ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ರಾಜ್ಯ ಘಟಕದ ತರಬೇತಿಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನವೊಂದನ್ನು ಮಾಡಿದೆ. ಆಟಗಾರರರ ಗಾಯದ ಸಮಸ್ಯೆ ನಿವಾರಣೆ ಹೊಸ ಪ್ರಯೋಗವೊಂದನ್ನು ಮಾಡಿದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮತ್ತು ಆಸ್ಟ್ರೇಲಿಯನ್ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಅಸೋಸಿಯೇಷನ್ (ಎಎಸ್ಸಿಎ) ಸಹಯೋಗದೊಂದಿಗೆ ಈ ಪರೀಕ್ಷೆಯನ್ನು ನಡೆಸಲಾಗಿದೆ. ಅಂದರೆ 114 ಸ್ಟ್ರೆಂಥ್ ಆ್ಯಂಡ್ ಕಂಡಿಷನ್ ಕೋಚ್ಗಳಿಗೆ ತರಬೇತಿ ನೀಡಲಾಗಿದೆ. ಇದೇ ವೇಳೆ ನಿತಿನ್ ಪಟೇಲ್ ನೇತೃತ್ವದ ಎನ್ಸಿಎ ಕ್ರೀಡಾ ವಿಜ್ಞಾನ ವಿಭಾಗ ರಾಜ್ಯಗಳು ಅನುಸರಿಸಬೇಕಾದ ಏಕರೂಪದ ತರಬೇತಿ (ಎಸ್ & ಸಿ) ಮಾಡ್ಯೂಲ್ ಅನ್ನು ರೂಪಿಸಲು ಮುಂದಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಹೇಳಿದ್ದಾರೆ.
ಭಾರತ ತಂಡದ ಆಟಗಾರರು ಪದೇಪದೆ ಗಾಯಗೊಳ್ಳುತ್ತಿದ್ದಾರೆ. ಅವರು ಪ್ರಮುಖ ಟೂರ್ನಿಗಳಿಗೆ ಲಭ್ಯವಾಗುತ್ತಿಲ್ಲ. ಅದಕ್ಕೆ ಪರಿಹಾರ ಎಂಬಂತೆ ಬಿಸಿಸಿಐ ಎಎಸ್ಸಿಎ ಕ್ರಿಕೆಟ್ ಸ್ಪೆಸಿಫಿಕ್ ಸ್ಟ್ರೆಂತ್ & ಕಂಡೀಷನಿಂಗ್ ಕೋರ್ಸ್ ಎಂಬ ಹೊಸ ಯೋಜನೆಯನ್ನು ಹುಟ್ಟು ಹಾಕಿದೆ ಬಿಸಿಸಿದೆ. ಈ ತರಬೇತಿ ಮುಗಿದವರನ್ನು ಭಾರತ ತಂಡದ ತರಬೇತುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಆಟಗಾರರು ಹೆಚ್ಚು ಗಾಯಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಉದ್ದೇಶವನ್ನೂ ಹೊಂದಲಾಗಿದೆ. ಅಂದರೆ ಪ್ರತಿಯೊಬ್ಬ ಆಟಗಾರನಿಗೂ ತಂಡ ಸೇರ್ಪಡೆಗೊಳ್ಳುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆಟಗಾರರು ಲೆವೆಲ್ 1 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಶೇಕಡಾ 75 ರಷ್ಟು ಅಂಕಗಳನ್ನು ಪಡೆದವರು ಮಾತ್ರ ಲೆವೆಲ್ 2 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ ಎಂಬುದು ಬಿಸಿಸಿಐ ಹೊಸ ಯೋಜನೆಯಾಗಿದೆ. ಅದಕ್ಕಾಗಿ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ಗಳಿಗೆ ತರಬೇತಿ ನೀಡಲಾಗಿದೆ.
ಈ ತರಬೇತುದಾರರಲ್ಲಿ ಹೆಚ್ಚಿನವರು ಈಗಾಗಲೇ ವಿವಿಧ ಪ್ರಥಮ ದರ್ಜೆ ತಂಡಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಹೀಗಾಗಿ ಮೂಲದಲ್ಲಿಯೇ ಆಟಗಾರರ ಸದೃಢತೆಯ ಪತ್ತೆಗೆ ಮುಂದಾಗಿದೆ ಬಿಸಿಸಿಐ. ಈ ತರಬೇತಿ ಪಡೆದ 15 ಜನರಲ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ತರಬೇತುದಾರ ಯುವರಾಜ್ ಸಾಲ್ವಿ, ಹಿಮಾಚಲ ಪ್ರದೇಶದ ಸಿಎಯ ರಜನೇಶ್ ಮೆಹ್ತಾ ಮತ್ತು ಜರ್ನಾಲ್ ಸಿಂಗ್, ಸಿಎಬಿಯ ಸಂಜೀವ್ ದಾಸ್, ಎಂಸಿಎಯ ತನುಜಾ ಲೆಲೆ, ನಾಗಾಲ್ಯಾಂಡ್ನ ಶೈಲಾ ಆಲಂ ಮತ್ತು ರೈಲ್ವೆಯ ಕವಿತಾ ಪಟೇಲ್ ಶೇಕಡಾ ಅವರಿದ್ದಾರೆ. ಅವರೆಲ್ಲರೂ ಪರೀಕ್ಷೆಯಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ : World Cup 2023 : ಪಾಕ್ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!
ಎನ್ಸಿಎ ಈ ಉನ್ನತ ಕೌಶಲ್ಯ ಉಪಕ್ರಮಕ್ಕಾಗಿ ಪ್ರತಿ ರಾಜ್ಯ ಘಟಕಕ್ಕೆ ಸಂಬಂಧಿಸಿದ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳಾ ಎಸ್ & ಸಿ ತರಬೇತುದಾರರನ್ನು ಕರೆಸಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಮೂರು ದಿನಗಳ ಕಾರ್ಯಾಗಾರದೊಂದಿಗೆ ತರಬೇತಿ ಆರಂಭಗೊಂಡಿತ್ತು. ಪ್ರತಿಯೊಬ್ಬರೂ ನಾಲ್ಕು ವಿಭಿನ್ನ ಬ್ಯಾಚ್ಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಪೀರಿಯಡಿಸೇಷನ್, ಪ್ರೋಗ್ರಾಂ ಡಿಸೈನ್, ಅಗತ್ಯಗಳ ವಿಶ್ಲೇಷಣೆ, ಆಟಕ್ಕೆ ಮರಳುವುದು ಮುಂತಾದ ವಿಷಯಗಳು ಕುರಿತು ತರಬೇತಿ ನಡೆಯಿತು. ಆಧುನಿಕ ದಿನದ ಕ್ರಿಕೆಟ್ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಲಾಗಿದೆ ಕಾರ್ಯಾಗಾರದ ನಂತರ ಪ್ರತಿ ಮಾರ್ಗದರ್ಶಕರಿಗೆ ಪ್ರಾಕ್ಟಿಕಲ್ ತರಬೇತಿ ನಡೆಯಿತು. ಜೂನ್ ಬೆಂಗಳೂರಿ ಆಲೂರು ಕ್ರಿಕೆಟ್ ಕ್ರೀಡಾಂಗಣದಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆ ನಡೆಯಿತು.