ಕ್ರೈಸ್ಟ್‌ಚರ್ಚ್ : ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಪಲ್ಯ ಎದುರಿಸಿದ ಕಾರಣ ಪ್ರವಾಸಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸಾಧಾರಣ ಮೊತ್ತ ಪೇರಿಸಿ ಆಲ್‌ಔಟ್ ಆಯಿತು. ವಾಷಿಂಗ್ಟನ್ ಸುಂದರ್ ಆಪತ್ಬಾಂಧವರಂತೆ (೫೧) ಅರ್ಧ ಶತಕ ಬಾರಿಸಿ ತಂಡದ ಮರ್ಯಾದೆ ಕಾಪಾಡಿದ್ದು ಟೀಮ್ ಇಂಡಿಯಾಗೆ ೪೭.೩ ಓವರ್‌ಗಳಲ್ಲಿ ೨೧೯ ರನ್ ಪೇರಿಸಲು ನೆರವಾಗಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಇಲ್ಲಿನ ಹ್ಯಾಗ್ಲೆ ಓವಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಭಾರತ ತಂಡವನ್ನು ತಮ್ಮ ಬೌಲಿಂಗ್ ಸಾಮರ್ಥ್ಯದ ಮೂಲಕ ಕಟ್ಟಿ ಹಾಕಿ ೨೨೦ ರನ್‌ಗಳ ಸಾಧಾರಣ ಗೆಲುವಿನ ಗುರಿಯನ್ನು ಪಡೆಯಿತು. ಭಾರತ ಪರ ಶ್ರೇಯಸ್ ಅಯ್ಯರ್ ೪೯ ರನ್ ಬಾರಿಸಿ ೧ ರನ್‌ಗಳಿಂದ ಮತ್ತೊಂದು ಅರ್ಧ ಶತಕ ಬಾರಿಸುವ ಅವಕಾಶ ಕಳೆದುಕೊಂಡರು.
ನಾಯಕ ಶಿಖರ್ ಧವನ್ (೨೮), ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ (೧೩), ಸೂರ್ಯಕುಮಾರ್ ಯಾದವ್ (೬) ಬೇಗನೆ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ ೧೦ ರನ್‌ಗಳಿಗೆ ವಿಕೆಟ್ ಒಪ್ಪಿಸಿ ಟೀಕೆಗೆ ಒಳಗಾದರು. ದೀಪಕ್ ಹೂಡ ಹಾಗೂ ದೀಪಕ್ ಚಾಹರ್ ತಲಾ ೧೨ ರನ್ ಕೊಡುಗೆ ಕೊಟ್ಟರು.
ನ್ಯೂಜಿಲೆಂಡ್ ಪರ ಬೌಲಿಂಗ್‌ನಲ್ಲಿ ಆಡಂ ಮಿಲ್ನೆ ೫೭ ರನ್‌ಗಳಿಗೆ ೩ ವಿಕೆಟ್ ಹಾಗೂ ಡ್ಯಾರಿಲ್ ಮಿಚೆಲ್ ೨೫ಕ್ಕೆ೩ ವಿಕೆಟ್ ಕಬಳಿಸಿ ಭಾರತದ ಆಘಾತ ಕೊಟ್ಟರು. ಟಿಮ್ ಸೌಥೀ ೩೬ರನ್‌ಗಳಿಗೆ ೨ ವಿಕೆಟ್ ಪಡೆದರು.
ಪಂತ್ ಮತ್ತೆ ವಿಫಲ
ಈಗಾಗಲೇ ಸತತ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದ ರಿಷಭ್ ಪಂತ್ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್ ವೈಫಲ್ಯದ ಓಟವನ್ನು ಮುಂದುವರಿಸಿದ್ದು ಟೀಮ್ ಇಂಡಿಯಾ ಅಭಿಮಾನಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಸಂಜು ಸ್ಯಾಮ್ಯನ್ ಅವರಂತಹ ಸಮರ್ಥ ಆಟಗಾರ ಇರುವ ವೇಳೆ ಪ್ರತಿ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರುವ ಪಂತ್ಗೆ ಅವಕಾಶ ನೀಡಿದ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂತ್ ಈ ಪಂದ್ಯದಲ್ಲಿ ಕೇವಲ 10 ರನ್‌ಗಳಿಗೆ ಆಟಮುಗಿಸಿದರು. ಉಳಿದಂತೆ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್(6) ಮತ್ತು ಶುಭಮನ್ ಗಿಲ್(13) ಬೇಗನೆ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನೆಡೆಯಾಗಿ ಪರಿಣಮಿಸಿತು.
ಸ್ಕೋರ್ ವಿವರ : ಭಾರತ ೪೭.೩ ಓವರ್‌ಗಳಲ್ಲಿ ೨೧೯ (ವಾಷಿಂಗ್ಟನ್ ಸುಂದರ್ ೫೧, ಶ್ರೇಯಸ್ ಅಯ್ಯರ್ ೪೯; ಡ್ಯಾರಿಲ್ ಮಿಚೆಲ್ ೨೫ಕ್ಕೆ೩, ಆಡಂ ಮಿಲ್ನೆ ೫೭ಕ್ಕೆ೩).
ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಪಂದ್ಯ ಮಳೆಯಿಂದ ರದ್ದು