ನವ ದೆಹಲಿ: ಭಾರತದ ಮಹಿಳಾ ಫೆನ್ಸರ್ ಸಿ.ಎ. ಭವಾನಿ ದೇವಿ ಸೋಮವಾರ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಅವರು ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ಅವರನ್ನು ಸೋಲಿಸಿ ಸೆಮಿಫೈನಲ್ಗೆ ಪ್ರವೇಶಿಸಿದರು. ಅಲ್ಲದೆ, ಸೆಮೀಸ್ನಲ್ಲಿ ಸೋತು ಕಂಚಿನ ಪದಕ ಗೆದ್ದರು. ಇದರೊಂದಿಗೆ ಅವರು ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದ ಮೊದಲ ಭಾರತದ ಫೆನ್ಸರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವದ ನಂ.1 ಆಟಗಾರ್ತಿಯನ್ನು 15-10 ಅಂಕಗಳ ಅಂತರದಿಂದ ಮಣಿಸಿದ ಸೆಮಿಫೈನಲ್ ಪ್ರವೇಶಿಸಿದ್ದರು. ಈ ಪಂದ್ಯಕ್ಕೂ ಮುನ್ನ ಭವಾನಿ ಮಿಸಾಕಿ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತಿದ್ದರು. ಭವಾನಿ ಸೆಮಿಫೈನಲ್ನಲ್ಲಿ ಉಜ್ಬೇಕಿಸ್ತಾನದ ಝೈನಾಬ್ ದೈಬೆಕೋವಾ ವಿರುದ್ಧ 15-14 ಅಂತರದಲ್ಲಿ ಸೋತು ಕಂಚಿನ ಪದಕ ಗೆದ್ದರು.
ಇದಕ್ಕೂ ಮುನ್ನ 29ರ ಹರೆಯದ ಭವಾನಿ 32ನೇ ಸುತ್ತಿನಲ್ಲಿ ಕಜಕಸ್ತಾನದ ದಸ್ಪೇ ಕರಿನಾ ಅವರನ್ನು ಸೋಲಿಸುವ ಮೂಲಕ 64ನೇ ಸುತ್ತಿಗೆ ಪ್ರವೇಶಿಸಿದ್ದರು . ನಂತರ ಅವರು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಒಜಾಕಿ ಸೆರಿ ಅವರನ್ನು 15-11 ರಿಂದ ಸೋಲಿಸಿದರು.
ಫೆನ್ಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಭವಾನಿ ಅವರ ಐತಿಹಾಸಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : Team India : ಟೀಮ್ ಇಂಡಿಯಾ ಮಾಜಿ ಆಟಗಾರ ರಾಜಕೀಯಕ್ಕೆ ಪ್ರವೇಶ?
ಇದು ಭಾರತೀಯ ಫೆನ್ಸಿಂಗ್ ಕ್ಷೇತ್ರಕ್ಕೆ ಹೆಮ್ಮೆಯ ದಿನ. ಈ ಮೊದಲು ಯಾರೂ ಸಾಧಿಸಲು ಸಾಧ್ಯವಾಗದ ಸಾಧನೆಯನ್ನು ಭವಾನಿ ಮಾಡಿದ್ದಾರೆ. ಪ್ರತಿಷ್ಠಿತ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಡೀ ಫೆನ್ಸಿಂಗ್ ಕ್ಷೇತ್ರದ ಪರವಾಗಿ, ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಮೆಹ್ತಾ ಪಿಟಿಐಗೆ ತಿಳಿಸಿದರು.
ಅವರು ಸೆಮಿಫೈನಲ್ನಲ್ಲಿ ಸೋತರೂ, ಒಂದೇ ಅಂಕದ ಅಂತರಿಂದ ಸೋತರು. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.