Site icon Vistara News

ಚಂದ್ರಯಾನ-3 ಯಶಸ್ಸು; ಐರ್ಲೆಂಡ್​ನಲ್ಲಿ ಸಂಭ್ರಮಿಸಿದ ಬುಮ್ರಾ ಪಡೆ; ಸಚಿನ್​ ಸೇರಿ ಹಲವರಿಂದ ಟ್ವೀಟ್​ ಮೂಲಕ ಶ್ಲಾಘನೆ

Witnessing History from Dublin

ಡಬ್ಲಿನ್​: ಟೀಮ್​ ಇಂಡಿಯಾ ಆಟಗಾರರು ಟಿ20 ಸರಣಿಯನ್ನಾಡಲು ಐರ್ಲೆಂಡ್​ ಪ್ರವಾಸದಲ್ಲಿದ್ದಾರೆ. ಬುಧವಾರ ಸರಣಿಯ ಅಂತಿಮ ಪಂದ್ಯ ಆಡುವ ಮೊದಲು ಆಟಗಾರರು ಭಾರತ ಕಳುಹಿಸಿದ್ದ ಚಂದ್ರಯಾನ 3 ನೌಕೆಯ (Chandrayaan 3) ಲ್ಯಾಂಡರ್ (Lander) ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವಲ್ಲಿ ಯಶಸ್ವಿಯಾಗುತ್ತಿದ್ದಂತೆ ಸಂಭ್ರಮಿಸಿದ್ದಾರೆ. ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುತ್ತಿರುವ ಐತಿಹಾಸಿಕ ಕ್ಷಣವನ್ನು ನೋಡಲು ಬಿಸಿಸಿಐ ಆಟಗಾರರಿಗೆ ವಿಶೇಷ ಟಿವಿ ವ್ಯವಸ್ಥೆ ಮಾಡಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಶಸ್ಸು ಕಾಣುತ್ತಿದ್ದಂತೆ ಎಲ್ಲ ಭಾರತೀಯ ಆಟಗಾರರು(Team India) ಚಪ್ಪಾಳೆ ತಟ್ಟಿ ಖುಷಿಯನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಮಿಷನ್​ ಸಕ್ಸಸ್​ ಎಂದು ಬರೆದುಕೊಂಡಿದೆ.

ಮೂರನೇ ಪಂದ್ಯಕ್ಕೆ ಮಳೆ ಅಡ್ಡಿ

ಮಲಾಹೈಡ್‌ನ ವಿಲೇಜ್(The Village, Dublin) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಸದ್ಯ ಪಂದ್ಯ ವಿಳಂಬವಾಗಿ ಆರಂಭಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡು ಸರಣಿ ವಶಪಡಿಸಿಕೊಂಡಿರುವ ಭಾರತ ಅಂತಿಮ (IRE vs IND, 3rd T20I) ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಳ್ಳುವುದು ಜಸ್​ಪ್ರೀತ್​ ಬುಮ್ರಾ(Jasprit Bumrah) ಪಡೆಯ ಯೋಜನೆಯಾಗಿದೆ.

ಟ್ವೀಟ್​ ಮೂಲಕ ಚಂದ್ರಯಾನ-3 ಯಶಸ್ವಿ ಸಂಭ್ರಮಿಸಿದ​ ಕ್ರಿಕೆಟಿಗರು

ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಾಧಿಸಿ ತೋರಿಸಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಹಾಗಾಗಿ, ಭಾರತದ ಈ ಸಾಧನೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೇ, ಈ ಸಕ್ಸೆಸ್‌ನೊಂದಿಗೆ ಭಾರತವು (India) ಅಮೆರಿಕ (America), ರಷ್ಯಾ (Russia) ಮತ್ತು ಚೀನಾ (China) ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಈ ಸಂಭ್ರಮ ಕ್ಷಣವನ್ನು ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹವಾಗ್​, ಗೌತಮ್​ ಗಂಭೀರ್​, ಯುವರಾಜ್​ ಸಿಂಗ್​ ಸೇರಿ ಹಲವು ಕ್ರಿಕೆಟಿಗರು ಟ್ವೀಟ್​ ಮೂಲಕ ಸಂಭ್ರಮಿಸಿದ್ದಾರೆ. ಭಾರತದ ಹೆಸರು ಚಂದಿರನ ಅಂಗಳದಲ್ಲಿ ಸ್ವರ್ಣಕ್ಷರಗಳಲ್ಲಿ ಬರೆದಿಡಲಾಗುತ್ತದೆ ಎಂದು ಸಂಭ್ರಮಿಸಿದ್ದಾರೆ.

“ನಾವು ಸೂರ್ಯಾಸ್ತವನ್ನು ಸಮೀಪಿಸುತ್ತಿದ್ದಂತೆ ಚಂದ್ರನ ಅಂಗಳಕ್ಕೆ ನೌಕೆಯನ್ನು ಇಳಿಸಿದ್ದೇವೆ. ಎಂತಹ ವೈಭವದ ಕ್ಷಣ. ಪ್ರತಿ ಹಿನ್ನಡೆಯ ನಂತರ ಬಲವಾದ ಪುನರಾಗಮನವಾಗಿದೆ ಎಂದು ಸಾಬೀತುಪಡಿಸುತ್ತದೆ. ಭಾರತವು ವಿಫಲವಾಗಬೇಕೆಂದು ಬಯಸಿದ ಎಲ್ಲರಿಗೂ ಹಿನ್ನಡೆಯಾಗಿದೆ. ಭಾರತದ ಶಕ್ತಿ ಏನೆಂಬುದು ಇಡೀ ಜಗತ್ತಿಗೆ ಸಾಭೀತಾಗಿದೆ. ಭಾರತೀಯನಾಗಿ ಅತ್ಯಂತ ಹೆಮ್ಮೆ ಪಡುವ ದಿನಗಳಲ್ಲಿ ಇದು ಕೂಡ ಒಂದಾಗಿದೆ.’ ಎಂದು ಸೆಹವಾಗ್(virender sehwag)​ ಟ್ವಿಟ್​ ಮಾಡಿದ್ದಾರೆ.

ಇದನ್ನೂ ಓದಿ Chandrayaan 3 : ಚಂದ್ರೋತ್ಸವ ವೈಭವ; ತಾವೇ ಚಂದಮಾಮನ ಮೇಲೆ ಕಾಲಿಟ್ಟು ಧ್ವಜ ಹಾರಿಸಿದಂತೆ ಕುಣಿದಾಡಿದ ಜನ!

“ಪ್ರತಿ ಹಾರ್ಡ್ ಲ್ಯಾಂಡಿಂಗ್‌ನಲ್ಲಿ ಪಾಠಗಳಿವೆ, ಅದು ನಮ್ಮನ್ನು ಮೃದುವಾದ ಲ್ಯಾಂಡಿಂಗ್‌ನ ಹತ್ತಿರಕ್ಕೆ ಕೊಂಡೊಯ್ಯುತ್ತದೆ- ಚಂದ್ರನ ಮೇಲೆ ಮತ್ತು ಜೀವನದ ಮೇಲೆಯೂ, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 (Chandrayana 3) ಯಶಸ್ವಿಯಾಗಿದೆ. ಇಸ್ರೋ ಮುಖ್ಯಸ್ಥ ಬಿ.ಸೋಮನಾಥ್​ ಅವರ ತಂಡಕ್ಕೆ ಅಭಿನಂದನೆಗಳು” ಎಂದು ಸಚಿನ್​ ತೆಂಡೂಲ್ಕರ್(sachin tendulkar)​ ಟ್ವೀಟ್​ ಮಾಡಿದ್ದಾರೆ.

Exit mobile version