ಬೆಂಗಳೂರು: ಮುಂಬರುವ ಟಿ20 ವಿಶ್ವ ಕಪ್ಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಆದರೆ ಈ ತಂಡದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ ಗೆ (KL Rahul) ಅವಕಾಶ ನೀಡಿಲ್ಲ. ಉತ್ತಮ ಫಾರ್ಮ್ನಲ್ಲಿರುವ ಹಾಗೂ ವಿದೇಶಿ ನೆಲಗಳಲ್ಲಿ ಗರಿಷ್ಠ ಪ್ರದರ್ಶ ನೀಡುವ ಅವರನ್ನು ಕೈ ಬಿಟ್ಟಿರುವುದಕ್ಕೆ ಕ್ರಿಕೆಟ್ ವಲಯದಲ್ಲಿ ಅಸಮಾಧಾನ ವ್ಯಕ್ತಗೊಂಡಿದೆ. ಪ್ರಸ್ತುತ ಐಪಿಎಲ್ ಆಡುತ್ತಿರುವ ಅವರು ಲಕ್ನೊ ಸೂಪರ್ ಜೈಂಟ್ಸ್ ತಂಡ ದ ನಾಯಕರಾಗಿದ್ದಾರೆ. 2024ರ ಟೂರ್ನಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ಈ ಫ್ರಾಂಚೈಸಿಗೂ ರಾಹುಲ್ ಅವರನ್ನು ಬಿಟ್ಟಿರುವ ಬಗ್ಗೆ ಹೆಚ್ಚಿನ ಬೇಸರವಿದೆ. ಹೀಗಾಗಿ ಸರಿಯಾಗಿ ಟಾಂಗ್ ಕೊಟ್ಟಿದೆ.
Our No.1 since Day Zero 💙 pic.twitter.com/g6em6OnVEu
— Lucknow Super Giants (@LucknowIPL) April 30, 2024
ಲಕ್ನೊ ಸೂಪರ್ ಜೈಂಟ್ಸ್ ತಂಡ ತನ್ನ ಎಕ್ಸ್ ಪೇಜ್ನಲ್ಲಿ ನಮ್ಮ ನಂಬರ್ 1 ಯಾವಾಗಲೂ ನಂಬರ್ ಒನ್. ಶೂನ್ಯದಿಂದಲೂ ಅವರು ನಂಬರ್ ಒನ್ ಎಂದು ಬರೆದುಕೊಂಡಿದೆ. ಕೆ. ಎಲ್ ರಾಹುಲ್ ಅವರ ಜೆರ್ಸಿ ಸಂಖ್ಯೆ 1. ಹೀಗಾಗಿ ಅವರನ್ನು ನಂಬರ್ ಒನ್ ಎಂದು ಫ್ರಾಂಚೈಸಿ ನಂಬರ್ 1 ಎಂದ ಕರೆದಿದೆ.
ತಂಡದಲ್ಲಿ ಯಾರ್ಯಾರಿಗೆ ಸಿಕ್ಕಿದೆ ಅವಕಾಶ
ಕೆಲವು ದಿನಗಳಿಂದ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದ ಟಿ20 ವಿಶ್ವಕಪ್ಗೆ(T20 World Cup 2024) ಟೀಮ್ ಇಂಡಿಯಾ(Team India) ಪ್ರಕಟ ಯಾವಾಗ? ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮಂಗಳವಾರ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್(Ajit Agarkar) ಅವರು ಭಾರತ ತಂಡವನ್ನು ಪ್ರಕಟಿಸುವ ಮೂಲಕ ಸ್ಪಷ್ಟ ಉತ್ತರ ನೀಡಿದ್ದಾರೆ. ತಂಡವನ್ನು ರೋಹಿತ್ ಶರ್ಮ ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಉಪನಾಯನಾಗಿದ್ದಾರೆ. ಅಚ್ಚರಿ ಎಂದರೆ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಅವಕಾಶ ಸಿಕ್ಕಿಲ್ಲ.
ಇದನ್ನೂ ಓದಿ: Virat kohli : ಕಾಮೆಂಟ್ರಿ ಬಾಕ್ಸ್ನಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?
ವಿಕೆಟ್ ಕೀಪರ್ ಆಯ್ಕೆ ಹಾಗೂ ಆಲ್ ರೌಂಡರ್ ಕುರಿತು ಹೆಚ್ಚಿನ ಚರ್ಚೆ ನಡೆದಿತ್ತು. ಇದೀಗ ಪಂತ್ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಆಲ್ರೌಂಡರ್ ಕೋಟದಲ್ಲಿ ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಅವಕಾಶ ಸಿಕ್ಕಿದೆ. ರಿಷಭ್ ಪಂತ್ ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರೆ, 2ನೇ ಕೀಪರ್ ಆಗಿ ಸಂಜು ಆಯ್ಕೆಯಾಗಿದ್ದಾರೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿತ್ತು. ಹೀಗಾಗಿ ಏಪ್ರಿಲ್ 30ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ತನ್ನ ತಂಡವನ್ನು ಪ್ರಕಟಿಸಿತು. ಸೋಮವಾರ ನ್ಯೂಜಿಲ್ಯಾಂಡ್ ತನ್ನ ತಂಡವನ್ನು ಪ್ರಕಟಿಸಿತ್ತು. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್