ ಮಾಡಿದ ಬಾಂಗ್ಲಾದೇಶ ತಂಡ ಭಾರತದ ಆರಂಭಿಕ ವಿಕೆಟ್​ಗಳನ್ನು ಸತತವಾಗಿ ಉರುಳಿಸಿತು. ಪರಿಣಾಮವಾಗಿ ಭಾರತ 61 ರನ್​ಗೆ 6 ವಿಕೆಟ್​ ಕಳೆದುಕೊಂಡಿತು. ಕೊನೆಯಲ್ಲಿ ಮುರುಗನ್ ಅಭಿಷೇಕ್ (62) ಮತ್ತು ಮುಶೀರ್ ಖಾನ್ (50) ಉತ್ತಮ ಬ್ಯಾಟಿಂಗ್ ಮಾಡಿದರು. ಅವರಿಬ್ಬರು ನಿರ್ಣಾಯಕ ಆಟದ ಮೂಲಕ 84 ರನ್​ಗಳನ್ನು ಪೇರಿಸಿದರು. ಅವರಿಬ್ಬರ ಆಟದ ನೆರವಿನಿಂದ ಬಾರತ 188 ರನ್ ಬಾರಿಸಿತು. ಬಾಂಗ್ಲಾ ದೇಶ ಪರ ಮಾರುಫ್ 4 ವಿಕೆಟ್ ಪಡೆದು ಮಿಂಚಿದರು.

ಉತ್ತರವಾಗಿ ಬಾಂಗ್ಲಾದೇಶ 42.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಬಾಂಗ್ಲಾ ಟೈಗರ್ಸ್ ಪರ ಅರಿಫುಲ್ ಇಸ್ಲಾಂ (94) ಮತ್ತು ಅಹ್ರಾರ್ ಅಮೀನ್ (44) ರನ್​ಗಳನ್ನು ಗಳಿಸಿದರು. ಇವರಿಬ್ಬರು 138 ರನ್ ಗಳ ಜೊತೆಯಾಟವನ್ನು ನೀಡಿ ಭಾರತದ ಪುನರಾಗಮನದ ಭರವಸೆಯನ್ನು ಭಗ್ನಗೊಳಿಸಿದರು.

ಡಿಸೆಂಬರ್ 17ರಂದು ನಡೆಯಲಿರುವ 19 ವರ್ಷದೊಳಗಿನವರ ಏಷ್ಯಾಕಪ್ ಫೈನಲ್​​ನಲ್ಲಿ ಬಾಂಗ್ಲಾದೇಶ ತಂಡ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಎದುರಿಸಲಿದೆ.

ಪಾಕಿಸ್ತಾನ ವಿರುದ್ಧವೂ ಸೋತಿತ್ತು ಭಾರತ

ಭಾರತ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಎಸಿಸಿ ಅಂಡರ್​-19 ಪುರುಷರ ಏಷ್ಯಾ ಕಪ್(U19 Asia Cup) ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ(India U19 vs Pakistan) ತಂಡ 8 ವಿಕೆಟ್​ಗಳ ಸೋಲು ಕಂಡಿತ್ತು.

‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 260 ರನ್‌ ಬಾರಿಸಿತು. ದಿಟ್ಟ ರೀತಿಯಲ್ಲಿ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 2 ವಿಕೆಟ್​ ಕಳೆದುಕೊಂಡು 47 ಓವರ್‌ಗಳಲ್ಲಿ 263 ರನ್​ ಬಾರಿಸಿ ಗೆಲುವು ದಾಖಲಿಸಿತು. ಪಾಕಿಸ್ತಾನದ ಪರ ಅಮೋಘ ಶತಕ ಗಳಿಸಿದ ಅಜಾನ್ ಅವೈಸ್ (105*) ಗೆಲುವಿನ ರೂವಾರಿ ಎನಿಸಿದರು. ಶಹಜೇಬ್ ಖಾನ್ (63) ರನ್​ ಬಾರಿಸಿ ಅವೈಸ್​ಗೆ ಉತ್ತಮ ಸಾಥ್​ ನೀಡಿದ್ದರು.

ಭಾರತ ತಂಡ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಸೋಲು ಕಂಡಿದೆ. ಡಿಸೆಂಬರ್ 12ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳ ತಂಡದ ಸವಾಲನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ ಮಾತ್ರ ಭಾರತ ತಂಡ ಮುಂದಿನ ಹಂತಕ್ಕೇರಲಿದೆ.

Exit mobile version