Site icon Vistara News

ICC World Cup 2023: ಪಾಕ್​ ಅಭಿಮಾನಿಗಳಿಗೂ ಪಾಕಿಸ್ತಾನ ಜಿಂದಾಬಾದ್​ ಹೇಳಲು ಬಿಡದ ಪೊಲೀಸರು​; ಆರೋಪ

Bangalore police

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಕಪ್​ (ICC World Cup 2023) ಪಂದ್ಯದ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದ ಪಾಕಿಸ್ತಾನ ಪ್ರಜೆಯೊಬ್ಬರಿಗೆ ಪೊಲೀಸರು ತಡೆಯೊಡ್ಡಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಪರ ವಿರೋಧ ಟೀಕೆಗಳು ವ್ಯಕ್ತಗೊಂಡಿವೆ. 2023 ರ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನ ಅಭಿಮಾನಿಗಳು ಉತ್ಸುಕರಾಗಿ ಬಂದಿದ್ದು, ಅವರಿಗೆ ಪೊಲೀಸರು ತಡೆಯೊಡ್ಡಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ ಅಭಿಮಾನಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಕ್ರೀಡಾಂಗಣದಲ್ಲಿದ್ದ ಅಧಿಕಾರಿಗಳು ಮಧ್ಯಪ್ರವೇಶಿಸಿ ಅವರನ್ನು ತಡೆಯಲು ಮುಂದಾದಾಗ ಕ್ರೀಡಾಂಗಣದಲ್ಲಿ ಹಾಜರಿದ್ದ ಅಭಿಮಾನಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಜೈಕಾರ ಹಾಕಿದ್ದಾರೆ.

ವೀಡಿಯೊದಲ್ಲಿ, ಪಾಕಿಸ್ತಾನದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿರುವ ಪ್ರೇಕ್ಷಕನು ಪೊಲೀಸರೊಂದಿಗೆ ನಿರಂತರವಾಗಿ ವಾದ ಮಾಡಿದ್ದರು. ನಾನು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯನ್ನು ಏಕೆ ಹೇಳಲು ಸಾಧ್ಯವಿಲ್ಲ ಎಂದು ನಿರಂತರವಾಗಿ ಪ್ರಶ್ನಿಸಿದ್ದಾನೆ.

ವೈರಲ್ ಕ್ಲಿಪ್ ಇಲ್ಲಿದೆ

ಪಾಕಿಸ್ತಾನ ತಂಡಕ್ಕೆ ದೊಡ್ಡ ಗುರಿ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ ಪಾಕಿಸ್ತಾನಕ್ಕೆ 368 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಇಬ್ಬರೂ ಶತಕಗಳನ್ನು ಬಾರಿಸುವ ಮೂಲಕ 259 ರನ್​ಗಳ ಜೊತೆಯಾಟ ಆಡಿದರು. ಈ ಮೂಲಕ ಐದು ಬಾರಿಯ ಚಾಂಪಿಯನ್ಸ್ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದರು.

ಇದನ್ನೂ ಓದಿ :

ಮೊದಲ ವಿಕೆಟ್ ನಂತರ ಉಳಿದ ಆಸೀಸ್ ಬ್ಯಾಟರ್​ಗಳಿಗೆ ವೇಗವನ್ನು ಪಡೆಯಲು ಸಾಧ್ಯವಾಗದ ಕಾರಣ ಪಾಕಿಸ್ತಾನವು ಅಧಿಕಾರ ಸ್ಥಾಪಿಸಿತು. ಶಾಹೀನ್ ಶಾ ಅಫ್ರಿದಿ ಅವರ ಐದು ವಿಕೆಟ್​ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ನಿಯಂತ್ರಿಸಿತು. ಇಲ್ಲವಾಗಿದ್ದಲ್ಲಿ 400 ರನ್​ಗಳ ಗುರಿ ದಾಟುವ ಸಾಧ್ಯತೆಗಳು ಇದ್ದವು.

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಎರಡೂ ತಂಡಗಳಿಗೆ ತಮ್ಮ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಡಲು ಗೆಲ್ಲಬೇಕಾಗಿದೆ. ಈಗಾಗಲೇ ಎರಡು ಬಾರಿ ಸೋತಿರುವ ಆಸ್ಟ್ರೇಲಿಯಾದ ಅಭಿಯಾನಕ್ಕೆ ಇಲ್ಲಿ ಸೋಲು ಬಹುತೇಕ ತೆರೆ ಎಳೆಯಲಿದೆ.

Exit mobile version