ಮುಂಬಯಿ: ಚುಟುಕು ಕ್ರಿಕೆಟ್ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಕ್ರಿಕೆಟ್ ಆಡುವ ಪ್ರತಿಯೊಂದು ದೇಶಗಳು ಲೀಗ್ ಕ್ರಿಕೆಟ್ ಕಡೆಗೆ ಗಮನ ಹರಿಸುತ್ತಿವೆ. ಆರ್ಥಿಕ ಲಾಭದ ಜತೆಗೆ ಕ್ರಿಕೆಟ್ನ ಜನಪ್ರಿಯತೆ ಹೆಚ್ಚಲು ಈ ಲೀಗ್ಗಳು ಪ್ರಯೋಜನಕಾರಿ. ಐಪಿಎಲ್ ಇದಕ್ಕೆ ಸೂಕ್ತ ಉದಾಹಣೆ. ಇದು ಬಿಸಿಸಿಐ ಚಿನ್ನದ ಮೊಟ್ಟೆಯಿಡುವ ಕೋಳಿ. ಇದೇ ರೀತಿಯಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯೂ ಜಿಮ್ ಆಫ್ರೋ ಟಿ 10 (Zim Afro T10) ಎಂಬ ಕ್ರಿಕೆಟ್ ಲೀಗ್ ಶುರು ಮಾಡಿದೆ. ಜುಲೈ 20ರಂದು ಆರಂಭಗೊಂಡು ಜುಲೈ 29ರ ತನಕ ನಡೆಯಲಿದೆ ಪಂದ್ಯಗಳು ದೇಶದ ರಾಜಧಾನಿ ಹರಾರೆಯಲ್ಲಿ ನಡೆಯಲಿವೆ. ಈ ಲೀಗ್ನಲ್ಲಿ ಬಾಲಿವುಡ್ ತಾರೆ ಸಂಜಯ್ ದತ್ ಅವರು ತಂಡವನ್ನು ಖರೀದಿಸಿದ್ದಾರೆ.
ಬಾಲಿವುಡ್ ಜನಪ್ರಿಯ ನಟರಲ್ಲಿ ಒಬ್ಬರಾದ ಸಂಜಯ್ ದತ್ ಅವರು ಹರಾರೆ ಹರಿಕೇನ್ ತಂಡದ ಸಹ ಮಾಲೀಕರಾಗಿ ಬಂಡವಾಳ ಹೂಡಿಕ ಎಮಾಡಿದ್ದಾರೆ. ಮೇರೀಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ, ಅಧ್ಯಕ್ಷ ಮತ್ತು ಸಿಇಒ ಸರ್ ಸೋಹನ್ ರಾಯ್ ಅವರು ಸಂಜಯ್ ದತ್ ಅವರೊಂದಿಗೆ ಪಾಲುದಾರಿಕೆ ಪಡೆದುಕೊಂಡ ಇನ್ನೊಬ್ಬರು. ಈ ಮೂಲಕ ಸಂಜಯ್ ದತ್ ಅವರು ಮೊದಲ ಬಾರಿಗೆ ಕ್ರಿಕೆಟ್ ಲೀಗ್ ಒಂದರಲ್ಲಿ ಹೂಡಿಕೆ ಮಾಡಿದ್ದಾರೆ.
ಜಿಮ್ ಆಫ್ರೋ ಟಿ 10 ಜಿಂಬಾಬ್ವೆಯಲ್ಲಿ ನಡೆಯಲಿರುವ ಮೊದಲ ಫ್ರ್ಯಾಂಚೈಸಿ ಆಧಾರಿತ ಕ್ರಿಕೆಟ್. ಈ ಟೂರ್ನಿಯಲ್ಲಿ ಐದು ಖಾಸಗಿ ಮಾಲೀಕತ್ವದ ತಂಡಗಳು ಅಗ್ರ ಟ್ರೋಫಿಗಾಗಿ ಹೋರಾಡಲಿವೆ. ಇತರ ನಾಲ್ಕು ತಂಡಗಳು ಡರ್ಬನ್ ಕಲಂದರ್ಸ್, ಕೇಪ್ಔಟ್ನ್ ಸ್ಯಾಂಪ್ ಆರ್ಮಿ, ಬುಲವಾಯೊ ಬ್ರೇವ್ಸ್ ಮತ್ತು ಜೋಬರ್ಗ್ ಲಯನ್ಸ್. ಆಟಗಾರರ ಆಯ್ಕೆ ಪ್ರಕ್ರಿಯೆ ಜ 2ರಂದು ಹರಾರೆಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ನಡೆಯಲಿದೆ.
ಜಿಂಬಾಬ್ವೆ ಕ್ರಿಕೆಟ್ ವ್ಯವಸ್ಥಾಪಕ ನಿರ್ದೇಶಕ ಗಿವ್ಮೋರ್ ಮಕೋನಿ ಮಾತನಾಡಿ, “ಮನರಂಜನಾ ಉದ್ಯಮದ ಕೆಲವು ದೊಡ್ಡ ಹೆಸರುಗಳು ಜಿಮ್ ಆಫ್ರೋ ಟಿ 10ಯಲ್ಲಿ ತಂಡವನ್ನು ಖರೀದಿ ಮಾಡಿರುವುದು ನನಗೆ ಅಪಾರ ಸಂತೋಷವನ್ನು ಉಂಟು ಮಾಡಿದೆ. ಈ ಪಂದ್ಯಾವಳಿ ಅತ್ಯಂತ ಸಂಭ್ರಮದಿಂದ ನಡೆಯಲಿದೆ ಎಂಬುದು ನನ್ನ ಅನಿಸಿಕೆ. ಮುಂದಿನ ತಿಂಗಳು ನಡೆಯಲಿರುವ ಪಂದ್ಯಾವಳಿಯಲ್ಲಿ ಎಲ್ಲ ತಂಡಗಳು ಅದ್ಭುತ ಪ್ರದರ್ಶನ ನೀಡಲಿವೆ ಎಂದು ಹೇಳಿದರು.
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಕ್ರೀಡೆಯ ಅತಿದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿ ಆಟವನ್ನು ವಿಶ್ವದ ಮೂಲೆ ಮೂಲೆಗೂ ಕೊಂಡೊಯ್ಯುವುದು ನಮ್ಮ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಜಿಂಬಾಬ್ವೆ ಕ್ರೀಡೆಯಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಆ ದೇಶದ ಫ್ರಾಂಚೈಸಿ ಜತೆ ಸಹಯೋಗ ಹೊಂದುವುದು ಖುಷಿಯ ವಿಚಾರ. ಅದೇ ರೀತಿ ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ಮೀಸಲಿಡುವುದು ನನಗೆ ನಿಜವಾಗಿಯೂ ಸಂತೋಷವನ್ನು ನೀಡುವ ವಿಷಯವಾಗಿದೆ. ಜಿಮ್ ಆಫ್ರೋ ಟಿ 10ಯಲ್ಲಿ ಹರಾರೆ ಹರಿಕೇನ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹರಾರೆ ಹರಿಕೇನ್ಸ್ ಸಹ ಮಾಲೀಕ ಸಂಜಯ್ ದತ್ ಹೇಳಿದ್ದಾರೆ.
ಇದನ್ನೂ ಓದಿ : Ashes 2023 : ಐಪಿಎಲ್ನಲ್ಲಿ ಫೇಲ್, ಆ್ಯಶಸ್ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್; ಇಂಗ್ಲೆಂಡ್ ಬ್ಯಾಟರ್ನ ಬ್ಯಾಡ್ಲಕ್!
ಜಿಮ್ ಆಫ್ರೋ ಟಿ 10ಯಲ್ಲಿ ನಾವು ಹರಾರೆ ಹರಿಕೇನ್ಸ್ ತಂಡವನ್ನು ರಚಿಸುತ್ತಿರುವುದರಿಂದ ಸಂಜಯ್ ದತ್ ಅವರೊಂದಿಗೆ ಕೆಲಸ ಮಾಡಲು ನನಗೆ ಸಂತೋಷವಾಗುತ್ತಿದೆ. ಇದು c ಮನರಂಜನಾ ಮತ್ತು ಉದ್ಯಮಶೀಲತೆಯ ಸ್ವರೂಪವಾಗಿದೆ. ಈ ಸಹಯೋಗವು ನನ್ನ ಬಾಲ್ಯದ ಕನಸನ್ನು ಸಾಕಾರಗೊಳಿಸಲು ಒಂದು ಅವಕಾಶವಾಗಿದೆ. ಜಿಮ್ ಆಫ್ರೋ ಟಿ 10ನಲ್ಲಿ ಅತ್ಯುತ್ತಮ ತಂಡ ಗೆಲ್ಲಲಿ ಎಂದು ಸರ್ ಸೋಹನ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಟಿ10 ಗ್ಲೋಬಲ್ ಸ್ಪೋರ್ಟ್ಸ್ ಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ನವಾಬ್ ಶಾಜಿ ಉಲ್ ಮುಲ್ಕ್ ಮಾತನಾಡಿ “ಸೋಹನ್ ರಾಯ್ ಮತ್ತು ಸಂಜಯ್ ದತ್ ಒಟ್ಟಿಗೆ ಸೇರುವುದು ನನ್ನ ಕನಸಾಗಿದೆ. ಅವರು ತಮ್ಮ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಲು ಜಿಮ್ ಆಫ್ರೋ ಟಿ 10ಅನ್ನು ಆಯ್ಕೆ ಮಾಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಸೋಹನ್ ಮತ್ತು ಸಂಜಯ್ ಇಬ್ಬರೂ ಬಹಳ ಕ್ರಿಯಾತ್ಮಕ ಮತ್ತು ಶ್ರೇಷ್ಠ ನಾಯಕರು. ಅವರ ತಂಡ ಹರಾರೆ ಹರಿಕೇನ್ಸ್ ಜಿಮ್ ಆಫ್ರೋ ಟಿ10ನಲ್ಲಿ ಉತ್ತಮ ಪ್ರದರ್ಶನ ನೀಡುವ ಖಾತ್ರಿಯಿದೆ ಎಂದು ಹೇಳಿದರು.