ಮುಂಬಯಿ : ಐಪಿಎಲ್ 2023ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಹರಾಜಿನಲ್ಲಿ ಪಾಲ್ಗೊಳ್ಳಲಿರುವ 405 ಆಟಗಾರರ ಅಂತಿಮ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಮಂಗಳವಾರ ಪ್ರಕಟಿಸಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ಸ್ಟೋಕ್ಸ್, ಕರ್ನಾಟಕದ ಬ್ಯಾಟರ್ ಮಯಾಂಕ್ ಅಗರ್ವಾಲ್, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ಫ್ರಾಂಚೈಸಿಗಳ ನಡುವಿನ ಪೈಪೋಟಿಗೆ ಕಾರಣರಾಗಲಿದ್ದಾರೆ.
ಫ್ರಾಂಚೈಸಿಗಳ ಪ್ರಸ್ತುತ ಸಾಮರ್ಥ್ಯದ ಲೆಕ್ಕಾಚಾರದ ಪ್ರಕಾರ ಒಟ್ಟು 87 ಸ್ಥಾನ ಬಾಕಿ ಇದೆ. ಅಂತಿಮ ಪಟ್ಟಿಯಲ್ಲಿರುವ 405 ಆಟಗಾರರು ಈ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಒಟ್ಟು 991 ಆಟಗಾರರು ಮುಂದಿನ ಆವೃತ್ತಿಯ ಹರಾಜಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲನೆ ಮಾಡಿದ ಐಪಿಎಲ್ ಆಡಳಿತ ಮಂಡಳಿ 405 ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಇದರಲ್ಲಿ 273 ಆಟಗಾರರು ಭಾರತೀಯರಾಗಿದ್ದರೆ 132 ವಿದೇಶಿ ಆಟಗಾರರು ಇದ್ದಾರೆ. ಇದರಲ್ಲಿ 119 ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವವರು.
ಕೋಲ್ಕೊತಾ ನೈಟ್ ರೈಡರ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡ ಅನುಕ್ರಮವಾಗಿ 11 ಹಾಗೂ 10 ಆಟಗಾರರನ್ನು ಒಳಗೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕನಿಷ್ಠ 5 ಆಟಗಾರರು ಬೇಕಾಗಿದ್ದಾರೆ.
ಇದನ್ನೂ ಓದಿ | IPL 2023 | 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಒಂದು ವಾರ ತಡವಾಗಿ ಆರಂಭ; ವರದಿ