ನವ ದೆಹಲಿ: 24 ವರ್ಷದ ಯುವತಿಯೊಬ್ಬಳ ಮೇಲೆ ತಮ್ಮ ಮನೆಯಲ್ಲಿ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ 28 ವರ್ಷದ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಆಟಗಾರ ಬೆಂಜಮಿನ್ ಮೆಂಡಿ ತಾನು 10,000 ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಹೇಳಿದೆ. ಅಷ್ಟೊಂದು ಮಹಿಳೆಯರ ಜತೆ ಲೈಂಗಿಕತೆ ನಡೆಸಿರುವ ತಾನು ಯುವತಿ ಮೇಲೆ ಅತ್ಯಾಚಾರ ಮಾಡಿರುವುದು ಸರಿ ಎಂಬುದಾಗಿ ಅವರು ವಾದಿಸುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ.
2020ರ ಅಕ್ಟೋಬರ್ನಲ್ಲಿ ಮೆಂಡಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಯುವತಿ ದೂರಿದ್ದರು . ಅದೂ ಅಲ್ಲದೆ, 29 ವರ್ಷದ ಮತ್ತೊಬ್ಬ ಮಹಿಳೆ ಎರಡು ವರ್ಷಗಳ ಹಿಂದೆ ಅವನು ತನ್ನ ಮನೆಯಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಬೆಂಜಮಿನ್ ಮೆಂಡಿಯ ರಾಸಲೀಲೆಯ ಪ್ರಕರಣಗಳು ಹೊರಬರುತ್ತಿವೆ. ಚೆಸ್ಟರ್ ಕ್ರೌನ್ ಕೋರ್ಟ್ನಲ್ಲಿ ಫುಟ್ಬಾಲ್ ಆಟಗಾರನ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣ ಮಾಧ್ಯಮಗಳ ಆಸಕ್ತಿ ಕೆರಳಿಸುತ್ತಿದೆ. ಆದರೆ, ಫುಟ್ಬಾಲ್ ಆಟಗಾರ ಮಾತ್ರ ಅತ್ಯಾಚಾರದ ಆರೋಪಗಳನ್ನು ನಿರಾಕರಿಸಿದ್ದಾನೆ. ಇದು ಒಪ್ಪಿತ ಲೈಂಗಿಕತೆ. ಮಹಿಳೆಯರನ್ನು ಒಪ್ಪಿಸಿ ಅವರೊಂದಿಗೆ ಲೈಂಗಿಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
2023 ವರ್ಷದ ಜನವರಿಯಲ್ಲಿ ಮುಕ್ತಾಯಗೊಂಡ ವಿಚಾರಣೆಯ ಬಳಿಕ ಮಹಿಳೆಯರು ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಾಗಿಲ್ಲ. ಫ್ರಾನ್ಸ್ ತಂಡದ ಈ ಆಟಗಾರ ನಿರಪರಾಧಿ ಎಂದು ಹೇಳಲಾಗಿತ್ತು ಎಂದು ಆರು ಮಹಿಳೆಯರು ಮತ್ತು ಆರು ಪುರುಷ ನ್ಯಾಯಾಧೀಶರು ಇರುವ ಕೋರ್ಟ್ ಹೇಳಿದೆ. ಹೀಗಾಗಿ ಅತ್ಯಾಚಾರ ಯತ್ನ ಮತ್ತು ಅತ್ಯಾಚಾರದ ಎರಡು ಆರೋಪಗಳ ಬಗ್ಗೆ ಮರು ವಿಚಾರಣೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ವಿಚಾರಣೆಯು ಪ್ರಸ್ತುತಪಡಿಸಿದ ಪುರಾವೆಗಳ ಮೇಲೆ ಮಾತ್ರ ಆಧರಿಸಿರಬೇಕು. ಹಿಂದಿನ ವಿಚಾರಣೆ ಅಥವಾ ಮಾಧ್ಯಮ ವರದಿಗಳ ಮಾಹಿತಿಯ ಮೇಲೆ ಅಲ್ಲ ಎಂದು ಕೋರ್ಟ್ ಸಲಹೆ ಕೊಟ್ಟಿದೆ.
ಸ್ನಾನ ಮಾಡುವಾಗ ನೋಡಿ ಅತ್ಯಾಚಾರ
ಬೆಂಜಮಿನ್ ಹೇಳುವ ಪ್ರಕಾರ ಆರೋಪ ಮಾಡಿರುವ ಯುವತಿಯರು ಅವರ ಜತೆ ನಿರಂತರ ಸಂಪರ್ಕದಲ್ಲಿದ್ದರು. ಮತ್ತು ಒಂದು ವರ್ಷದ ನಂತರ ಅವರು ಫುಟ್ಬಾಲ್ ಆಟಗಾರನ ಮನೆಗೆ ಬಂದಿದ್ದರು. ಮೆಂಡಿ ಸ್ನಾನ ಮಾಡುತ್ತಿದ್ದಾಗ ಯವತಿ ಅವನನ್ನು ಹಿಂದಿನಿಂದ ಬಂದು ತಬ್ಬಿಕೊಂಡಿದ್ದಳು. ಅಲ್ಲದೆ, ಲೈಂಗಿಕತೆಗೆ ಪ್ರಚೋಚದನೆ ನೀಡಿದ್ದಳು. ಯಾವುದೇ ಸಂಬಂಧ ಬೇಡವೆಂದು ಮಹಿಳೆಯನ್ನು ಕೋರಿಕೊಂಡರೂ ಆಕೆ ಮುಂದುವರಿದಳು ಎಂದು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ.
ಇದನ್ನೂ ಓದಿ : POCSO Case: ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದವನಿಗೆ 25 ವರ್ಷ ಜೈಲು
ನನ್ನನ್ನು ಅತ್ಯಾಚಾರ ಮಾಡಲು ಮುಂದಾದ ಮೆಂಡಿಯಿಂದ ಬಿಡುಗಡೆ ಪಡೆಯಲು ಯತ್ನಿಸಿದೆ. ಆದರೆ, ಆತ ನನ್ನನ್ನು ಹಿಡಿದು ಹಾಸಿಗೆ ಬಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಎಂದು 24 ವರ್ಷದ ಯುವತಿ ಆರೋಪಿಸಿದ್ದಾಳೆ. ಆದರೆ, ಎರಡೂ ಸಂದರ್ಭಗಳಲ್ಲಿ ಎಲ್ಲಾ ಲೈಂಗಿಕ ಸಂಪರ್ಕವು ಒಮ್ಮತದಿಂದ ನಡೆದಿದೆ ಎಂದು ಮೆಂಡಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. 10 ಸಾವಿರ ಮಹಿಳೆಯರ ಜತೆ ಲೈಂಗಿಕ ಸಂಬಂಧ ಹೊಂದಿರುವ ರೀತಿಯಲ್ಲಿ ಇದೂ ಒಂದು ಸಂಬಂಧ ಎಂದು ಅವರು ಹೇಳಿದ್ದಾರೆ.