Site icon Vistara News

Deepika Padukone | ಫುಟ್ಬಾಲ್‌ ವಿಶ್ವ ಕಪ್‌ ಅನಾವರಣ ಮಾಡಲಿದ್ದಾರೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

Deepika Padukone is pregnant and Expecting first child Says Report

ಕತಾರ್‌ : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಗೌರವವೊಂದಕ್ಕೆ ಪಾತ್ರರಾಗಲಿದ್ದಾರೆ. ಡಿಸೆಂಬರ್‌ ೧೮ರಂದು ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವ ಕಪ್‌ (FiFA World Cup) ಫೈನಲ್‌ ಪಂದ್ಯದ ವೇಳೆ ಟ್ರೋಫಿ ಅನಾವರಣ ಮಾಡಲಿದ್ದಾರೆ. ಈ ಮೂಲಕ ಅವರು ಅವಕಾಶ ಪಡೆದ ಭಾರತದ ಮೊಟ್ಟ ಮೊದಲ ಸೆಲೆಬ್ರಿಟಿ ಎಂಬ ಶ್ರೇಯಸ್ಸು ತಮ್ಮದಾಗಿಸಿಕೊಳ್ಳಲಿದ್ದಾರೆ.

ಡಿಸೆಂಬರ್‌ ೧೮ರಂದು ಆಯೋಜನೆಗೊಂಡಿರುವ ಫೈನಲ್ ಪಂದ್ಯಕ್ಕೆ ಮೊದಲು ವಿಶ್ವ ಕಪ್‌ ಟ್ರೋಫಿ ಅನಾವರಣಗೊಳ್ಳಲಿದೆ. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟ್ರೋಫಿ ಅನಾವರಣ ಮಾಡಲು ದೀಪಿಕಾಗೆ ಅಹ್ವಾನ ಬಂದಿದೆ ಎಂಬುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ದೀಪಿಕಾ ಅವರು ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕತಾರ್‌ಗೆ ಹೋಗಲಿದ್ದಾರೆ. ಬಾಲಿವುಡ್‌ ನಟಿ ನೋರಾ ಫತೇಹಿ ಅವರು ಫಿಫಾ ವಿಶ್ವ ಕಪ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದೀಪಿಕಾ ಪಡುಕೋಣೆ ಅವರು ಈ ಹಿಂದೆ ಕ್ಯಾನಾಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜ್ಯೂರಿಯಾಗಿ ಪಾಲ್ಗೊಳ್ಳುವ ಮೂಲಕ ಈ ಅವಕಾಶ ಪಡೆದು ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಆಕರ್ಷಕ ಉಡುಪಿನೊಂದಿಗೆ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮತ್ತೊಂದು ಅವಕಾಶ ಅವರ ಪಾಲಿಗೆ ಒದಗಿ ಬಂದಿದೆ.

ಇದನ್ನೂ ಓದಿ | Nora Fatehi | ಕಾಲ್ಜೆಂಡಿನ ಕಾಳಗದಲ್ಲಿ ವಿಭಿನ್ನ ಉಡುಗೆಯಲ್ಲಿ ಕಂಗೊಳಿಸಿದ ನೋರಾ ಫತೇಹಿ

Exit mobile version