Site icon Vistara News

BCCI: ವಿಶ್ವಕಪ್​ ಪಂದ್ಯ ಆಯೋಜನೆ ಕೈತಪ್ಪಿದ ಸ್ಟೇಡಿಯಂಗಳಿಗೆ ಬಿಗ್ ಆಫರ್​ ಘೋಷಿಸಿದ ಬಿಸಿಸಿಐ

BCCI logo

ಮುಂಬಯಿ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ(ICC World Cup) ಆತಿಥ್ಯದಲ್ಲಿ ವಿಚಾರದಲ್ಲಿ ಬಿಸಿಸಿಐ(BCCI) ವಿರುದ್ಧ ಭಾರಿ ಅಸಮಾಧಾನ ವ್ಯಕ್ತವಾಗಿತ್ತು. ಅಹ್ಮದಾಬಾದ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ, ಹಾಗೆಯೇ ದೇಶದ ಬಹುತೇಕ ಕ್ರಿಕೆಟ್‌ ಕೇಂದ್ರ ಗಳನ್ನು ನಿರ್ಲಕ್ಷಿಸಲಾಗಿದೆ, ರಾಜಕೀಯ ಹಿತಾಸಕ್ತಿಯೇ ಇಲ್ಲಿ ಮುಖ್ಯವಾದಂತಿದೆ ಎಂಬ ಆರೋಪ ಕೇಳಿಬಂದಿತ್ತು.

ಅವಕಾಶ ವಂಚಿತ ಪ್ರಮುಖ ಕೇಂದ್ರಗಳಾದ ಮೊಹಾಲಿ, ನಾಗ್ಪುರ, ಇಂದೋರ್‌, ರಾಜ್‌ಕೋಟ್‌, ರಾಂಚಿ ಮತ್ತು ತಿರುವನಂತಪುರ ಕ್ರಿಕೆಟ್​ ಮಂಡಳಿ ಇದೇ ವಿಚಾರವಾಗಿ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಅದರಲ್ಲೂ ಭಾರತ ಆಯೋಜಿಸಿದ ಹಿಂದಿನೆರಡು ವಿಶ್ವಕಪ್‌ ಪಂದ್ಯಾವಳಿಯ ವೇಳೆ ಮನ್ನಣೆ ನೀಡಲಾಗಿದ್ದ ಮೊಹಾಲಿಗೆ ಈ ಬಾರಿ ಒಂದೂ ಪಂದ್ಯವನ್ನು ನೀಡದಿರುವುದು ಭಾರಿ ಸುದ್ದಿಯಾಗಿತ್ತು. ಈ ಹಿಂದಿನ ವಿಶ್ವಕಪ್​ ಟೂರ್ನಿಯಲ್ಲಿ ಇಲ್ಲಿ ಭಾರತ-ಪಾಕಿಸ್ಥಾನ ಪಂದ್ಯವನ್ನೂ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಐತಿಹಾಸಿಕ ಪಾರಂಪರ್ಯ ಹೊಂದಿರುವ ಮೊಹಾಲಿಯನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಬಿಸಿಸಿ ವಿಶ್ವ ಕಪ್​ ಪಂದ್ಯದ ಆತಿಥ್ಯ ಕೈ ತಪ್ಪಿದ ಮೈದಾನಗಳಿಗೆ ಬಿಗ್​ ಆಫರ್​ವೊಂದನ್ನು ನೀಡಲು ಮುಂದಾಗಿದೆ.

ಏಕದಿನ ವಿಶ್ವಕಪ್‌ಗೆ ಅವಕಾಶ ಸಿಗದ ಕ್ರೀಡಾಂಗಣಗಳಲ್ಲಿ ಮುಂಬರುವ ಪ್ರಮುಖ ತವರು ಏಕದಿನ ಪಂದ್ಯಗಳ ಸರಣಿಯನ್ನು ಆಡಿಸುವ ಚಿಂತನೆ ಬಿಸಿಸಿಐ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, “ತವರಿನಲ್ಲಿ ನಡೆಯುವ ಸರಣಿಗಳ ಪಂದ್ಯಕ್ಕೆ ವಿಶ್ವಕಪ್​ ಪಂದ್ಯಗಳ ಆತಿಥ್ಯ ಸಿಗದ ಕ್ರೀಡಾಂಗಣಗಳಿಗೆ ಪಂದ್ಯ ನಡೆಸಲು ಮೊದಲ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.

“ಏಕದಿನ ವಿಶ್ವಕಪ್​ ಆತಿಥ್ಯ ಪಡೆದ ಎಲ್ಲ ಕ್ರಿಕೆಟ್​ ಸ್ಟೇಡಿಯಂಗೆ ಮುಂದಿನ ತವರಿನಲ್ಲಿ ನಡೆಯುವ ಸರಣಿಗೆ ಕಡಿಮೆ ಆತಿಥ್ಯ ನೀಡಲಾಗುತ್ತದೆ. ಈ ಅವಕಾಶವನ್ನು ಇತರ ಸ್ಟೇಡಿಯಂಗೆ ನೀಡಲಾಗುತ್ತದೆ. ಇದೇ ವಿಚರವಾಗಿ ಎಲ್ಲ ರಾಜ್ಯ ಕ್ರಿಕೆಟ್​ ಸಂಘಗಳ ಜತೆ ಮಾತುಕತೆ ನಡೆಸಲಾಗಿದೆ. ಹಾಗೂ ಇದಕ್ಕೆ ಸರ್ವಾನುಮತದ ಒಪ್ಪಿಗೆಯೂ ಸಿಕ್ಕಿದೆ” ಎಂದು ಎಂದು ಜಯ್​ ಶಾ ಹೇಳಿದ್ದಾರೆ.

ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಇಂಡೋ-ಪಾಕ್​ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ!

ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್​ನ ಏಕದಿನ ಪಂದ್ಯ ಅಕ್ಟೋಬರ್​ 15 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವಿಶ್ವ ಕಪ್​ ಪಂದ್ಯಗಳ ವೇಳಾಪಟ್ಟಿ

ದಿನಾಂಕಪಂದ್ಯತಾಣ
ಅಕ್ಟೋಬರ್​ 5 ಗುರುವಾರಇಂಗ್ಲೆಂಡ್​vsನ್ಯೂಜಿಲ್ಯಾಂಡ್​ಅಹಮದಾಬಾದ್​
ಅಕ್ಟೋಬರ್​ 6 ಶುಕ್ರವಾರಪಾಕಿಸ್ತಾನvsಕ್ವಾಲಿಫೈಯರ್​-1ಹೈದರಾಬಾದ್​
ಅಕ್ಟೋಬರ್​ 7 ಶನಿವಾರಬಾಂಗ್ಲದೇಶ-ಅಫಘಾನಿಸ್ತಾನಧರ್ಮಶಾಲಾ
ಅಕ್ಟೋಬರ್​ 7 ಶನಿವಾರದಕ್ಷಿಣ ಆಫ್ರಿಕಾvsಕ್ವಾಲಿಫೈಯರ್​-2ದೆಹಲಿ
ಅಕ್ಟೋಬರ್​ 8 ಭಾನುವಾರಭಾರತvsಆಸ್ಟ್ರೇಲಿಯಾಚೆನ್ನೈ
ಅಕ್ಟೋಬರ್​ 9 ಸೋಮವಾರನ್ಯೂಜಿಲ್ಯಾಂಡ್​vsಕ್ವಾಲಿಫೈಯರ್​-1ಹೈದರಾಬಾದ್​
ಅಕ್ಟೋಬರ್​ 10 ಮಂಗಳವಾರಇಂಗ್ಲೆಂಡ್​vsಬಾಂಗ್ಲಾದೇಶಧರ್ಮಶಾಲಾ
ಅಕ್ಟೋಬರ್​ 11 ಬುಧವಾರಭಾರತvsಅಫಘಾನಿಸ್ತಾನದೆಹಲಿ
ಅಕ್ಟೋಬರ್​ 12 ಗುರುವಾರಪಾಕಿಸ್ತಾನvsಕ್ವಾಲಿಫೈಯರ್​-2ಹೈದರಾಬಾದ್
ಅಕ್ಟೋಬರ್​ 13 ಶುಕ್ರವಾರದಕ್ಷಿಣ ಆಫ್ರಿಕಾvsಆಸ್ಟ್ರೇಲಿಯಾಲಕ್ನೋ
ಅಕ್ಟೋಬರ್​ 14 ಶನಿವಾರಇಂಗ್ಲೆಂಡ್​vsಅಫಘಾನಿಸ್ತಾನದೆಹಲಿ
ಅಕ್ಟೋಬರ್​ 14 ಶನಿವಾರನ್ಯೂಜಿಲ್ಯಾಂಡ್​​vsಬಾಂಗ್ಲಾದೇಶಚೆನ್ನೈ
ಅಕ್ಟೋಬರ್​ 15 ಭಾನುವಾರಭಾರತvsಪಾಕಿಸ್ತಾನಅಹಮದಾಬಾದ್​
ಅಕ್ಟೋಬರ್​ 16 ಸೋಮವಾರಆಸ್ಟ್ರೇಲಿಯಾvsಕ್ವಾಲಿಫೈಯರ್​-2ಲಕ್ನೋ
ಅಕ್ಟೋಬರ್​ 17 ಮಂಗಳವಾರದಕ್ಷಿಣ ಆಫ್ರಿಕಾvsಕ್ವಾಲಿಫೈಯರ್​-1ಧರ್ಮಶಾಲಾ
ಅಕ್ಟೋಬರ್​ 18 ಬುಧವಾರನ್ಯೂಜಿಲ್ಯಾಂಡ್​​vsಅಫಘಾನಿಸ್ತಾನಚೆನ್ನೈ
ಅಕ್ಟೋಬರ್​ 19 ಗುರುವಾರಭಾರತvsಬಾಂಗ್ಲಾದೇಶಪುಣೆ
ಅಕ್ಟೋಬರ್​ 20 ಶುಕ್ರವಾರಆಸ್ಟ್ರೇಲಿಯಾvsಪಾಕಿಸ್ತಾನಬೆಂಗಳೂರು
ಅಕ್ಟೋಬರ್​ 21 ಶನಿವಾರಇಂಗ್ಲೆಂಡ್​vsದಕ್ಷಿಣ ಆಫ್ರಿಕಾಮುಂಬಯಿ
ಅಕ್ಟೋಬರ್​ 21 ಶನಿವಾರಕ್ವಾಲಿಫೈಯರ್​-1vsಕ್ವಾಲಿಫೈಯರ್​-2ಲಕ್ನೋ
ಅಕ್ಟೋಬರ್​ 22 ಭಾನುವಾರಭಾರತvsನ್ಯೂಜಿಲ್ಯಾಂಡ್​ಧರ್ಮಶಾಲ
ಅಕ್ಟೋಬರ್​ 23 ಸೋಮವಾರಪಾಕಿಸ್ತಾನvsಅಫಘಾನಿಸ್ತಾನಚೆನ್ನೈ
ಅಕ್ಟೋಬರ್​ 24 ಮಂಗಳವಾರದಕ್ಷಿಣ ಆಫ್ರಿಕಾvsಬಾಂಗ್ಲಾದೇಶಮುಂಬಯಿ
ಅಕ್ಟೋಬರ್​ 25 ಬುಧವಾರಆಸ್ಟ್ರೇಲಿಯಾvsಕ್ವಾಲಿಫೈಯರ್​-1ದೆಹಲಿ
ಅಕ್ಟೋಬರ್​ 26 ಗುರುವಾರಇಂಗ್ಲೆಂಡ್​vsಕ್ವಾಲಿಫೈಯರ್​-2ಬೆಂಗಳೂರು
ಅಕ್ಟೋಬರ್​ 27 ಶುಕ್ರವಾರಪಾಕಿಸ್ತಾನvsದಕ್ಷಿಣ ಆಫ್ರಿಕಾಚೆನ್ನೈ
ಅಕ್ಟೋಬರ್​ 28 ಶನಿವಾರಕ್ವಾಲಿಫೈಯರ್​-1vsಬಾಂಗ್ಲಾದೇಶಕೋಲ್ಕತ್ತಾ
ಅಕ್ಟೋಬರ್​ 28 ಶನಿವಾರಆಸ್ಟ್ರೇಲಿಯಾvsನ್ಯೂಜಿಲ್ಯಾಂಡ್​ಧರ್ಮಶಾಲ
ಅಕ್ಟೋಬರ್​ 29 ಭಾನುವಾರಭಾರತvsಇಂಗ್ಲೆಂಡ್​ಲಕ್ನೋ
ಅಕ್ಟೋಬರ್​ 30 ಸೋಮವಾರಅಫಘಾನಿಸ್ತಾನvsಕ್ವಾಲಿಫೈಯರ್​-2ಪುಣೆ
ಅಕ್ಟೋಬರ್​ 31 ಮಂಗಳವಾರಪಾಕಿಸ್ತಾನvsಬಾಂಗ್ಲಾದೇಶಕೋಲ್ಕತ್ತಾ
ನವೆಂಬರ್​ 1 ಬುಧವಾರನ್ಯೂಜಿಲ್ಯಾಂಡ್​vsದಕ್ಷಿಣ ಆಫ್ರಿಕಾಪುಣೆ
ನವೆಂಬರ್​ 2 ಗುರುವಾರಭಾರತvsಕ್ವಾಲಿಫೈಯರ್​-2ಮುಂಬಯಿ
ನವೆಂಬರ್​ 3 ಶುಕ್ರವಾರಕ್ವಾಲಿಫೈಯರ್​-1vs ಅಫಘಾನಿಸ್ತಾನಲಕ್ನೋ
ನವೆಂಬರ್​ 4 ಶನಿವಾರಇಂಗ್ಲೆಂಡ್vsಆಸ್ಟ್ರೇಲಿಯಾಅಹಮದಾಬಾದ್​
ನವೆಂಬರ್​ 4 ಶನಿವಾರನ್ಯೂಜಿಲ್ಯಾಂಡ್​vsಪಾಕಿಸ್ತಾನಬೆಂಗಳೂರು
ನವೆಂಬರ್​ 5 ಭಾನುವಾರಭಾರತvsದಕ್ಷಿಣ ಆಫ್ರಿಕಾಕೋಲ್ಕತ್ತಾ
ನವೆಂಬರ್​ 6 ಸೋಮವಾರಬಾಂಗ್ಲಾದೇಶvsಕ್ವಾಲಿಫೈಯರ್​-2ದೆಹಲಿ
ನವೆಂಬರ್​ 7 ಮಂಗಳವಾರಆಸ್ಟ್ರೇಲಿಯಾvsಅಫಘಾನಿಸ್ತಾನಮುಂಬಯಿ
ನವೆಂಬರ್​ 8 ಬುಧವಾರಇಂಗ್ಲೆಂಡ್​vsಕ್ವಾಲಿಫೈಯರ್​-1ಪುಣೆ
ನವೆಂಬರ್​ 9 ಗುರುವಾರನ್ಯೂಜಿಲ್ಯಾಂಡ್​vsಕ್ವಾಲಿಫೈಯರ್​-2ಬೆಂಗಳೂರು
ನವೆಂಬರ್​ 10 ಶುಕ್ರವಾರದಕ್ಷಿಣ ಆಫ್ರಿಕಾvsಅಫಘಾನಿಸ್ತಾನಅಹಮದಾಬಾದ್​
ನವೆಂಬರ್​ 11 ಶನಿವಾರಭಾರತvsಕ್ವಾಲಿಫೈಯರ್​-1ಬೆಂಗಳೂರು
ನವೆಂಬರ್​ 12 ಭಾನುವಾರಇಂಗ್ಲೆಂಡ್​vsಪಾಕಿಸ್ತಾನಕೋಲ್ಕತ್ತಾ
ನವೆಂಬರ್​ 12 ಭಾನುವಾರಆಸ್ಟ್ರೇಲಿಯಾvsಬಾಂಗ್ಲಾದೇಶಪುಣೆ
ನವೆಂಬರ್​ 15 ಬುಧವಾರಸೆಮಿಫೈನಲ್​-1ಮುಂಬಯಿ
ನವೆಂಬರ್​ 16 ಗುರುವಾರಸೆಮಿಫೈನಲ್​-2ಕೋಲ್ಕತ್ತಾ
ನವೆಂಬರ್​ 19 ಭಾನುವಾರಫೈನಲ್​ಅಹಮದಾವಾದ್​
Exit mobile version