ಮುಂಬಯಿ: ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್(ICC World Cup) ಟೂರ್ನಿಗೆ ಸೆಪ್ಟೆಂಬರ್ 3ರಂದು ಭಾರತ ತಂಡ(icc world cup india squad) ಪ್ರಕಟಗೊಳ್ಳುವುದು ಬಹುತೇಕ ಖಚಿತ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ. ಅಚ್ಚರಿ ಎಂದರೆ ಪಾಕಿಸ್ತಾನ(IND vs PAK) ವಿರುದ್ಧ ಸೆಪ್ಟೆಂಬರ್ 2ರಂದು ಭಾರತ ತಂಡ ಏಷ್ಯಾಕಪ್(asia cup 2023) ಟೂರ್ನಿಯ ಪಂದ್ಯವನ್ನಾಡಲಿದೆ. ಇದರ ಮರು ದಿನವೇ ತಂಡ ಘೋಷಿಸಲು ಬಿಸಿಸಿಐ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಏಷ್ಯಾಕಪ್ ತಂಡವೇ ಫೈನಲ್
ಪಿಟಿಐ ವರದಿ ಮಾಡಿದ ಪ್ರಕಾರ ಏಷ್ಯಾಕಪ್ಗೆ ಪ್ರಕಟಿಸಿರುವ 17 ಮಂದಿಯ ತಂಡವೇ ವಿಶ್ವಕಪ್ ಟೂರ್ನಿಯಲ್ಲೂ ಮುಂದುವರಿಯಲಿದೆ ಎಂದು ತಿಳಿಸಿದೆ. ಹೆಚ್ಚುವರಿಯಾಗಿ ಅಂದರೆ ಸ್ಟ್ಯಾಂಡ್ ಬೈ ಆಟಗಾರರಾಗಿ ಮೂವರು ಆಟಗಾರರ ಆಯ್ಕೆ ಸಾಧ್ಯತೆ ಇದೆ. ಈ ಆಟಗಾರರು ಪ್ರಧಾನ ತಂಡದಲ್ಲಿ ಗಾಯಳುಗಳಾಗಿ ಹೊರಬಿದ್ದಾಗ ಮುಖ್ಯ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.
ಮಹತ್ವದ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ 10 ತಂಡಗಳ ಆಯ್ಕೆಗೆ ಐಸಿಸಿ ಸೆಪ್ಟಂಬರ್ 5ರ ಒಳಗೆ ತಂಡಗಳ ಪಟ್ಟಿಯನ್ನು ಕಳುಹಿಸುವಂತೆ ಸೂಚಿಸಿದೆ. ಈಗಾಗಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ತಂಡಗಳ ಪಟ್ಟಿಯನ್ನು ಪ್ರಕಟಿಸಿದೆ. ಇದೀಗ ಭಾರತವೂ ಸಂಭಾವ್ಯ ತಂಡಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ.
ರಾಹುಲ್ಗೆ ಕೀಪಿಂಗ್ ಹೊಣೆ ಸಾಧ್ಯತೆ
ಕಾರು ಅಪಘಾತದಲ್ಲಿ ರಿಷಭ್ ಪಂತ್ ಅವರು ತಂಡದಿಂದ ಹೊರಗಿರುವ ಕಾರಣ ವಿಕೆಟ್ ಕೀಪಿಂಗ್ ಆಗಿ ರಾಹುಲ್ ಮೊದಲ ಆಯ್ಕೆಯಾಗಿದ್ದಾರೆ. ಏಷ್ಯಾಕಪ್ನಲ್ಲಿಯೂ ಅವರೇ ಕೀಪಿಂಗ್ ನಡೆಸುವಂತೆ ಈಗಾಗಲೇ ಆಯ್ಕೆ ಸಮಿತಿ ಸೂಚಿಸಿದೆ. ಸದ್ಯ ಭಾರತ ತಂಡದ ಆಟಗಾರರು ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ವಿಶೇಷ ಪೂರ್ವಸಿದ್ಧತಾ ಶಿಬಿರದಲ್ಲಿ ಫಿಟ್‌ನೆಸ್ ಮತ್ತು ಕೌಶಲ್ಯ ತರಬೇತಿ ಪಡೆಯುತ್ತಿದ್ದಾರೆ. ಕೆ.ಎಲ್ ರಾಹುಲ್ ಅವರು ಇಲ್ಲಿ ಕಳೆದ ಮೂರು ದಿನಗಳಿಂದ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ರಾಹುಲ್ ಅವರನ್ನು ಸಂಪೂರ್ಣವಾಗಿ ಕೀಪಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ವಿಶ್ವಕಪ್ನಲ್ಲಿಯೂ ಅವರೇ ಕೀಪಿಂಗ್ ಮಾಡುವ ಸೂಚನೆ ಇದೆ.
ಇದನ್ನೂ ಓದಿ ICC World Cup: ವಿಶ್ವಕಪ್ಗೆ ಭಾರತ ತಂಡ ಪ್ರಕಟಿಸಿದ ಹೇಡನ್; ಒಂದು ಅಚ್ಚರಿಯ ಆಯ್ಕೆ
ಸಂಭಾವ್ಯ ವಿಶ್ವಕಪ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ,, ಮೀಸಲು ಆಟಗಾರರು: ಸಂಜು ಸ್ಯಾಮ್ಸನ್,ಯಜುವೇಂದ್ರ ಚಹಲ್, ಋತುರಾಜ್ ಗಾಯಕ್ವಾಡ್.
ಭಾರತ ಪಂದ್ಯದ ಸಂಪೂರ್ಣ ಪರಿಷ್ಕೃತ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ನೆದರ್ಲೆಂಡ್ಸ್ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು