Site icon Vistara News

BCCI : ಬಿಸಿಸಿಐ ಸಂಪತ್ತು ಕ್ರಿಕೆಟ್​​ ಆಸ್ಟ್ರೇಲಿಯಾಕ್ಕಿಂತ 28 ಪಟ್ಟು ಹೆಚ್ಚು; ಬಹಿರಂಗವಾಯ್ತು ಒಟ್ಟು ಮೊತ್ತ

BCCI

ಬೆಂಗಳೂರು: ಬಿಸಿಸಿಐ (BCCI) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆದರೆ ಯಾರಿಗೂ ನಿಜವಾಗಿಯೂ ಎಷ್ಟು ಶ್ರೀಮಂತ ಎಂದು ತಿಳಿದಿಲ್ಲ. ಕ್ರಿಕೆಟ್​ ಬಜ್​ ಮಾಡಿರುವ ವರದಿಯನ್ನು ನಂಬುವುದಾದರೆ ಭಾರತೀಯ ಮಂಡಳಿಯು ವಿಶ್ವದ ಇತರ ಎಲ್ಲ ಮಂಡಳಿಗಿಂತ ಹಲವಾರು ಪಟ್ಟು ಶ್ರೀಮಂತ. ಪ್ರಸ್ತುತ, ಬಿಸಿಸಿಐನ ನಿವ್ವಳ ಮೌಲ್ಯವನ್ನು 2.25 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಸುಮಾರು 18,700 ಕೋಟಿ ರೂ.

ಇದು ಎರಡನೇ ಶ್ರೀಮಂತ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾದ 79 ಮಿಲಿಯನ್ ಡಾಲರ್ (6000 ಕೋಟಿ) ನಿವ್ವಳ ಮೌಲ್ಯವನ್ನು ಹೊಂದಿದೆ. ಅಂದರೆ ಸರಿಸುಮಾರು 28 ಪಟ್ಟು ಅಧಿಕ. 2000ರಿಂದ ಬಳಿಕ ಐಪಿಎಲ್ ಸೇರಿದಂತೆ ಎಲ್ಲ ವಿಷಯದಲ್ಲೂ ಬಿಸಿಸಿಐ ದೊಡ್ಡ ಪ್ರಮಾಣದ ಲಾಭ ಪಡೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಶ್ರೀಮಂತವಾಗುತ್ತಿದೆ.

ಟೀಮ್ ಇಂಡಿಯಾಕ್ಕೆ ಆತಿಥ್ಯ ವಹಿಸುತ್ತಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾ ಆರನೇ ಸ್ಥಾನದಲ್ಲಿದೆ. ಅವರ ನಿವ್ವಳ ಮೌಲ್ಯವನ್ನು ಕೇವಲ 47 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಬಿಸಿಸಿಐನ ಒಟ್ಟು ಮೌಲ್ಯ ಕೇವಲ 2% ಮಾತ್ರ. ಇಸಿಬಿ 59 ಮಿಲಿಯನ್ ಡಾಲರ್ ಒಟ್ಟು ಮೌಲ್ಯ ಹೊಂದಿದೆ. ಪಿಸಿಬಿಯ ಒಟ್ಟು ಮೌಲ್ಯವು ಸುಮಾರು 55 ಮಿಲಿಯನ್ ಡಾಲರ್ ಆಗಿರಬಹುದು.

ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಆದಾಯ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯು ಕ್ರಿಕೆಟ್ ದಕ್ಷಿಣ ಆಫ್ರಿಕಾಕ್ಕೆ 3 ಟಿ 20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲು 68.7 ಮಿಲಿಯನ್ ಡಾಲರ್ ಆದಾಯವನ್ನು ತಂದುಕೊಡುವ ನಿರೀಕ್ಷೆಯಿದೆ. ಕಳೆದ ಮೂರು ವರ್ಷಗಳಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ಕ್ರಮವಾಗಿ 6.3 ಮಿಲಿಯನ್, 10.5 ಮಿಲಿಯನ್ ಮತ್ತು 11.7 ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿತ್ತು.

ಇದನ್ನೂ ಓದಿ : MS Dhoni : ಯುವರಾಜ್​ ಹೆಸರೇಳಿ ಧೋನಿಯ ಮೇಲೆ ನಂಜು ಕಾರಿದ ಗೌತಮ್​ ಗಂಭೀರ್​

ಬಿಸಿಸಿಐನ ಹೆಚ್ಚುತ್ತಿರುವ ಆದಾಯಕ್ಕೆ ಐಪಿಎಲ್ ಪ್ರಮುಖ ಕೊಡುಗೆ ನೀಡುತ್ತಿರುವಂತೆಯೇ, ಸಿಎ ವಿಷಯದಲ್ಲೂ ಅದೇ ರೀತಿಯಾಗಿದೆ, ಅದರ ಟಿ 20 ಲೀಗ್, ಐಪಿಎಲ್​ನಷ್ಟು ದೊಡ್ಡದಲ್ಲದಿದ್ದರೂ, ವಿಶ್ವದಾದ್ಯಂತ ನಡೆಯುತ್ತಿರುವ ಅತ್ಯಂತ ಹಳೆಯ ಮತ್ತು ಯಶಸ್ವಿ ಟಿ 20 ಲೀಗ್​ಗಳಲ್ಲಿ ಅದು ಒಂದಾಗಿದೆ.

ಕೊಹ್ಲಿ, ರೋಹಿತ್​ ಟಿ20 ವಿಶ್ವಕಪ್​ ಭವಿಷ್ಯ ಬಿಸಿಸಿಐ ಕೈಯಲ್ಲಿ; ಈ ದಿನ ನಿರ್ಧಾರ ಪ್ರಕಟ!

ಭಾರತ ಕ್ರಿಕೆಟ್​ ತಂಡ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಸೋಲು ಕಂಡ ಬಳಿಕ ಎಲ್ಲಡೆ ಚರ್ಚೆಯಾಗುತ್ತಿರುವ ವಿಚಾರವೆಂದರೆ, ವಿರಾಟ್​ ಕೊಹ್ಲಿ(virat kohli) ಮತ್ತು ರೋಹಿತ್​ ಶರ್ಮ(rohit sharma) ಅವರು 2024ರ ಟಿ20 ವಿಶ್ವಕಪ್​ನಲ್ಲಿ ಆಡಲಿದ್ದಾರಾ ಎನ್ನುವುದು. ಮೂಲಗಳ ಪ್ರಕಾರ ಬಿಸಿಸಿಐ(BCCI) ಮುಂದಿನ ವಾರ ಇದೇ ವಿಚಾರವಾಗಿ ಕೊಹ್ಲಿ ಮತ್ತು ರೋಹಿತ್(Virat Kohli-Rohit Sharma)​ ಜತೆ ಚರ್ಚಿಸಿ ಸ್ಪಷ್ಟ ನಿರ್ಧಾರವೊಂದನ್ನು ಕೈಗೊಳ್ಳಲಿದೆ ಎಂದು ವರದಿಯಾಗಿದೆ.

ಒಂದು ವರ್ಷದಿಂದ ಟಿ20 ಕ್ರಿಕೆಟ್​ ಆಡಿಲ್ಲ
2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್​ನಲ್ಲಿ ನಿರ್ಗಮಿಸಿತ್ತು. ಇದಾದ ಬಳಿಕ ರೋಹಿತ್ ಮತ್ತು ಕೊಹ್ಲಿ ಒಂದೇ ಒಂದು ಟಿ20 ಪಂದ್ಯವನ್ನು ಕೂಡ ಇದುವರೆಗೆ ಆಡಿಲ್ಲ. ಅಂದಿನಿಂದಲೂ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜತೆಗ ಯುವ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್​ ಟೂರ್ನಿಯಲ್ಲೂ ಕೊಹ್ಲಿ ಮತ್ತು ರೋಹಿತ್ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ.

Exit mobile version