ಹೈದರಾಬಾದ್: ಇಲ್ಲಿ ನಡೆದ ವಿಶ್ವಕಪ್ನ(icc world cup 2023) ಲೀಗ್ ಪಂದ್ಯದಲ್ಲಿ ಪಾಕಿಸ್ತಾನ(Pakistan vs Netherlands) ತಂಡ ನೆದರ್ಲೆಂಡ್ಸ್ ವಿರುದ್ಧ 81 ರನ್ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇದೇ ಪಂದ್ಯದಲ್ಲಿ ನೆದರ್ಲೆಂಡ್ಸ್ನ ಆಲ್ರೌಂಡರ್ ಬಾಸ್ ಡಿ ಲೀಡೆ(Bas de Leede) ಅವರು ಹ್ಯಾರಿಸ್ ರವೂಫ್(Haris Rauf) ಎಸೆತಕ್ಕೆ ಸಿಕ್ಸರ್ ಬಾರಿಸಿದ ವಿಡಿಯೊ ವೈರಲ್ ಆಗಿದೆ.(Viral Video) ಈ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಹ್ಯಾರಿಸ್ ರವೂಫ್ ಅವರು 29ನೇ ಓವರ್ನ ನಾಲ್ಕನೇ ಎಸೆತವನ್ನು ಬೌನ್ಸರ್ ಎಸೆದರು. ಕ್ರೀಸ್ನಲ್ಲಿದ್ದ ಬಾಸ್ ಡಿ ಲೀಡೆ ಚೆಂಡನ್ನು ಲೀಲಾಜಾಲವಾಗಿ ಸಿಕ್ಸರ್ಗೆ ಬಡಿದಟ್ಟಿದರು. ಸೊಗಸಾದ ಸಿಕ್ಸರ್ ಬಾರಿಸಿದ ಸಂತಸದಲ್ಲಿ ಅವರು ರವೂಫ್ಗೆ ಕಣ್ಣು ಹೊಡೆದು ನಗೆ ಬೀರಿದರು. ಇದೇ ವೇಳೆ ಕಾಮೆಂಟ್ರಿಯಲ್ಲಿದ್ದವರು ‘ಅಬ್ಬಾ ಎಂತದ ಹೊಡೆದ. ನಿಜಕ್ಕೂ ಅದ್ಭುತ ಸಿಕ್ಸರ್’ ಎಂದು ಬಣ್ಣಿಸಿದರು.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಬಾಸ್ ಡಿ ಲೀಡೆ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿದರು. ಬೌಲಿಂಗ್ನಲ್ಲಿ 9 ಓವರ್ ಎಸೆದು ಕೇವಲ 62 ರನ್ ವೆಚ್ಚದಲ್ಲಿ 4 ವಿಕೆಟ್ ಪಡೆದರು.
ಇದನ್ನೂ ಓದಿ ICC World Cup 2023 : ಏಕ ದಿನ ಕ್ರಿಕೆಟ್ ಮಾದರಿ ಯುಗಾಂತ್ಯ? ಮೈದಾನಗಳು ಯಾಕೆ ಖಾಲಿ ಖಾಲಿ?
ಪಂದ್ಯ ಗೆದ್ದ ಪಾಕ್
ಹೈದರಾಬಾದ್ನ “ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ”ನಲ್ಲಿ(Rajiv Gandhi International Stadium, Hyderabad) ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಾಕಿಸ್ತಾನ ಬ್ಯಾಟರ್ಗಳು ನೆದರ್ಲೆಂಡ್ಸ್ನ ಘಾತಕ ಬಾಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪರದಾಡಿ 49 ಓವರ್ಗಳಲ್ಲಿ 286 ರನ್ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿಕೊಂಡು ಹೋದ ನೆದರ್ಲೆಂಡ್ಸ್ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡು 41 ಓವರ್ಗಳಲ್ಲಿ 205 ರನ್ ಗಳಿಶಲಷ್ಟೇ ಶಕ್ತವಾಯಿತು.
ನಾಟಕೀಯ ಕುಸಿತ ಕಂಡ ನೆದರ್ಲೆಂಡ್ಸ್
ಒಂದು ಹಂತದಲ್ಲಿ ನೆದರ್ಲೆಂಡ್ಸ್ ಗೆಲ್ಲುವ ವಾತಾವರಣ ನಿರ್ಮಾಣವಾಗಿತ್ತು. ಪಾಕಿಸ್ತಾನ ದುರ್ಬಲ ತಂಡದೆದುರು ಸೋಲು ಕಾಣುವ ಸ್ಥಿತಿಯಲ್ಲಿತ್ತು. ವಿಕ್ರಮಜಿತ್ ಸಿಂಗ್ ಆರಂಭದಿಂದಲೇ ಆಕ್ರಮಣಕಾರಿ ಆಡವಾಡಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಗೆ ಇನ್ನೊಂದು ತುದಿಯಲ್ಲಿ ಬೌಲಿಂಗ್ನಲ್ಲಿ ಮಿಂಚಿದ್ದ ಬಾಸ್ ಡಿ ಲೀಡೆ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಸೇರಿಕೊಂಡು ಪಾಕ್ ಬೌಲರ್ಗಳ ಬೆಂಡೆತ್ತಿದರು. ಆದರೆ ಉಭಯ ಆಟಗಾರರ ವಿಕೆಟ್ ಬಿದ್ದ ಬಳಿಕ ನೆದರ್ಲೆಂಡ್ಸ್ ನಾಟಕೀಯ ಕುಸಿತ ಕಂಡಿತು. ವಿಕ್ರಮಜಿತ್ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿಂದ 52 ರನ್ ಬಾರಿಸಿ ಶದಾಬ್ಗೆ ವಿಕೆಟ್ ಒಪ್ಪಿಸಿದರು. 67 ರನ್ ಗಳಿಸಿದ ಲೀಡೆ ವಿಕೆಟ್ ನವಾಜ್ ಕಿತ್ತರು. ಮುಂದಿನ ಓವರ್ನಲ್ಲಿ ಹ್ಯಾರಿಸ್ ಹ್ಯಾರಿಸ್ ರವೂಫ್ 2 ವಿಕೆಟ್ ಕಿತ್ತು ಪಾಕ್ಗೆ ಮುನ್ನಡೆ ತಂದುಕೊಟ್ಟರು.
ಪರದಾಡಿದ ಬಾಬರ್
ಏಕದಿನ ಕ್ರಿಕೆಟ್ನ ನಂ.1 ಬ್ಯಾಟರ್ ಬಾಬರ್ ಅಜಂ ರನ್ ಗಳಿಸಲು ಸಂಪೂರ್ಣವಾಗಿ ಪರದಾಡಿದರು. 18 ಎಸೆತ ಎದುರಿಸಿ ಗಳಿಸಿದ್ದು ಕೇವಲ 5 ರನ್. ಒಂದು ಬೌಂಡರಿ ಬಾರಿಸಲು ಅವರಿಂದ ಸಾಧ್ಯವಾಗಲಿಲ್ಲ. ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡವನ್ನು ಮೇಲೆತ್ತಿದ್ದು ಮಧ್ಯಮ ಕ್ರಮಾಂಕದ ಆಟಗಾರರಾದ ಶಕೀಲ್ ಮತ್ತು ರಿಜ್ವಾನ್. ಉಭಯ ಆಟಗಾರರು ತಾಳ್ಮೆಯುವ ಬ್ಯಾಟಿಂಗ್ ನಡೆಸಿ ಉತ್ತಮ ಇನಿಂಗ್ಸ್ ಕಟ್ಟಿದರು. ಜತೆಗೆ ಅರ್ಧಶತಕವನ್ನೂ ಬಾರಿಸಿದರು. ನಾಲ್ಕನೇ ವಿಕೆಟ್ಗೆ 120 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು