Site icon Vistara News

Jay Shah : ಮೂರನೇ ಬಾರಿಗೆ ಎಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಜಯ್​ ಶಾ

Jay Sha

ನವದೆಹಲಿ: ಭಾರತೀಯ ಕ್ರಿಕೆಟ್ ಕೌನ್ಸಿಲ್​​ನ (BCCI) ಕ್ರಿಯಾತ್ಮಕ ಆಡಳಿತಗಾರ ಜಯ್ ಶಾ (Jay Shah) ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಿದ್ದಾರೆ. ಜನವರಿ 31ರಂದು ಎಸಿಸಿ ಮಂಡಳಿಯ ಈ ಸರ್ವಾನುಮತದ ನಿರ್ಧಾರವು ಶಾ ನಾಯಕತ್ವದ ಮೇಲೆ ವ್ಯಾಪಕ ನಂಬಿಕೆಯನ್ನು ಪ್ರದರ್ಶಿಸಿದೆ. ಇದು ಏಷ್ಯಾದ ಕ್ರಿಕೆಟ್​ನ ಗಮನಾರ್ಹ ಪ್ರಗತಿಗೆ ಕಾರಣವಾಗಿದೆ ಎಂದು ಎಷ್ಯನ್ ಕ್ರಿಕೆಟ್​ ಕೌನ್ಸಿಲ್ ಹೇಳಿದೆ.

ಜಯ್ ಶಾ ಮಾರ್ಗದರ್ಶನದಲ್ಲಿ ಎಸಿಸಿ ಸುವರ್ಣ ಯುಗಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಶಕ್ತಿಕೇಂದ್ರವಾಗಿ ಏಷ್ಯಾದ ಪರಾಕ್ರಮ ಪ್ರದರ್ಶಿಸಿದ ಮಂಡಳಿಯು ಅಪೇಕ್ಷಿತ ಏಷ್ಯಾ ಕಪ್​​ನ ಟಿ20 ಐ ಮತ್ತು ಏಕದಿನ ಆವೃತ್ತಿಗಳನ್ನು ಯಶಸ್ವಿಯಾಗಿ ಆಯೋಜಿಸಿತು. ಶಾ ಅವರ ಚುರುಕಾದ ನಾಯಕತ್ವವು ಭಾರತ ಮತ್ತು ಪಾಕಿಸ್ತಾನದಂತಹ ಸ್ಥಾಪಿತ ಕ್ರಿಕೆಟ್ ದೈತ್ಯ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ಉದಯೋನ್ಮುಖ ರಾಷ್ಟ್ರಗಳಲ್ಲಿಯೂ ಹೊಸ ಪ್ರತಿಭೆಗಳನ್ನು ಪತ್ತೆಹಚ್ಚುವಲ್ಲಿ ನೆರವಾಗಿತ್ತು.

ಇದನ್ನೂ ಓದಿ : Jay Shah: ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್​ ದಿ ಇಯರ್ ಪ್ರಶಸ್ತಿ ಗೆದ್ದ ಜಯ್ ಶಾ

ಜಯ್ ಶಾ ಅವರ ಪ್ರಭಾವವು ಮೈದಾನದಲ್ಲಿನ ಯಶಸ್ಸನ್ನು ಮೀರಿದೆ. ಕಾರ್ಯತಂತ್ರದ ವಾಣಿಜ್ಯ ಮತ್ತು ಪ್ರಸಾರ ಒಪ್ಪಂದಗಳ ಮೂಲಕ ಎಸಿಸಿಯ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಹೊಸ ಅಭಿವೃದ್ಧಿಯನ್ನು ತಳಮಟ್ಟದಿಂದಲೇ ಮಾಡಿದ್ದಾರೆ. ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಅವುಗಳನ್ನು ತಳಮಟ್ಟಕ್ಕೆ ತಲುಪಿಸುವಲ್ಲಿ ಮಾಡಿರುವ ಸಾಧನೆಯನ್ನು ಲಂಕಾ ಸೇರಿದಂತೆ ಹಲವು ಸಂಸ್ಥೆಗಳು ಮೆಚ್ಚಿವೆ.

ಎಸಿಸಿಯಲ್ಲಿ ಜಯ್ ಶಾ: ಎಲ್ಲರಿಂದಲೂ ಪ್ರಶಂಸೆ

ಜಯ್ ಶಾ ನಾಯಕತ್ವಕ್ಕೆ ಖಂಡದಾದ್ಯಂತ ಪ್ರಶಂಸೆಗಳು ಹರಿದುಬಂದಿವೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಅವರು “ತಳಮಟ್ಟದ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಮತ್ತು ಏಷ್ಯಾ ಕಪ್ ಅನ್ನು ಅದರ ಪ್ರಸ್ತುತ ಪ್ರತಿಷ್ಠಿತ ಸ್ಥಾನಮಾನಕ್ಕೆ ಏರಿಸುವಲ್ಲಿ ಅವರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಎಸಿಸಿ ಮಂಡಳಿಯ ನಿರಂತರ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ಕ್ರೀಡೆಯು ಇನ್ನೂ ಶೈಶವಾವಸ್ಥೆಯಲ್ಲಿರುವ ಪ್ರದೇಶಗಳ ಮೇಲೆ ವಿಶೇಷ ಗಮನ ಹರಿಸುವ ಮೂಲಕ ಕ್ರೀಡೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿರಬೇಕು. ಏಷ್ಯಾದಾದ್ಯಂತ ಕ್ರಿಕೆಟ್ ಅನ್ನು ಪೋಷಿಸಲು ಎಸಿಸಿ ಬದ್ಧವಾಗಿದೆ, ಎಂದು ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version