ಬೆಂಗಳೂರು: 2023ರ ಐಸಿಸಿ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಮೊದಲು ಅಕ್ಟೋಬರ್ 4ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅದೇ ದಿನ ಕ್ಯಾಪ್ಟನ್ ಡೇ ನಡೆಯಲಿದ್ದು ನಂತರ ಸಂಜೆ 7 ಗಂಟೆಗೆ ಭವ್ಯ ಪ್ರದರ್ಶನ ನಡೆಯಲಿದೆ. ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ರಣವೀರ್ ಸಿಂಗ್, ಖ್ಯಾತ ಗಾಯಕರಾದ ಶ್ರೇಯಸ್ ಘೋಷಾಲ್, ಅರಿಜಿತ್ ಸಿಂಗ್ ಮತ್ತು ಹಿರಿಯ ಆಶಾ ಭೋಂಸ್ಲೆ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರನ್ನು ಬಿಸಿಸಿಐ ಆಹ್ವಾನಿಸಿದೆ.
Cricket World Cup 2023 Opening Ceremony preparations at Narendra Modi Stadium, Ahmedabad late night. pic.twitter.com/z6DBqqnkdE
— Baljeet Singh (@ImTheBaljeet) September 27, 2023
ಭಾರತೀಯ ಪರಂಪರೆಯನ್ನು ಪ್ರದರ್ಶಿಸುವುದರ ಹೊರತಾಗಿ ಲೇಸರ್ ಪ್ರದರ್ಶನ ಮತ್ತು ಪಟಾಕಿಗಳ ಪ್ರದರ್ಶನ ಇರಲಿವೆ. ಎಲ್ಲಾ 10 ತಂಡಗಳ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಅಭಿಮಾನಿಗಳ ಬಗ್ಗೆ ಹೇಳುವುದಾದರೆ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆರಂಭಿಕ ಪಂದ್ಯಕ್ಕೆ ಟಿಕೆಟ್ ಖರೀದಿಸಿದವರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : World Cup History : ಭಾರತ ಫೈನಲ್ನಲ್ಲಿ ಸೋತ 2003 ಆವೃತ್ತಿಯ ಅವಿಸ್ಮರಣೀಯ ಕ್ಷಣಗಳು ಇಲ್ಲಿವೆ
ವಿಶ್ವಕಪ್ ಉದ್ಘಾಟನಾ ಸಮಾರಂಭದ ಪ್ರದರ್ಶಕರು
ಪಿಟಿಸಿ ಪಂಜಾಬ್ ಪ್ರಕಾರ, ಸಮಾರಂಭದಮದು ಆಶಾ ಭೋಂಸ್ಲೆ ತನ್ನ ಮಧು ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದ್ದಾರೆ. ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಕೂಡ ಪ್ರದರ್ಶನ ನೀಡಲಿದ್ದಾರೆ. ಐಸಿಸಿ ವಿಶ್ವಕಪ್ ಥೀಮ್ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದ ರಣವೀರ್ ಸಿಂಗ್ ಬಾಲಿವುಡ್ ಮತ್ತು ಟಾಲಿವುಡ್ ನಟ,ನಟಿಯರೊಂದಿಗೆ ಪ್ರದರ್ಶನ ನೀಡಲಿದ್ದಾರೆ.
ಪ್ರದರ್ಶನ ನೀಡುವ ಸೆಲೆಬ್ರಿಟಿಗಳು
- ಆಶಾ ಭೋಂಸ್ಲೆ
- ಶ್ರೇಯಾ ಘೋಷಾಲ್
- ಅರಿಜಿತ್ ಸಿಂಗ್
- ರಣವೀರ್ ಸಿಂಗ್
- ತಮನ್ನಾ ಭಾಟಿಯಾ
- ಶಂಕರ್ ಮಹಾದೇವನ್
ಭರದಿಂದ ಸಾಗಿವೆ ಸಿದ್ಧತೆಗಳು
ದೊಡ್ಡ ದಿನಕ್ಕಿಂತ ಮುಂಚಿತವಾಗಿ, ಈವೆಂಟ್ಗಾಘಿ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರದರ್ಶನಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಪೂರ್ವಾಭ್ಯಾಸ ನಡೆಯುತ್ತಿದೆ. ಗ್ರ್ಯಾಂಡ್ ಓಪನಿಂಗ್ ಮುನ್ನ ಎಲ್ಲಾ 10 ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್ಗೆ ಆಗಮಿಸಲಿದ್ದಾರೆ. ಆದರೆ ಅಕ್ಟೋಬರ್ 3 ರಂದು ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ನೆದರ್ಲ್ಯಾಂಡ್ಸ್ ಮತ್ತು ಇತರ ತಂಡಗಳೊಂದಿಗೆ ಆಡುತ್ತಿರುವುದರಿಂದ, ರೋಹಿತ್ ಶರ್ಮಾ ಸೇರಿದಂತೆ ಹೆಚ್ಚಿನವರು ಅಕ್ಟೋಬರ್ 4 ರಂದು ಬೆಳಿಗ್ಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ : ಔWorld Cup History: ವಿಶ್ವಕಪ್ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಸಾಧಕರಿವರು…
ಪಂದ್ಯಗಳು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುವುದರಿಂದ, ಅದ್ಧೂರಿ ಕಾರ್ಯಕ್ರಮಕ್ಕೆ ಸಾಕಷ್ಟು ಸಮಯವಿರುವುದಿಲ್ಲ. ಇದಲ್ಲದೆ, ಪಟಾಕಿ ಮತ್ತು ಲೇಸರ್ ಶೋ ಹಗಲು ಹೊತ್ತಿನಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ. ಅಭಿಮಾನಿಗಳಲ್ಲದೆ, ಅತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಬಿಸಿಸಿಐನ ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಸಿಸಿಐ ಮತ್ತು ಐಸಿಸಿ ಎಲ್ಲಾ ಕ್ರಿಕೆಟ್ ಮಂಡಳಿಗಳ ಉನ್ನತ ಆಡಳಿತಗಾರರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಿವೆ.
ಎಲ್ಲಾ ವಿಶ್ವಕಪ್ ತಂಡಗಳ ನಾಯಕರು
ಭಾರತ: ರೋಹಿತ್ ಶರ್ಮಾ
ಪಾಕಿಸ್ತಾನ: ಬಾಬರ್ ಅಜಮ್
ಇಂಗ್ಲೆಂಡ್: ಜೋಸ್ ಬಟ್ಲರ್
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್
ಶ್ರೀಲಂಕಾ: ದಸುನ್ ಶನಕಾ
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್
ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್
ದಕ್ಷಿಣ ಆಫ್ರಿಕಾ: ಲಟೆಂಬಾ ಬವುಮಾ
ಅಫ್ಘಾನಿಸ್ತಾನ: ಹಶ್ಮತುಲ್ಲಾ ಶಾಹಿದಿ