Site icon Vistara News

Racial Abuse : ಮನ ಕಲಕುವ ವಿಡಿಯೊ; ಜಿಮ್ನಾಸ್ಟಿಕ್ಸ್‌ನಲ್ಲಿ ಗೆದ್ದ​ ಬಾಲಕಿಗೆ ಕಪ್ಪು ಬಣ್ಣದವಳೆಂದು ಪದಕ ನೀಡದ ಆಯೋಜಕರು!

Medla Event

ನವ ದೆಹಲಿ: ವರ್ಣ ಭೇದದ ನೀತಿಯ ವಿರುದ್ಧ ಹಲವು ಮಹನೀಯರು ಹೋರಾಟ ಮಾಡಿದ ಹೊರತಾಗಿಯೂ ಆ ಮನಸ್ಥಿತಿಯನ್ನು ಬುಡಸಮೇತ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಆಗಾಗ ಇಂಥ ಘೋರ ಕೃತ್ಯಗಳು ವರದಿಯಾಗುತ್ತದೆ. ಬಿಳಿಯೇ ಶ್ರೇಷ್ಠ ಎಂಬ ಮನಸ್ಥಿತಿ ಹೊಂದಿರುವ ಮಂದಿ ಕಪ್ಪು ಬಣ್ಣದವರಿಗೆ ಅಗೌರವ ತೋರುವುದನ್ನು (Racial Abuse) ಮುಂದುವರಿಸಿದ್ದಾರೆ. ಇಂಥದ್ದೇ ಒಂದು ಘಟನೆ ಜಿಮ್ನಾಸ್ಟಿಕ್ಸ್​​ನಲ್ಲೂ ನಡೆದಿದೆ. ಜಿಮ್ನಾಸ್ಟಿಕ್ಸ್​ನಲ್ಲಿ ಗೆದ್ದ ಎಲ್ಲರಿಗೂ ಪದಕದ ಹಾರ ಹಾಕಿದರೂ, ಕಪ್ಪು ಬಣ್ಣದ ಪುಟಾಣಿ ಹುಡುಗಿಗೆ ಹಾರ ಹಾಕದೇ ತಾರತಮ್ಯ ಮಾಡಲಾಗಿದೆ. ಒಂದು ವರ್ಷದ ಹಿಂದೆ ನಡೆದ ಘಟನೆ ಇದೀಗ ವಿವಾದಕ್ಕೆ ಒಳಗಾಗಿದ್ದು ಐರ್ಲೆಂಡ್​ನ ಜಿಮ್ನಾಸ್ಟಿಕ್ಸ್​ ಸಂಸ್ಥೆ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿ ಕ್ಷಮೆ ಕೋರಿದೆ.

ಜಿಮ್ನಾಸ್ಟಿಕ್ಸ್ ಐರ್ಲೆಂಡ್ ನಲ್ಲಿ ಪದಕ ಪ್ರದಾನ ಸಮಾರಂಭದ ವೇಳೆ ಘಟನೆ ನಡೆದಿದೆ. ಕರಿ ಬಣ್ಣದ ಬಾಲೆಯನ್ನು ಕಡೆಗಣಿಸಿದ ವಿಡಿಯೋ ವೈರಲ್ ಆದ ನಂತರ ವರ್ಣಭೇದ ನೀತಿ ವಿವಾದಕ್ಕೆ ಸಿಲುಕಿದೆ. ಬಿಳಿ ಬಣ್ಣದ ಪ್ರಶಸ್ತಿ ಪ್ರಧಾನ ಮಾಡಿದ ಮಹಿಳೆ ಕಪ್ಪು ಬಣ್ಣದ ಬಾಲಕಿಯೊಬ್ಬಳನ್ನು ಬಿಟ್ಟು ಮಿಕ್ಕವರೆಲ್ಲರಿಗೂ ಹಾರ ಹಾಕಿದ್ದಳು.

ಈ ವೀಡಿಯೊವನ್ನು ಮೂಲತಃ ಕಳೆದ ವರ್ಷ ಮಾರ್ಚ್​​ನಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೊದಲ್ಲಿ ತಮ್ಮ ಪ್ರಶಸ್ತಿಗಳಿಗಾಗಿ ಕಾಯುತ್ತಿರುವ ಯುವ ಜಿಮ್ನಾಸ್ಟ್ ಗಳ ಸಾಲನ್ನು ತೋರಿಸಲಾಗಿದೆ. ಅವರೆಲ್ಲರೂ ತಮ್ಮ ತಮ್ಮ ಪ್ರಶಸ್ತಿ ಸ್ವೀಕರಿಸಿದರೂ, ಕಪ್ಪು ಹುಡುಗಿಯನ್ನು ಸ್ಪಷ್ಟವಾಗಿ ಕಡೆಗಣಿಸಲಾಗಿತ್ತು.

ಇದನ್ನೂ ಓದಿ : KL Rahul : ಶತಕ ಸಿಡಿಸಿ ಟೀಕಾಕಾರರ ಬಾಯ್ಮುಚ್ಚಿಸಿದ ಕೆ. ಎಲ್​ ರಾಹುಲ್​

ಕಳೆದ ವರ್ಷವೇ ಈ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಕ್ರೀಡಾ ಸಂಸ್ಥೆ ಹೇಳಿಕೊಂಡಿದೆ. ಆದರೆ, ಬಾಲಕಿಯ ಕುಟುಂಬವು ಕ್ಷಮೆಯಾಚನೆಯನ್ನು ಸ್ವೀಕರಿಸಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಈ ಘಟನೆಯ ನಮ್ಮ ಕುಟುಂಬವು ತುಂಬಾ ಅಸಮಾಧಾನಗೊಂಡಿದೆ ಎಂದು ತಾಯಿ ಹೇಳಿದ್ದಾರೆ. ತಮ್ಮ ಮಗಳು ಕಪ್ಪು ವರ್ಣೀಯಳಾಗಿದ್ದರಿಂದ ಅವಳನ್ನು ನಿರ್ಲಕ್ಷಿಸಲಾಗಿದೆ ಎಂದು ಕುಟುಂಬ ಆರೋಪಿಸಿದೆ.

ಪ್ರಶಸ್ತಿಗಳನ್ನು ನೀಡಿದ ಮಹಿಳೆ ಬಿಳಿ ಬಣ್ಣದ ಮಕ್ಕಳಿಗೆ ಮಾತ್ರ ಪದಕ ನೀಡಿ ಹೊರಟುಹೋದರು ಎಂದು ಅನೇಕರು ಗಮನಸೆಳೆದಿದ್ದಾರೆ. ಆದರೆ, ಆ ಮಹಿಳೆಯ ಸದಸ್ಯತ್ವವನ್ನು ನವೀಕರಿಸಲಾಗಿಲ್ಲ. ಹೀಗಾಗಿ ಅವರು ಐರ್ಲೆಂಡ್​ ಜಿಮ್ನಾಸ್ಟಿಕ್ಸ್​ ಸಂಸ್ಥೆಯೊಂದಿಗೆ ಇಲ್ಲ ಎಂದು ಹೇಳಲಾಗಿದೆ.

ಸಿಮೋನ್ ಬೈಲ್ಸ್ ಪ್ರತಿಕ್ರಿಯೆ

ವೀಡಿಯೊ ಹೊರಬಂದ ನಂತರ ಅಮೆರಿಕದ ಜಿಮ್ನಾಸ್ಟಿಕ್ಸ್​ ತಾರೆ ಸಿಮೋನ್ ಬೈಲ್ಸ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ನೀಚ ಕೃತ್ಯ ಎಂದಿದ್ದಾರೆ. ಈ ವೀಡಿಯೊ ಪ್ರಸಾರವಾಗುತ್ತಿದ್ದಂತೆ ಆಕೆಯ ಪೋಷಕರನ್ನು ಸಂಪರ್ಕಿಸಿದೆ. ಅವರ ಬೇಸರ ನೋಡಿ ನನ್ನ ಹೃದಯ ಒಡೆದುಹೋಯಿತು ಎಂದು ಸಿಮೋನ್ ಎಕ್ಸ್ ನಲ್ಲಿ ಬರೆದಿದ್ದಾರೆ. ಯಾವುದೇ ಕ್ರೀಡೆಯಲ್ಲಿ ಅಥವಾ ಯಾವುದೇ ವರ್ಣಭೇದ ನೀತಿಗೆ ಅವಕಾಶವಿಲ್ಲ” ಎಂದು ಸಿಮೋನ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಕ್ಷಮೆಯಾಚಿಸಿದ ಜಿಮ್ನಾಸ್ಟಿಕ್ಸ್ ಐರ್ಲೆಂಡ್

ಈ ವಿಡಿಯೋ ವೈರಲ್ ಆದ ಬಳಿಕ ಐರ್ಲೆಂಡ್ ಜಿಮ್ನಾಸ್ಟಿಕ್ಸ್ ಕ್ಷಮೆಯಾಚಿಸಿದೆ. “ಮಾರ್ಚ್ 2022 ರಲ್ಲಿ ಜಿಮ್ನಾಸ್ಟ್​ಆರ್ಟ್ ಈವೆಂಟ್​ನಲ್ಲಿ ನಡೆದ ಘಟನೆಯಿಂದ ಉಂಟಾದ ಅಸಮಾಧಾನಕ್ಕಾಗಿ ಜಿಮ್ನಾಸ್ಟಿಕ್ಸ್ ಐರ್ಲೆಂಡ್​್ ಮಂಡಳಿ ಮತ್ತು ಸಿಬ್ಬಂದಿಯ ಪರವಾಗಿ ನಾವು ಬಾಲಕಿ ಮತ್ತು ಅವರ ಕುಟುಂಬಕ್ಕೆ ಮುಕ್ತವಾಗಿ ಕ್ಷಮೆಯಾಚಿಸಲು ಬಯಸುತ್ತೇವೆ” ಎಂದು ಜಿಮ್ನಾಸ್ಟಿಕ್ಸ್ ಐರ್ಲೆಂಡ್ ಹೇಳಿಕೆಯಲ್ಲಿ ತಿಳಿಸಿದೆ. “ಆ ದಿನ ಆ ಘಟನೆ ಸಂಭವಿಸಬಾರದಿತ್ತು ಮತ್ತು ಅದಕ್ಕಾಗಿ ನಾವು ತುಂಬಾ ವಿಷಾದಿಸುತ್ತೇವೆ. ಎಂದು ಹೇಳಿದೆ.

Exit mobile version