ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI WOMEN) ಐತಿಹಾಸಿಕ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಇನ್ನು ಮುಂದೆ ಪುರುಷರ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡಲು ಮುಂದಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗುರುವಾರ ಟ್ವೀಟ್ ಮಾಡುವ ಮೂಲಕ ಹೊಸ ಹೊಸ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇನ್ನು ಮುಂದೆ ಮಹಿಳಾ ಕ್ರಿಕೆಟಿಗರು ಹಾಗೂ ಪುರುಷ ಕ್ರಿಕೆಟಿಗರು ಟೆಸ್ಟ್ ಪಂದ್ಯವೊಂದಕ್ಕೆ ೧೫ ಲಕ್ಷ ರೂಪಾಯಿ, ಏಕ ದಿನ ಪಂದ್ಯಕ್ಕೆ ೬ ಲಕ್ಷ ರೂಪಾಯಿ ಹಾಗೂ ಟಿ೨೦ ಪಂದ್ಯವೊಂದಕ್ಕೆ ೩ ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ.
“ಲಿಂಗ ಅಸಮಾನತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಬಿಸಿಸಿಐ ಮೊದಲ ಹೆಜ್ಜೆಯನ್ನು ಇಟ್ಟಿದೆ ಎಂದು ತಿಳಿಸಲು ಬಯಸುತ್ತೇನೆ. ಅಂತೆಯೇ ಬಿಸಿಸಿಐ ಜತೆ ಗುತ್ತಿಗೆ ಪಡೆದಿರುವ ಮಹಿಳಾ ಕ್ರಿಕೆಟರ್‌ಗಳಿಗೆ ಸಮಾನ ವೇತನ ವೇತನ ಪಡೆಯಲಿದ್ದಾರೆ. ಪುರುಷರ ಹಾಗೂ ಮಹಿಳೆಯರಿಗೆ ಏಕ ರೂಪದಲ್ಲಿ ಸಂಭಾವನೆ ನೀಡುವ ಮೂಲಕ ಲಿಂಗ ಸಮಾನತೆಯ ಹೊಸ ಯುಗಕ್ಕೆ ಪ್ರವೇಶ ಪಡೆಯಲಿದ್ದೇವೆ,” ಎಂದು ಬಿಸಿಸಿಐ ಅಧ್ಯಕ್ಷ ಜಯ್ ಶಾ ಬರೆದುಕೊಂಡಿದ್ದಾರೆ.
ಮುಂದುವರಿದ ಅವರು “ಬಿಸಿಸಿಐ ಮಹಿಳಾ ಕ್ರಿಕೆಟಿಗರು ಪುರುಷ ಕ್ರಿಕೆಟಿಗರಂತೆ ಟೆಸ್ಟ್ ಪಂದ್ಯವೊಂದಕ್ಕೆ ೧೫ ಲಕ್ಷ ರೂಪಾಯಿ, ಏಕ ದಿನ ಪಂದ್ಯಕ್ಕೆ ೬ ಲಕ್ಷ ರೂಪಾಯಿ, ಟಿ೨೦ ಪಂದ್ಯವೊಂದಕ್ಕೆ ೩ ಲಕ್ಷ ರೂಪಾಯಿ ಪಡೆಯಲಿದ್ದಾರೆ. ವೇತನ ಸಮಾನತೆ ನನ್ನ ಬದ್ಧತೆಯಾಗಿದ್ದು, ಅದಕ್ಕೆ ಬೆಂಬಲ ಕೊಟ್ಟ ಬಿಸಿಸಿಐಗೆ ಧನ್ಯವಾದಗಳು,” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Asia Cup 2023 | ಏಷ್ಯಾ ಕಪ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದ ಜಯ್ ಶಾ