ಕೋಲ್ಕೊತಾ: 2023 ರ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳೆದ ತಿಂಗಳು ಬಿಡುಗಡೆ ಮಾಡಿದೆ. ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣವು ಒಂದು ಸೆಮಿಫೈನಲ್ ಸೇರಿದಂತೆ ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇತ್ತೀಚೆಗೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಮುಖ್ಯಸ್ಥ ಸ್ನೇಹಶಿಶ್ ಗಂಗೂಲಿ ವಿಶ್ವಕಪ್ ಪಂದ್ಯಗಳ ಟಿಕೆಟ್ಗಳ ಬೆಲೆಯನ್ನು ಘೋಷಿಸಿದ್ದಾರೆ. ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಎಲ್ಲಾ ಪಂದ್ಯಗಳಿಗೆ 650 ರೂ.ಗಳಿಂದ 3000 ರೂ.ಗಳವರೆಗೆ ಬೆಲೆಗಳು ಇರುತ್ತವೆ ಎಂದು ಅವರು ಪ್ರಕಟಣೆ ಹೊರಡಿಸಿದ್ದಾರೆ.
Eden Gardens tickets prices for World cup. (Announced by CAB Chief) –
— Vipin Tiwari (@vipintiwari952) July 10, 2023
1. Bangladesh vs. Qualifier 1:
– Upper Tiers: Rs 650
– D H blocks: Rs 1000
– B C K L blocks: Rs 1500
2. England vs. Pakistan and Bangladesh vs. Pakistan:
– Upper Tiers: Rs 800
– D H blocks: Rs… pic.twitter.com/MeFqy1uPHw
ಈ ಐತಿಹಾಸಿಕ ಮೈದಾನವು ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ಭಾರತ -ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮತ್ತು ಎರಡನೇ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಮೊದಲ ಪಂದ್ಯಕ್ಕೆ (ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ) 650 ರೂ., ನಾಲ್ಕನೇ ಪಂದ್ಯಕ್ಕೆ (ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ) ಮತ್ತು ಎರಡನೇ ಪಂದ್ಯಕ್ಕೆ (ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ) 800 ರೂ.ಗಳಿಂದ ಪ್ರಾರಂಭವಾಗಿ 2200 ರೂ.ಗಳವರೆಗೆ ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಮತ್ತೊಂದೆಡೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಟಿಕೆಟ್ ದರ 900-3000 ರೂಪಾಯಿತ. ವಿಶೇಷವೆಂದರೆ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವ ಕಪ್ ಸಮಯದಲ್ಲಿ, ಕೋಲ್ಕತಾದಲ್ಲಿ ಅಪೂರ್ಣ ನಿರ್ಮಾಣ ಕಾಮಗಾರಿಗಳಿಂದಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಳ ಮುಖಾಮುಖಿ ಪಂದ್ಯಕ್ಕೆ ಆತಿಥ್ಯ ವಹಿಸಲು ವಿಫಲಗೊಂಡಿತ್ತು.
ಇಂಡೋ- ಪಾಕ್ ಪಂದ್ಯ ನಡೆಯಬಹುದು
ಐದು ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯವೂ ಸೇರಬಹುದು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯ ಪಾಕಿಸ್ತಾನ ವಿರುದ್ಧ ನಡೆದರೆ ನವೆಂಬರ್ 16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಿಗದಿಯಾಗಬಹುದು.
ಇದನ್ನೂ ಓದಿ : World Cup 2023 : ಶ್ರೀಲಂಕಾ ತಂಡ ವಿಶ್ವ ಕಪ್ ಕ್ವಾಲಿಫೈಯರ್ ಟೂರ್ನಿಯ ಚಾಂಪಿಯನ್
ಉಭಯ ತಂಡಗಳು ಈ ಹಿಂದೆ ಬೆಂಗಳೂರಿನಲ್ಲಿ ನಡೆದ 1996ರ ವಿಶ್ವಕಪ್ ನ ಕ್ವಾರ್ಟರ್ ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು, ಭಾರತವು 39 ರನ್ ಗಳಿಂದ ಆ ಹಣಾಹಣಿಯಲ್ಲಿ ಗೆದ್ದಿತ್ತು. 2011 ರ ವಿಶ್ವಕಪ್ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾದವು, ಅಲ್ಲಿ ಭಾರತವು 29 ರನ್ಗಳಿಂದ ಜಯಗಳಿಸಿತ್ತು. ಇತ್ತೀಚೆಗೆ, ಸ್ನೇಹಶಿಶ್ ಗಂಗೂಲಿ ಭಾರತ ಮತ್ತು ಪಾಕಿಸ್ತಾನ ಸೆಮಿ ಫೈನಲ್ನಲ್ಲಿ ಮುಖಾಮುಖಿಯಾದರೆ ಅದು ಕನಸಿನ ಪಂದ್ಯವಾಗಲಿದೆ ಎಂದು ಹೇಳಿದ್ದರು.