Site icon Vistara News

ICC World Cup 2023 : ಬಾಂಗ್ಲಾ ಹುಲಿಯ ಹೊಟ್ಟೆ ಸೀಳಿದ ಭಾರತೀಯ ಅಭಿಮಾನಿಗಳು!

Shoaib Ali Bukhar

ಪುಣೆ: ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮತ್ತೊಂದು ಕಳಪೆ ವರ್ತನೆ ಬಯಲಾಗಿದೆ. ಬಾಂಗ್ಲಾದೇಶದ ಸೂಪರ್ ಅಭಿಮಾನಿ ಶೋಯೆಬ್ ಅಲಿ ಬುಖಾರಿ ಅವರಿಗೆ ಪುಣೆಯಲ್ಲಿ ಗುರುವಾರ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ವಿಶ್ವಕಪ್ ಪಂದ್ಯದ (ICC World Cup 2023) ವೇಳೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬಾಂಗ್ಲಾದೇಶವು ಭಾರತದ ವಿರುದ್ಧ ಸೋತ ನಂತರ ಕೆಲವು ಭಾರತೀಯ ಅಭಿಮಾನಿಗಳು ಬುಖಾರಿ ಅವರು ಹಿಡಿದುಕೊಂಡಿದ್ದ ಹುಲಿಯ ಹೊಟ್ಟೆ ಸೀಳಿ ಬಿಸಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಇದು ಟೀಕೆಗಳಿಗೆ ಗುರಿಯಾಗಿದೆ.

ಭಾರತೀಯ ಅಭಿಮಾನಿಗಳು ಈ ರೀತಿ ಮಾಡುವುದು ಇದೇ ಮೊದಲಲ್ಲ. ಅಹ್ಮದಾಬಾದ್​​ನಲ್ಲಿ ನಡೆದ ಭಾರತ-ಪಾಕ್ ಪಂದ್ಯದ ವೇಳೆ ಪಾಕಿಸ್ತಾನದ ವಿಕೆಟ್​ಕೀಪರ್​ ಮೊಹಮ್ಮದ್ ರಿಜ್ವಾನ್ ಮೇಲೆ ಟೀಕೆಗಳು ಮಾಡಿದ ನಂತರ ಭಾರತೀಯ ಅಭಿಮಾನಿಗಳು ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಗಮನ ಸೆಳೆದಿದ್ದಾರೆ. ಪ್ರೇಕ್ಷಕರ ಕಳಪೆ ವರ್ತನೆಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡಿತು.

ಈ ವಿಷಯದ ಬಗ್ಗೆ ಬಾಂಗ್ಲಾದೇಶವು ಐಸಿಸಿಗೆ ದೂರು ನೀಡದಿದ್ದರೂ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅವರ ನಡವಳಿಕೆಗಾಗಿ ಟೀಕೆಗಳನ್ನು ಎದುರಿಸುವುದು ಖಚಿತ. “ಅತಿಥಿ ದೇವೋ ಭವ” ಧ್ಯೇಯವಾಕ್ಯವಾಗಿರುವ ಭಾರತ ದೇಶದಲ್ಲಿ , ಇಂತಹ ಘಟನೆಗಳು ಭಾರತವನ್ನು ವಿಶ್ವ ವೇದಿಕೆಯಲ್ಲಿ ಕೆಟ್ಟದಾಗಿ ಬಿಂಬಿಸುತ್ತವೆ.

ಟೈಗರ್ ಶೋಯೆಬ್ ಯಾರು?

ಭಾರತೀಯ ಕ್ರಿಕೆಟ್ ಪಂದ್ಯವನ್ನು ಎಂದಿಗೂ ತಪ್ಪಿಸಿಕೊಳ್ಳದ ಸುಧೀರ್ ಕುಮಾರ್ ಚೌಧರಿಯಂತೆ, ಶೋಯೆಬ್ ಅಲಿ ಅಥವಾ ಟೈಗರ್ ಶೋಯೆಬ್ ಆ ದೇಶದ ತಂಡ ಸೂಪರ್ ಅಭಿಮಾನಿಗಳಲ್ಲಿ ಒಬ್ಬರು. ಟೈಗರ್ ಶೋಯೆಬ್ ತನ್ನ ದೇಹಕ್ಕೆ ಹುಲಿ ಬಣ್ಣ ಬಳಿದುಕೊಂಡು ಬರುತ್ತಾರೆ. ಬಾಂಗ್ಲಾದೇಶ ಕ್ರಿಕೆಟ್​ನ ಲಾಂಛನವಾಗಿ ಹುಲಿಯನ್ನು ಅವರು ತಮ್ಮ ತಲೆಯ ಮೇಲೆ ಹೊತ್ತಿಕೊಂಡಿರುತ್ತಾರೆ. ಅವರು ಬಹಳ ಸಮಯದಿಂದ ಭಾರತ ಮತ್ತು ವಿದೇಶಗಳಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದಾರೆ ಮತ್ತು ಬಾಂಗ್ಲಾದೇಶ ತಂಡದ ಒಂದೇ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳುವುದಿಲ್ಲ.

ಟೈಗರ್ ಶೋಯೆಬ್ ದೀರ್ಘಕಾಲದಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದರೂ, ಈ ಬಾರಿ ಅವರು ಅನಿರೀಕ್ಷಿತವಾದದ್ದನ್ನು ಎದುರಿಸಿದ್ದಾರೆ.

ಈ ಸುದ್ದಿಗಳನ್ನೂ ಓದಿ
Ravindra Jadeja : ಬೆಸ್ಟ್​ ಫೀಲ್ಡರ್​​ ರವೀಂದ್ರ ಜಡೇಜಾಗೂ ಗಾಯದ ಸಮಸ್ಯೆ
Sachin Tendulkar: ನವೆಂಬರ್​ 1ರಂದು ಸಚಿನ್ ತೆಂಡೂಲ್ಕರ್​ ಪ್ರತಿಮೆ ಅನಾವರಣ
IND vs NZ: ನ್ಯೂಜಿಲ್ಯಾಂಡ್​ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಬದಲಾವಣೆ

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿದ್ದರು. ಕಾರಿನಲ್ಲಿ ಹೋಗುತ್ತಿದ್ದ ರೋಹಿತ್ ಟೈಗರ್ ಶೋಯೆಬ್ ಅವರನ್ನು ನೋಡಿ ಕಾರಿನ ಕಿಟಕಿಯಿಂದ ಕೆಳಗಿಳಿದು, “ಅರೆ ತು ಯಾಹಾ ಅಗಯಾ (ಹೇ, ನೀವೂ ಇಲ್ಲಿಗೆ ಬಂದಿದ್ದೀರಿ!) ಎಂದು ಹೇಳಿದ್ದರು.

“ತಂಡವು ಮೈದಾನದೊಳಗೆ ತರಬೇತಿ ಪಡೆಯುತ್ತಿದ್ದಾಗ ನಾನು ಇತರ ಕೆಲವು ಬಾಂಗ್ಲಾದೇಶಿ ಅಭಿಮಾನಿಗಳೊಂದಿಗೆ ಕ್ರೀಡಾಂಗಣದ ಮುಖ್ಯ ದ್ವಾರದ ಹೊರಗೆ ಕಾಯುತ್ತಿದ್ದೆ. ಇದ್ದಕ್ಕಿದ್ದಂತೆ ನಾನು ರೋಹಿತ್ ಶರ್ಮಾ ಅವರನ್ನು ಡ್ರೈವಿಂಗ್ ಸೀಟ್​ನಲ್ಲಿ ನೋಡಿದೆ. ನಾನು ಅವನ ಹೆಸರನ್ನು ಕೂಗಿದೆ. ಮುಂದಿನ ಕ್ಷಣ, ರೋಹಿತ್ ತನ್ನ ಕಾರನ್ನು ನಿಲ್ಲಿಸಿ ನನ್ನೊಂದಿಗೆ ಮಾತನಾಡಿದರು. ಅದಕ್ಕಾಗಿಯೇ ಅವರು ದೊಡ್ಡ ಆಟಗಾರ, ಅವರು ತುಂಬಾ ಒಳ್ಳೆಯ ವ್ಯಕ್ತಿ” ಎಂದು ಶೋಯೆಬ್ ಅಲಿ ಬುಖಾರಿ ಹೇಳಿದ್ದರು.

ಅಭಿಮಾನಿಗಳ ಅತಿರೇಕ ನಿಯಂತ್ರಣಕ್ಕೆ ನಿಯಮಗಳು ಇಲ್ಲ

ಪಂದ್ಯದ ವೇಳೆ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದರೆ ಅವರನ್ನು ದಂಡಿಸವ ನಿಯಮ ಐಸಿಸಿ ಬಳಿ ಇಲ್ಲ. ಆದರೆ, ವ್ಯಕ್ತಿಯೊಬ್ಬ ನಿರಂತರವಾಗಿ ಕಿರುಕೊಳ ಕೊಟ್ಟರೆ ಆತನನ್ನು ಮೈದಾನಕ್ಕೆ ನಿರ್ಬಂಧಿಸಬಹುದು. ಗುಂಪಾಗಿ ಮಾಡಿದರೆ ನಿಯಂತ್ರಣವೇ ಕಷ್ಟ. ಹೀಗಾಗಿ ಶೋಯೆಬ್ ಅಲಿ ಬುಖಾರಿ ಅಲಿಯಾಸ್ ಟೈಗರ್ ಶೋಯೆಬ್​ಗೆ ಕಿರುಕುಳ ನೀಡಿದ ಅಭಿಮಾನಿಗಳನ್ನು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಗುರುತಿಸಿದರೆ, ಅವರನ್ನು ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ನಿಷೇಧಿಸಬಹುದು.

“ಐಸಿಸಿ ಪ್ರತಿಯೊಂದು ದೂರನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಆದರೆ ಇರುವ ನಿಯಮದ ನೆರವಿನಿಂದ ಕಠಿಣ ಕ್ರಮ ತೆಗೆದುಕೊಳ್ಳುವುದು ತುಂಬಾ ಕಷ್ಟ. ವರ್ಣಭೇದ ನೀತಿಯ ಆರೋಪಗಳಿದ್ದರೆ ಐಸಿಸಿ ವ್ಯಕ್ತಿಗಳನ್ನು ಗುರುತಿಸಬಹುದು. ಸಾವಿರಾರು ಜನರು ಘೋಷಣೆ ಕೂಗುತ್ತಿದ್ದರೆ, ಏನು ಮಾಡಲು ಸಾಧ್ಯವಿಲ್ಲ. ಗುಂಪು ಕೃತ್ಯದಿಂದ ಬೇರೆ ಪ್ರೇಕ್ಷಕರಿಗೆ ದೈಹಿಕ ಹಾನಿಯಾಗದ ಹೊರತು ಕ್ರಮ ಕೈಗೊಳ್ಳುವುದು ಕಷ್ಟ ಎಂಬುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Exit mobile version