Site icon Vistara News

Jasprit Bumrah | ಐಪಿಎಲ್‌ ವೇಳೆಗೆ ಫಿಟ್ನೆಸ್‌ ಎಲ್ಲಿಂದ ಬರುತ್ತದೆ, ಬುಮ್ರಾ ಅಲಭ್ಯತೆ ಬಗ್ಗೆ ದೊಡ್ಡ ಗಣೇಶ್‌ ಪ್ರಶ್ನೆ

ICC ODI Ranking

ಬೆಂಗಳೂರು : ಜಸ್‌ಪ್ರಿತ್‌ ಬುಮ್ರಾ ಟಿ೨೦ ವಿಶ್ವ ಕಪ್‌ ತಂಡಕ್ಕೆ ಅಲಭ್ಯರಾಗಿದ್ದು ಭಾರತ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆ ಎನಿಸಿದೆ. ಪ್ರಮುಖ ಬೌಲರ್‌ ಎನಿಸಿಕೊಂಡಿರುವ ಅವರ ಆಡದಿರುವುದರಿಂದ ಭಾರತ ತಂಡದ ಯೋಜನೆಗಳು ಬುಡಮೇಲಾಗಲಿವೆ. ಅದೇ ರೀತಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಟೂರ್ನಿಗೆ ಅಲಭ್ಯರಾಗಿದ್ದು ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ಮುರಿದು ಹೋದಂತಾಗಿದೆ. ಇವೆಲ್ಲವೂ ಸದ್ಯ ಕ್ರಿಕೆಟ್‌ ಪಂಡಿತರ ನಡುವಿನ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಭಾರತ ತಂಡದ ಅನುಭವಿ ಆಟಗಾರರು ಪ್ರಮುಖ ಟೂರ್ನಿಗಳಿಗೆ ಅಲಭ್ಯರಾಗುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹಿರಿಯ ಆಟಗಾರರು ಅಗತ್ಯ ಸಂದರ್ಭದಲ್ಲಿ ಫಿಟ್ನೆಸ್‌ ಕಾಪಾಡಿಕೊಳ್ಳದೇ ತಂಡವನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂಬುದು ಅವರೆಲ್ಲರ ಅಭಿಪ್ರಾಯವಾಗಿದೆ. ಐಪಿಎಲ್‌ನಲ್ಲಿ ಕಾಸಿಗಾಗಿ ಆಡುವ ಈ ಆಟಗಾರರು ಭಾರತ ತಂಡದ ಸೇವೆಗೆ ಯಾಕೆ ಲಭ್ಯರಾಗುತ್ತಿಲ್ಲ ಎಂಬುದಾಗಿ ಪ್ರಶ್ನಿಸುತ್ತಿದ್ದಾರೆ.

ಭಾರತ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್‌ ಅವರು ಕ್ರಿಕೆಟ್‌ ಪ್ರೇಮಿಗಳ ಆಕ್ರೋಶಕ್ಕೆ ಪೂರಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನೂ ಟ್ವೀಟ್‌ನಲ್ಲಿ ದಾಖಲಿಸಿದ್ದಾರೆ “ಯಾವ ಆಟಗಾರು ಕೂಡ ತಮ್ಮ ಗಾಯದ ಸಮಸ್ಯೆಯನ್ನು ಯೋಜನೆಯಂತೆ ಮಾಡಲು ಸಾಧ್ಯವಿಲ್ಲ. ವಿಶ್ವ ಕಪ್‌ಗೆ ಜಸ್‌ಪ್ರಿತ್‌ ಬುಮ್ರಾ ಹಾಗೂ ರವೀಂದ್ರ ಜಡೇಜಾ ಅವರ ಸೇವೆ ಲಭಿಸದೇ ಹೋಗಿರುವುದು ದುರದೃಷ್ಟ. ಆದರೆ, ಗಾಳಿಯಲ್ಲಿ ಗುಂಡು ಹೊಡೆದಂತೆ ಒಂದು ಮಾತು ಹೇಳುವುದಾದರೆ, ಈ ಎಲ್ಲ ಆಟಗಾರರು ಐಪಿಎಲ್‌ ವೇಳೆ ಫಿಟ್‌ ಆಗುವುದು ಹಾಸ್ಯಾಸ್ಪದ ಸಂಗತಿ. ನಮ್ಮ ಆಟಗಾರರನ್ನು ಗೌರವಿಸೋಣ,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Jasprit Bumrah | ಮೂಳೆ ಮುರಿತ, ಟಿ-20 ವಿಶ್ವಕಪ್‌ನಿಂದಲೇ ಜಸ್‌ಪ್ರಿತ್‌ ಬುಮ್ರಾ ಔಟ್‌

Exit mobile version