Site icon Vistara News

IPL 2023 : ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಸಿಎಸ್​ಕೆ ಶಿಬಿರ ತೊರೆದ ಬೆನ್ ಸ್ಟೋಕ್ಸ್

Ben Stokes leaves CSK camp for one-off Test against Ireland

#image_title

ಚೆನ್ನೈ: ಐಪಿಎಲ್ 2023 ರ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಆಲ್​ರೌಂಡರ್​​ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಲು ದೊಡ್ಡ ಮೊತ್ತವನ್ನು ಪಾವತಿಸಿತ್ತು. ಇಂಗ್ಲೆಂಡ್​ನ ಟೆಸ್ಟ್​ ತಂಡದ ನಾಯಕ 16.25 ಕೋಟಿ ರೂಪಾಯಿ ಮೊತ್ತ ಪಡೆದು ಫ್ರಾಂಚೈಸಿ ಸೇರಿದರು, ಆದರೆ ತಂಡಕ್ಕೆ ಅವರಿಂದ ಹೆಚ್ಚಿನ ನೆರವು ಸಿಕ್ಕಿರಲಿಲ್ಲ. ಗಾಯದ ಸಮಸ್ಯೆ ಹಾಗೂ ಪ್ರದರ್ಶನ ವೈಫಲ್ಯದ ಕಾರಣ ಹೆಚ್ಚಿನ ಸಮಯ ಅವರು ಬೆಂಚು ಕಾಯುವಂತಾಯಿತು. ಹೀಗಾಗಿ ಸ್ಟೋಕ್ಸ್ ಈ ಋತುವಿನಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದು, 15 ರನ್ ಗಳಿಸಿದ್ದಾರೆ. ಎಸೆದಿರುವ ಏಕೈಕ ಓವರ್​​ನಲ್ಲಿ 18 ರನ್​ ನೀಡಿದ್ದಾರೆ. ಇದೀಗ ತಂಡ ಪ್ಲೇಆಫ್​ ಹಂತಕ್ಕೇರಿದೆ. ಆದರೆ, ವಿಶ್ವ ಕಪ್​ ವಿಜೇತ ಆಟಗಾರ ಮುಂದಿನ ಹಂತದಲ್ಲಿ ಆಡುತ್ತಿಲ್ಲ. ಅವರು ತವರಿಗೆ ಮರಳಿದ್ದಾರೆ.

ಜೂನ್ 1ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಐರ್ಲೆಂಡ್ ತಂಡಕ್ಕೆ ಆತಿಥ್ಯ ವಹಿಸಲಿದೆ. ಅದು ಮುಕ್ತಾಯಗೊಂಡ ಬಳಿಕ ಆ್ಯಷಸ್ ಸರಣಿಗೆ ಚಾಲನೆ ಸಿಗಲಿದೆ. ಟೆಸ್ಟ್​ ತಂಡ ತಂಡದ ಜವಾಬ್ದಾರಿ ವಹಿಸಿಕೊಂಡಿರುವ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಶಿಬಿರ ಸೇರಿಕೊಳ್ಳುವುದಕ್ಕೆ ತವರಿಗೆ ಮರಳಿದ್ದಾರೆ. ಅವರು ಐರ್ಲೆಂಡ್​ ವಿರುದ್ಧ ತಂಡವನ್ನು ಮುನ್ನಡೆಸಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್​ಗಳಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದೆ. ವಿಶ್ವದ ಬೆಸ್ಟ್​ ಆಲ್​ರೌಂಡರ್​ ರಾಷ್ಟ್ರೀಯ ತಂಡದ ಸೇವೆಗಾಗಿ ಸಲ್ಲಿಸಲು ಮನೆಗೆ ತೆರಳಿದ್ದಾರೆ ಎಂದು ಘೋಷಿಸಿದೆ.

ಇದನ್ನೂ ಓದಿ : IPL 2023 : ಮುಂದಿನ ವರ್ಷ ನಮ್ದೇ ಹವಾ ಎಂಬ ಮಾತು ಉಳಿಸಿಕೊಂಡ ಮಹೇಂದ್ರ ಸಿಂಗ್​ ಧೋನಿ!

ರಾಷ್ಟ್ರೀಯ ಸೇವೆಗೆ ಹೊರಟಿರುವ ಬೆನ್​ಸ್ಟೋಕ್ಸ್​ ಅವರಿಗೆ ಶುಭಾಶಯಗಳ ಎಂದು ಚೆನ್ನೈ ಸೂಪರ್​ ಕಿಂಗ್ಸ್ ತಂಡ ಬರೆದುಕೊಂಡಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಐರ್ಲೆಂಡ್ ತಂಡ ಮೇ 28ರಿಂದ ಎಸೆಕ್ಸ್ ವಿರುದ್ಧ ಪ್ರವಾಸ ಪಂದ್ಯವನ್ನಾಡಲಿದೆ. ನಂತರ ಲಾರ್ಡ್ಸ್​​ನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಐರ್ಲೆಂಡ್ 2023ರ ಸೆಪ್ಟೆಂಬರ್​​ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಮರಳಲಿದೆ. ಇದು ಭಾರತದಲ್ಲಿ ನಿಗದಿಯಾಗಿರುವ ವಿಶ್ವ ಕಪ್​ಗೆ ಬರಲಿದೆ.

ಬೆನ್​ಸ್ಟೋಕ್ಸ್​ ವಾಪಾಸಾಗುವುದರಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತಂಡ ಈಗಾಗಲೇ ಪ್ಲೇಆಫ್​ ಸ್ಥಾನ ಪಡೆದುಕೊಂಡಿದೆ. ದೀಪಕ್ ಚಾಹರ್ ಫಿಟ್​ ಆಗಿರುವ ಕಾರಣ ವೇಗದ ಬೌಲಿಂಗ್ ಆಲ್​ರೌಂಡರ್​ ಸ್ಥಾನ ತುಂಬಿದೆ. ಹೀಗಾಗಿ ಅದೇ ಸಂಯೋಜನೆಯ ಜತೆಗೆ ಮುಂದಿನ ಪಂದ್ಯಗಳಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸಿಎಸ್​ಕೆ ತಂಡ ಗುಜರಾತ್​ ಜೈಂಟ್ಸ್​ ವಿರುದ್ಧ ಆಡಲಿದೆ.

Exit mobile version