Site icon Vistara News

FIFA World Cup | ಕತಾರ್‌ನ ಫ್ಯಾನ್‌ ಫೆಸ್ಟಿವಲ್‌ನಲ್ಲಿ ತ್ರಿವರ್ಣ ಧ್ವಜ ಬೀಸಿದ ಬಾಲಿವುಡ್‌ ನಟಿ ನೋರಾ ಫತೇಹಿ

fifa world cup

ನವ ದೆಹಲಿ : ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವ ಕಪ್‌ನಲ್ಲಿ (FIFA World Cup) ಬಾಲಿವುಡ್‌ ನಟಿ ನೋರಾ ಫತೇಹಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅವರು ಅಲ್ಲಿ ನಡೆದ ಫಿಫಾ ಫ್ಯಾನ್‌ ಫೆಸ್ಟಿವಲ್‌ (ಅಭಿಮಾನಿಗಳ ಹಬ್ಬ) ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಏತನ್ಮಧ್ಯೆ ಅವರು ತ್ರಿವರ್ಣ ಧ್ವಜವನ್ನು ಹಿಡಿದು ಜೈ ಹಿಂದ್‌ ಎಂದು ಘೋಷಣೆ ಕೂಗಿರುವುದು ಭಾರತೀಯ ಫುಟ್ಬಾಲ್‌ ಅಭಿಮಾನಿಗಳ ಮನ ಗೆದ್ದಿದೆ.

ಕಳೆದ ಮಂಗಳವಾರ ನೋರಾ ದೋಹಾದಲ್ಲಿ ಕಾರ್ಯಕ್ರಮ ನೀಡಿದ್ದರು. ಈ ವೇಳೆ ಅವರು ಅಭಿಮಾನಿಗಳ ಬಳಗದಲ್ಲೊಬ್ಬರು ಭಾರತದ ಧ್ವಜವನ್ನು ಹಿಡಿದಿಕೊಂಡಿರುವುದನ್ನು ಗಮನಿಸುತ್ತಾರೆ. ತಕ್ಷಣ ಅವರು ಕೊಡಿ ಕೊಡಿ ಭಾರತ ಧ್ವಜವನ್ನು ಕೊಡಿ ಎಂದು ಕೇಳುತ್ತಾರೆ. ತಕ್ಷಣ ಅಭಿಮಾನಿ ಧ್ವಜವನ್ನು ಪಡೆದುಕೊಂಡು ಜೈ ಹಿಂದ್‌ ಎಂದು ಘೋಷಣೆ ಮೊಳಗಿಸುತ್ತಾರೆ. ತಕ್ಷಣ ನೆರದಿದ್ದ ಅಭಿಮಾನಿಗಳು ಜೈ ಹಿಂದ್‌ ಎನ್ನುತ್ತಾರೆ. ತಕ್ಷಣ ಜೋರಾಗಿ ಕೂಗಿ ಎಂದು ಇನ್ನೊಮ್ಮೆ ಧ್ವಜವನ್ನು ಬೀಸಿದ್ದಾರೆ.

ಭಾರತ ತಂಡ ಫಿಫಾ ವಿಶ್ವ ಕಪ್‌ನಲ್ಲಿ ಆಡುತ್ತಿಲ್ಲ. ಆದರೆ, ಸಂಗೀತ ಹಾಗೂ ನೃತ್ಯದ ಮೂಲಕ ಭಾರತ ದೋಹಾದಲ್ಲಿದೆ ಎಂಬದಾಗಿ ಅವರು ಹೇಳುತ್ತಾರೆ. ಈ ವಿಡಿಯೊವನ್ನು ನೋರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಭಾರತದ ಅಭಿಮಾನಿಗಳು ಅದಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Bollywood Winter Fashion | ವೈವಿಧ್ಯಮಯ ವಿಂಟರ್‌ ಫ್ಯಾಷನ್‌ಗೆ ಸೈ ಎಂದ ಬಾಲಿವುಡ್‌ ತಾರೆಯರು

Exit mobile version