ನವದೆಹಲಿ: 2023 ರ ಕ್ರಿಕೆಟ್ ವಿಶ್ವಕಪ್ (World Cup 2023) ಪಂದ್ಯಗಳ ಟಿಕೆಟ್ಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) 4 ಲಕ್ಷ ಹೆಚ್ಚುವರಿ ಟಿಕೆಟ್ಗಳನ್ನು ಮಾರಾಟ ಮಾಡುವುದಾಗಿ ಬುಧವಾರ ಪ್ರಕಟಿಸಿದೆ. ಎರಡನೇ ಹಂತದಲ್ಲಿ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 8 ಗಂಟೆಯಿಂದ ಟಿಕೆಟ್ಗಳು ಮಾರಾಟವಾಗಲಿದೆ ಎಂದು ಬಿಸಿಸಿಐ (BCCI) ಹೇಳಿದೆ.
ಆಗಸ್ಟ್ 25ರಿಂದ ಸೆಪ್ಟೆಂಬರ್ 3 ರವರೆಗೆ ನಡೆದ ಮೊದಲ ಹಂತದ ಮಾರಾಟದಲ್ಲಿ ಆತಿಥೇಯ ಭಾರತ ಒಳಗೊಂಡ ಪಂದ್ಯಗಳು ಸೇರಿದಂತೆ ವಿಶ್ವಕಪ್ ಪಂದ್ಯಗಳ ಟಿಕೆಟ್ ಭರ್ಜರಿಯಾಗಿ ಮಾರಾಟ ಕಂಡಿದ್ದವು. ಅಕ್ಟೋಬರ್ 14ರಂದು ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ನರೇಂದ್ರ ಮೋದಿ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು ಹೋಲಿಸಿದಾಗ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕೆಲವೇ ಕೆಲವು ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ ಎಂಬುದಾಗಿಯೂ ಅಭಿಮಾನಿಗಳು ಈ ವೇಳೆ ಬೇಸರ ವ್ಯಕ್ತಪಡಿಸಿದ್ದರು.
ಸೆಪ್ಟೆಂಬರ್ 8 ರಂದು ಎಲ್ಲಾ ಪಂದ್ಯಗಳ ಟಿಕೆಟ್ಗಳ ಸಾಮಾನ್ಯ ಮಾರಾಟ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಅಭಿಮಾನಿಗಳು ಪಂದ್ಯಾವಳಿಗಳ ಹೃದಯ ಎಂಬುದನ್ನು ಬಿಸಿಸಿಐ ಒಪ್ಪಿಕೊಳ್ಳುತ್ತದೆ. ಅವರ ಅಚಲ ಉತ್ಸಾಹ, ತೊಡಗಿಸಿಕೊಳ್ಳುವಿಕೆ ಮತ್ತು ಕೊಡುಗೆಗಳು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಯಶಸ್ಸಿಗೆ ಪ್ರಮುಖ ಕಾರಣ ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳೊಂದಿಗೆ ಚರ್ಚಿಸಿದ ನಂತರ ಬಿಸಿಸಿಐ ಬಹು ನಿರೀಕ್ಷಿತ ಪಂದ್ಯಾವಳಿಗೆ ಸುಮಾರು 400,000 ಟಿಕೆಟ್ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಕ್ರಮವು ಇನ್ನಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಟಿಕೆಟ್ ಖರೀದಿಸುವ ಅವಕಾಶ ನೀಡುವ ಗುರಿಯನ್ನು ಹೊಂದಿದೆ, ಈ ಐತಿಹಾಸಿಕ ಘಟನೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ಅದು ಹೇಳಿದೆ. ಕ್ರಿಕೆಟ್ ವಿಶ್ವಕಪ್ನ ಅಧಿಕೃತ ವೆಬ್ಸೈಟ್ ಮೂಲಕ ಟಿಕೆಟ್ಗಳ ಮಾರಾಟ ನಡೆಯಲಿದೆ ಎಂದು ಬಿಸಿಸಿಐ ದೃಢಪಡಿಸಿದೆ.
ವಿಶ್ವಕಪ್ ಟಿಕೆಟ್ಗಳ ಮಾರಾಟದ ಮೊದಲ ಹಂತವು ಸೆಪ್ಟೆಂಬರ್ 3 ರಂದು ಕೊನೆಗೊಂಡಿತ್ತು. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್ಗಳ ಮಾರಾಟ ಸೆಪ್ಟೆಂಬರ್ 15 ರಂದು ನಡೆಯಲಿದೆ.
ವಿಶ್ವಕಪ್ ಟಿಕೆಟ್ ಮಾರಾಟವು ಅಭಿಮಾನಿಗಳಿಂದ ಸಾಕಷ್ಟು ಬೇಸರಕ್ಕೂ ಕಾರಣವಾಗಿತ್ತು. ಅಂತಿಮ ವೇಳಾಪಟ್ಟಿಯನ್ನು ದೃಢೀಕರಿಸುವಲ್ಲಿ ವಿಳಂಬವಾದ ಕಾರಣ ಅದನ್ನು ಟಿಕೆಟ್ ವಿತರಣೆಯೂ ವಿಳಂಬವಾಯಿತು. ವ್ಯವಸ್ಥಾಪನಾ ಸಮಸ್ಯೆಗಳನ್ನು ಪರಿಹರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕಳೆದ ತಿಂಗಳು ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿತು. ಟಿಕೆಟ್ ಮಾರಾಟದ ಪ್ರಕಟಣೆಯಲ್ಲಿನ ವಿಳಂಬವು ಗೊಂದಲಕ್ಕೆ ಕಾರಣವಾಗಿದೆ ಮತ್ತು ಪ್ರಯಾಣಿಸುವ ಅಭಿಮಾನಿಗಳು ವಿಶ್ವಕಪ್ ಸಮಯದಲ್ಲಿ ಅವರು ಎದುರಿಸಬಹುದಾದ ವ್ಯವಸ್ಥಾಪನಾ ಸಮಸ್ಯೆಗಳ ಬಗ್ಗೆ ಆತಂಕ ಎದುರಾಗಿದೆ.
ಇದನ್ನೂ ಓದಿ : Asia Cup 2023 : ಪಾಕ್ನಲ್ಲಿ ಏಷ್ಯಾ ಕಪ್ ಪಂದ್ಯ ನಡೆಯುವಾಗ ಲೈಟ್ ಆಫ್; ಫುಲ್ ಟ್ರೋಲ್!
ಮೊದಲ ಹಂತದಲ್ಲಿ, ಆಗಸ್ಟ್ 28ರಂದು ಭಾರತವನ್ನು ಹೊರತುಪಡಿಸಿ ಎಲ್ಲಾ ತಂಡಗಳ ಅಭ್ಯಾಸ ಮತ್ತು ಈವೆಂಟ್ ಪಂದ್ಯಗಳಿಗೆ ಟಿಕೆಟ್ ಮಾರಾಟ ಪ್ರಾರಂಭವಾಗಿತ್ತು. ಆಗಸ್ಟ್ 30 ರಿಂದ ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ನಡೆಯಲಿರುವ ಭಾರತದ ಅಭ್ಯಾಸ ಪಂದ್ಯಗಳ ಟಿಕೆಟ್ಗಳ ಲಭ್ಯವಿತ್ತು. ಒಂದು ದಿನದ ನಂತರ, ಚೆನ್ನೈ (ಆಸ್ಟ್ರೇಲಿಯಾ ವಿರುದ್ಧ, ಅಕ್ಟೋಬರ್ 8), ದೆಹಲಿ (ಅಫ್ಘಾನಿಸ್ತಾನ ವಿರುದ್ಧ, ಅಕ್ಟೋಬರ್ 11) ಮತ್ತು ಪುಣೆ (ಬಾಂಗ್ಲಾದೇಶ ವಿರುದ್ಧ, ಅಕ್ಟೋಬರ್ 19) ಪಂದ್ಯಗಳ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಯಿತು. ಸೆಪ್ಟೆಂಬರ್ 1 ರಿಂದ ಧರ್ಮಶಾಲಾ (ನ್ಯೂಜಿಲೆಂಡ್ ವಿರುದ್ಧ, ಅಕ್ಟೋಬರ್ 22), ಲಕ್ನೋ (ಇಂಗ್ಲೆಂಡ್ ವಿರುದ್ಧ, ಅಕ್ಟೋಬರ್ 29) ಮತ್ತು ಮುಂಬೈ (ಶ್ರೀಲಂಕಾ ವಿರುದ್ಧ, ನವೆಂಬರ್ 2) ನಲ್ಲಿ ಆತಿಥೇಯರ ಪಂದ್ಯಗಳಿಗೆ ಅಭಿಮಾನಿಗಳು ಟಿಕೆಟ್