Site icon Vistara News

Jasprit Bumrah | ಮೂಳೆ ಮುರಿತ, ಟಿ-20 ವಿಶ್ವಕಪ್‌ನಿಂದಲೇ ಜಸ್‌ಪ್ರಿತ್‌ ಬುಮ್ರಾ ಔಟ್‌

Bumra

ಮುಂಬೈ: ಮುಂದಿನ ತಿಂಗಳು ನಡೆಯುವ ಟಿ-೨೦ ವಿಶ್ವಕಪ್‌ಗೂ ಮುನ್ನವೇ ಭಾರತ ಕ್ರಿಕೆಟ್‌ ತಂಡಕ್ಕೆ ದೊಡ್ಡ ಆಘಾತವಾಗಿದೆ. ಪಾದದ ಮೂಳೆ ಮುರಿತದಿಂದಾಗಿ ವೇಗಿ ಜಸ್‌ಪ್ರಿತ್‌ ಬುಮ್ರಾ (Jasprit Bumrah) ಅವರು ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ.

ಜಸ್‌ಪ್ರಿತ್‌ ಬುಮ್ರಾ ಅವರಿಗೆ ಹಲವು ದಿನಗಳಿಂದ ಗಾಯದ ಸಮಸ್ಯೆ ಬಾಧಿಸುತ್ತಿದೆ. ಹಾಗಾಗಿಯೇ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ-೨೦ ಸರಣಿಗೂ ಲಭ್ಯವಾಗಿಲ್ಲ. ಈಗ ಅವರಿಗೆ ಉಂಟಾಗಿರುವ ಗಾಯದ ಸಮಸ್ಯೆ, ಮೂಳೆ ಮುರಿತದಿಂದಾಗಿ ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬೆನ್ನುನೋವಿನಿಂದಾಗಿ ಜಸ್‌ಪ್ರಿತ್‌ ಬುಮ್ರಾ ಇತ್ತೀಚೆಗೆ ನಡೆದ ಏಷ್ಯಾಕಪ್‌ನಿಂದಲೂ ಹೊರಗುಳಿದಿದ್ದರು. ಅಲ್ಲದೆ, ಇದೇ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-೨೦ ಸರಣಿಯಿಂದಲೂ ಹೊರಗುಳಿದಿದ್ದಾರೆ. ಇದರ ಬೆನ್ನಲ್ಲೇ ಪಾದದ ಮೂಳೆ ಮುರಿದ ಕಾರಣ ವಿಶ್ವಕಪ್‌ನಲ್ಲೂ ಅವರು ಆಡುತ್ತಿಲ್ಲ. ಇದರಿಂದ ಭಾರತ ತಂಡದ ಬೌಲಿಂಗ್‌ ವಿಭಾಗಕ್ಕೆ ಕೊರತೆ ಉಂಟಾದಂತಾಗಿದೆ. ಬುಮ್ರಾ ಅವರಿಗೆ ೪-೬ ತಿಂಗಳು ವಿಶ್ರಾಂತಿ ಬೇಕಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ | Team India | ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಹೊಸ ಚಿಂತೆ, ಜಸ್‌ಪ್ರಿತ್‌ ಬುಮ್ರಾ ಕಳಪೆ ಫಾರ್ಮ್‌

Exit mobile version