Site icon Vistara News

independence day 2023 : ಮೋದಿ ಕರೆಗೆ ಓಗೊಟ್ಟು ಡಿಪಿ ಬದಲಿಸಿದ ಬಿಸಿಸಿಐಗೆ ಎಕ್ಸ್​ ಬ್ಯ್ಲೂಟಿಕ್​ ನಷ್ಟ!

BCCI

#image_title

ನವದೆಹಲಿ: ‘ಹರ್ ಘರ್ ತಿರಂಗಾ ಅಭಿಯಾನ’ವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಚಿತ್ರದಲ್ಲಿ ರಾಷ್ಟ್ರ ಧ್ವಜವನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಅದೇ ರೀತಿ ಮಾಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ‘ಎಕ್ಸ್’ (ಟ್ವಿಟರ್) ನ ಬ್ಲ್ಯೂ ಟಿಕ್ ಕಳೆದುಕೊಂಡಿದೆ.

ಆಗಸ್ಟ್ 15 ರಂದು ದೇಶಾದ್ಯಂತ ಆಚರಿಸಲಾಗುವ 77 ನೇ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ, ಪಿಎಂ ನರೇಂದ್ರ ಮೋದಿ ಅವರು ತಮ್ಮ ಪ್ರೊಫೈಲ್ ಚಿತ್ರಗಳನ್ನು ಆಯಾ ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯ ಧ್ವಜಕ್ಕೆ ಬದಲಾಯಿಸುವಂತೆ ನಾಗರಿಕರನ್ನು ವಿನಂತಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಉನ್ನತ ಕ್ರಿಕೆಟ್ ಮಂಡಳಿಯು ಪ್ರಧಾನಿಯವರ ಮಾತನ್ನು ಪಾಲಿಸಿದ್ದಾರೆ. ಅಂತೆಯೇ ಭಾರತೀಯ ಧ್ವಜದ ಚಿತ್ರವನ್ನು ಹಾಕಿಕೊಂಡಿತು.

ಈ ಕಾರಣಕ್ಕೆ ಬಿಸಿಸಿಐ ತನ್ನ ‘ಎಕ್ಸ್’ ಹ್ಯಾಂಡಲ್​​ನಲ್ಲಿ ತನ್ನ ಬ್ಲೂ ಟಿಕ್ ಅನ್ನು ಕಳೆದುಕೊಂಡಿತು. ಎಕ್ಸ್​​ನ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಎಕ್ಸ್ ಮ್ಯಾನೇಜ್ಮೆಂಟ್​ನ ಈಗ ಬಿಸಿಸಿಐನ ಪ್ರೊಫೈಲ್ ಅನ್ನು ಪರಿಶೀಲನೆ ನಡೆಸಬೇಕಾಗಿದೆ. ಬಳಿಕ ಎಲ್ಲಾ ಮಾರ್ಗಸೂಚಿಗಳನ್ನು ಪೂರೈಸಿದರೆ ಮಾತ್ರ ಬ್ಲ್ಯೂಟಿಕ್ ಮರುಸ್ಥಾಪನೆಯಾಗಲಿದೆ.

ಸ್ವಾತಂತ್ರ್ಯ ದಿನಾಚರಣೆಯ ನಂತರ, ಬಿಸಿಸಿಐ ತನ್ನ ಮೂಲ ಲೋಗೋಗೆ ಮರಳುವ ಸಾಧ್ಯತೆಗಳಿವೆ. ಮತ್ತೆ ಅದೇ ಪ್ರಕ್ರಿಯೆಯು ಅನುಸರಿಸಬೇಕಾಗಬಹುದು. ಆಗ ಬಿಸಿಸಿಐ ಮತ್ತೆ ತನ್ನ ಬ್ಲೂ ಟಿಕ್ ಅನ್ನು ಕಳೆದುಕೊಳ್ಳಬಹುದು.

ವಿಂಡೀಸ್ ವಿರುದ್ಧ ಜಯ

ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-2ರ ಸಮಬಲ ಸಾಧಿಸಿದೆ. ಆಗಸ್ಟ್ 13 ರ ಭಾನುವಾರ ಲಾಡರ್ಹಿಲ್​​ನ ಸೆಂಟ್ರಲ್ ಬ್ರೋವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​​ನಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟಿ 20 ಪಂದ್ಯದಲ್ಲಿ ಎರಡೂ ತಂಡಗಳು ಸರಣಿಯ ಗೆಲುವಿಗಾಗಿ ಪ್ರಯತ್ನಿಸಲಿದೆ.

ಇದನ್ನೂ ಓದಿ : Red Card : ಫುಟ್ಬಾಲ್​ನಂತೆ ಕ್ರಿಕೆಟ್​ಗೂ ಬಂತು ರೆಡ್​ ಕಾರ್ಡ್​ ರೂಲ್ಸ್​!

ವೆಸ್ಟ್ ಇಂಡೀಸ್ ವಿರುದ್ಧದ ಬಹು-ಸ್ವರೂಪದ ಸರಣಿಯ ಮುಕ್ತಾಯದ ನಂತರ, ರೋಹಿತ್ ಶರ್ಮಾ ನೇತೃತ್ವದ ತಂಡವು ಏಷ್ಯಾ ಕಪ್ 2023ರತ್ತ ಗಮನ ಹರಿಸಲಿದೆ. ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 2ರ ಶನಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 5ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ನಿರ್ಣಾಯಕ ಏಕದಿನ ವಿಶ್ವಕಪ್​​ನಲ್ಲಿ ಇದೇ ಸೆಟಪ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಬಿಸಿಸಿಐ ಮುಂಬರುವ ದಿನಗಳಲ್ಲಿ ಎಸಿಸಿ ಈವೆಂಟ್​​ಗೆ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.

Exit mobile version