Site icon Vistara News

Best Allrounder : ಆಸೀಸ್ ಡ್ರೆಸಿಂಗ್​ ರೂಮ್​​ನಲ್ಲಿ​ ಕಂಡ ಬೆಸ್ಟ್​ ಆಲ್​ರೌಂಡರ್​ಗಳ ಪಟ್ಟಿ ವೈರಲ್​

R Ashwin

ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ಡ್ರೆಸಿಂಗ್ ರೂಮ್​ನಲ್ಲಿ ಕಂಡು ಬಂದಿರುವ ಪಟ್ಟಿಯೊಂದು ಗಮನ ಸೆಳೆದಿದೆ. ಅದರಲ್ಲಿ ಅವರು ವಿಶ್ವದ ಬೆಸ್ಟ್​ ಸ್ಪಿನ್​​ ಆಲ್​ರೌಂಡರ್​ಗಳು (Best Allrounder) ಯಾರು ಎಂಬ ಹೆಸರನ್ನು ಬರೆದುಕೊಂಡಿದ್ದಾರೆ. ಪಟ್ಟಿಯಲ್ಲಿ ಭಾರತದ ಸ್ಪಿನ್ ಜೋಡಿಯಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಥಾನ ಪಡೆದುಕೊಂಡಿರುವ ಕಾರಣ ಅದು ವೈರಲ್​ ಆಗಿದೆ.

ಎಂಸಿಜಿಯಲ್ಲಿ ನಡೆದ ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾ ತಂಡ ಪಾಕಿಸ್ತಾಣವನ್ನು ಎದುರಿಸುತ್ತಿದ್ದಂತೆ, ಚಾನೆಲ್ 7 ಕ್ಯಾಮೆರಾಗಳು ತವರು ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಇಡಲಾಗಿದ್ದ ವೈಟ್ ಬೋರ್ಡ್ ಅನ್ನು ಸೆರೆಹಿಡಿದವು, ಅಲ್ಲಿ ಆತಿಥೇಯರು ಎಲ್ಲಾ ಅತ್ಯುತ್ತಮ ಸ್ಪಿನ್ ಆಲ್​​ರೌಂಡರ್​ಗಳ ಹೆಸರುಗಳನ್ನು ಬರೆಯಲಾಗಿತ್ತು. ಈ ಪಟ್ಟಿಯಲ್ಲಿ ಜಡೇಜಾ ಮತ್ತು ಅಕ್ಷರ್ ಇದ್ದರು. ಭಾರತದ ಸ್ಪಿನ್ನರ್​ಗಳು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ಮತ್ತು ಬಾಲ್​ನಲ್ಲಿ ಗಮನಾರ್ಹ ಪ್ರಭಾವ ಬೀರಿದ್ದೇ ಅದಕ್ಕೆ ಕಾರಣ.

ಸಮಯೋಚಿತ ಸಂದರ್ಭಗಳಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಅನಾವರಣಗೊಳಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿ ಮುಖಾಮುಖಿಗಳಲ್ಲಿ ಈ ಮೂವರು ಸ್ಪಿನ್ನರ್​​ ಪರಿಣಾಮ ಬೀರಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಡ್ರೆಸಿಂಗ್​ ರೂಮ್​ನಲ್ಲಿ ಅದು ಕಂಡು ಬಂದಿದೆ.

ಇದನ್ನೂ ಓದಿ : David Warner : ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್​

ಆಸ್ಟ್ರೇಲಿಯಾ-ಪಾಕಿಸ್ತಾನ ಟೆಸ್ಟ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಭಾರತೀಯ ಅಭಿಮಾನಿಗಳು ಅಶ್ವಿನ್, ಅಕ್ಷರ್ ಮತ್ತು ಜಡೇಜಾ ತ್ರಿವಳಿ ಅಂತಹ ಪಟ್ಟಿಯಲ್ಲಿ ನೋಡಿ ಹೆಮ್ಮೆಪಟ್ಟಿದ್ದಾರೆ. ಯಾಕೆಂದರೆ ಆಸ್ಟ್ರೇಲಿಯಾ ತಂಡವು ಭಾರತ ಸ್ಪಿನ್ ಆಲ್​ರೌಂಡರ್​ಗಳ ಬಗ್ಗೆ ಎಷ್ಟು ಭಯ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ.

ಅಕ್ಷರ್ ಅವರ ಬೆಳವಣಿಗೆ ಅದ್ಭುತ

ಅಶ್ವಿನ್ ಮತ್ತು ಜಡೇಜಾ ಟೆಸ್ಟ್ ಕ್ರಿಕೆಟ್​ನ ಅತ್ಯಂತ ಜನಪ್ರಿಯ ಐಕಾನ್​ಗಳು. ಆದರೆ ಅಕ್ಷರ್ ಅವರ ಏರಿಕೆ ನಿಜವಾಗಿಯೂ ವಿಶೇಷ ಎನಿಸಿದೆ. ವರ್ಷದ ಆರಂಭದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅದು ಸ್ಪಷ್ಟವಾಗಿದೆ. ನಾಗ್ಪುರ ಮತ್ತು ದೆಹಲಿಯಲ್ಲಿ ಅವರ ಅಮೂಲ್ಯ ಅರ್ಧಶತಕಗಳು ಪಂದ್ಯದಲ್ಲಿ ಗಮನಾರ್ಹ ಬದಲಾವಣೆ ತಂದಿತ್ತು.

ಹಿರಿಯ ಆಟಗಾರರಾದ ಅಶ್ವಿನ್​ ಮತ್ತು ಜಡೇನಾ ಎರಡೂ ಕೌಶಲಗಳ ಮೂಲಕ ಆಸ್ಟ್ರೇಲಿಯಾದ ತಂಡಕ್ಕೆ ದೀರ್ಘಕಾಲದಿಂದ ಮುಳ್ಳಾಗಿದ್ದಾರೆ. ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ 25.41 ಸರಾಸರಿಯಲ್ಲಿ 105 ಟೆಸ್ಟ್ ವಿಕೆಟ್ ಪಡೆದರೆ, ಜಡೇಜಾ 19.89 ಸರಾಸರಿಯಲ್ಲಿ 89 ವಿಕೆಟ್ ಪಡೆದಿದ್ದಾರೆ.

ಚೆಂಡಿನ ಮೇಲಿನ ತಮ್ಮ ಪಾಂಡಿತ್ಯದ ಹೊರತಾಗಿ ಇಬ್ಬರು ಶ್ರೇಷ್ಠ ಕ್ರಿಕೆಟಿಗರು ಬ್ಯಾಟಿಂಗ್ ವಿಚಾರದಲ್ಲಿಯೂ ಮುಂದಿದ್ದಾರೆ. ಜಡೇಜಾ ಎದುರಾಳಿ ತಂಡದ ವಿರುದ್ಧ ಸುಮಾರು 30 ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದಾರೆ.

Exit mobile version