Site icon Vistara News

IND vs NZ : ಸೆಮಿಫೈನಲ್ ಪಂದ್ಯದ ಪಿಚ್​ ಬದಲಾಯಿಸಲಾಗಿದೆಯೇ? ಏನಿದು ಆರೋಪ?

mumbai Pitdch

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ 2023 ರ ಸೆಮಿಫೈನಲ್​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು (IND vs NZ) ಮುಖಾಮುಖಿಯಾಗಲಿವೆ. ಇತ್ತಂಡಗಳೂ ಈ ಪಂದ್ಯವನ್ನು ಗೆದ್ದು ಫೈನಲ್​ಗೆ ಪ್ರವೇಶ ಮಾಡುವ ಗುರಿಯೊಂದಿಗೆ ಆಡುತ್ತಿದೆ. ಆದಾಗ್ಯೂ, ಪ್ರಮುಖ ಹಣಾಹಣಿಗೆ ಮೊದಲು, ದೊಡ್ಡ ಆರೋಪವೊಂದು ಎದುರಾಯಿತು. ಭಾರತ ತಂಡ ಸೆಮಿ ಫೈನಲ್​ಗೆ ಬಂದ ಕಾರಣ ಪಿಚ್​ ಬದಲಾವಣೆ ಮಾಡಲಾಗಿದೆ ಎಂದು ಕೆಲವರು ಆರೋಪ ಮಾಡಿದ್ದರು. ಈ ಆರೋಪಗಳಿಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಖಡಕ್ ಉತ್ತರ ಕೊಟ್ಟಿದೆ.

“ಐಸಿಸಿ ಸ್ವತಂತ್ರ ಪಿಚ್ ಸಲಹೆಗಾರರು ಆತಿಥೇಯರು ಮತ್ತು ಸ್ಥಳಗಳೊಂದಿಗೆ ಅವರ ಉದ್ದೇಶಿತ ಪಿಚ್ ಹಂಚಿಕೆಗಳ ಬಗ್ಗೆ ಕೆಲಸ ಮಾಡುತ್ತಾರೆ. ಈ ಪ್ರಕ್ರಿಯೆಯು ಟೂರ್ನಿಯುದ್ದಕ್ಕೂ ನಡೆದಿದೆ. ಫೈನಲ್ ತನಕವೂ ಮುಂದುವರಿಯುತ್ತದೆ. ಹೀಗಾಗಿ ಪಿಚ್ ಬದಲಾವಣೆ ಮಾಡುವ ಸಾಧ್ಯತೆಗಳೇ ಇಲ್ಲ” ಎಂದು ಬಿಸಿಸಿಐ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಅಂಪೈರ್‌ಗಳ ಪಟ್ಟಿ ಕಂಡು ನಿಟ್ಟುಸಿರು ಬಿಟ್ಟ ಟೀಮ್​ ಇಂಡಿಯಾ ಅಭಿಮಾನಿಗಳು; ಕಾರಣ ಏನು?

ಐಸಿಸಿ ಈವೆಂಟ್​ಗಳಲ್ಲಿ ಪಿಚ್​ಗಳನ್ನು ಆಡಳಿತ ಮಂಡಳಿಯ ಸಲಹೆಗಾರ ಆಂಡಿ ಅಟ್ಕಿನ್ಸನ್ ಅವರ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಪ್ರತಿ ಪಂದ್ಯಕ್ಕೆ ಮೈದಾನದಲ್ಲಿನ ಸಂಖ್ಯೆಯ ಪಿಚ್ ಗಳಲ್ಲಿ ಯಾವುದನ್ನು ಬಳಸಬೇಕು ಎಂಬುದರ ಕುರಿತು ಅವರು ತವರು ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಾರೆ. ಆದಾಗ್ಯೂ, ಮೇಲ್ ಸ್ಪೋಟ್ಸ್​ ವರದಿಯ ಪ್ರಕಾರ, ಸೆಮಿಫೈನಲ್ ಪಂದ್ಯ ನಡೆಯುವ ಪಿಚ್ ಅನ್ನು ಆರಂಭದಲ್ಲಿ ಆಯ್ಕೆ ಮಾಡಲಾಗಿಲ್ಲ. ಭಾರತ ತಂಡ ಸೆಮೀಸ್​ಗೆ ಬಂದ ಬಳಿಕ ಆಯ್ಕೆ ಮಾಡಲಾಗಿದೆ.

ಪಿಚ್ ಸಂಖ್ಯೆ 6ರಲ್ಲಿ ಪಂದ್ಯ

ಪಿಚ್ ಸಂಖ್ಯೆ 7 ಅನ್ನು ಎಲ್ಲಾ ಪ್ರಮುಖ ಮುಖಾಮುಖಿಗೆ ಬಳಸಬೇಕಾಗಿತ್ತು. ಅದೊಂದು ಹೊಸ ಪಿಚ್ ಆಗಿತ್ತು. 2023 ರ ಏಕದಿನ ವಿಶ್ವಕಪ್​​ನಲ್ಲಿ ಈಗಾಗಲೇ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಪಿಚ್ ಸಂಖ್ಯೆ 6 ಅನ್ನು ಬಳಸಲು ನಿರ್ಧರಿಸಲಾಗಿದೆ. ಪಿಚ್ ಸಂಖ್ಯೆ 6 ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮತ್ತು ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಿತು.

ಪಿಚ್ ಸಂಖ್ಯೆ 7 ರಲ್ಲಿ ಕೆಲವು ಅನಿರ್ದಿಷ್ಟ ಸಮಸ್ಯೆ ಇದೆ ಎಂದು ಅಟ್ಕಿನ್ಸನ್ ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಅಭಿಪ್ರಾಯವನ್ನು ಅವರು ಹಂಚಿಕೊಳ್ಳುವುದಿಲ್ಲ ಎಂದು ಭಾವಿಸಲಾಗಿದೆ. ನವೆಂಬರ್ 19ರ ಭಾನುವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುವ ಪಿಚ್ ಬಗ್ಗೆಯೂ ಕಳವಳಗಳಿವೆ. ಅಟ್ಕಿನ್ಸನ್ ಫೈನಲ್ ಪಂದ್ಯವನ್ನು ಪಿಚ್ ಸಂಖ್ಯೆ 5 ರಲ್ಲಿ ಆಡಬೇಕೆಂದು ಶಿಫಾರಸು ಮಾಡಿದ್ದರು. ಇದನ್ನು ಪಂದ್ಯಾವಳಿಯಲ್ಲಿ ಒಮ್ಮೆ ಮಾತ್ರ ಬಳಸಲಾಗಿದೆ. ಆದಾಗ್ಯೂ, ಎರಡು ಬಾರಿ ಬಳಸಲಾದ ಪಿಚ್ ಸಂಖ್ಯೆ 6 ಅನ್ನು ಕೊನೆಯ ಕ್ಷಣದಲ್ಲಿ ಆಯ್ಕೆ ಮಾಡಬಹುದು ಎಂದು ಅವರು ಹೇಳಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಬದಲಾವಣೆಗಳನ್ನು ಅನುಮೋದಿಸಿದವರು ಯಾರು ಎಂದು ಅಟ್ಕಿನ್ಸನ್ ವಿಚಾರಿಸಿದಾಗ, ಬಿಸಿಸಿಐ, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಕಡಗೆ ಬೊಟ್ಟು ಮಾಡಿದೆ. ಜಿಸಿಎ ಭಾರತದ ಕ್ರಿಕೆಟ್ ಆಡಳಿತ ಮಂಡಳಿಯಿಂದ ಸೂಚನೆಗಳನ್ನು ಬಂದಿವೆ ಎಂದು ಹೇಳಿದೆ.

ಈ ಕ್ರಮಗಳ ಪರಿಣಾಮವಾಗಿ, ತಂಡದ ನಿರ್ವಹಣೆ ಮತ್ತು ಅಥವಾ ತವರು ರಾಷ್ಟ್ರ ಮಂಡಳಿಯ ಕೋರಿಕೆಯ ಮೇರೆಗೆ ಆಯ್ಕೆ ಮಾಡಲಾದ ಪಿಚ್ ಅನ್ನು ಹೊಂದಿರುವ ಮೊದಲ ಐಸಿಸಿ ವಿಶ್ವಕಪ್​ (ಕ್ರಿಕೆಟ್ ವಿಶ್ವಕಪ್) ಫೈನಲ್ ಇದಾಗಿದೆಯೇ ಎಂದು ಊಹಿಸಬೇಕಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಪಂದ್ಯದಲ್ಲಿ ಸ್ಪರ್ಧಿಸುವ ಎರಡೂ ತಂಡಗಳಿಗೆ ಪಕ್ಷಪಾತವಿಲ್ಲದೆ ಪಿಚ್ ಆಯ್ಕೆ ಮಾಡಲಾಗುತ್ತದೆ. ಅಟ್ಕಿನ್ಸನ್ ಇಮೇಲ್ ನಲ್ಲಿ ಎಚ್ಚರಿಸಿದ್ದಾರೆ.

Exit mobile version