Site icon Vistara News

Virat kohli : ಕೊಹ್ಲಿಯ ಬರ್ತ್​​ಡೇ ದಿನ ವಿಶೇಷ ಸಮಾರಂಭ ಆಯೋಜಿಸಿದೆ ಸಿಎಬಿ

Virat kohli

ನವ ದೆಹಲಿ: ವಿರಾಟ್ ಕೊಹ್ಲಿ ನವೆಂಬರ್ 5 ರಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅದೇ ದಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವ ಕಪ್ ಪಂದ್ಯ ನಡೆಯಲಿದೆ. ದೈತ್ಯರ ನಡುವಿನ ಮೆಗಾ ಮುಖಾಮುಖಿಗೆ ಮುಂಚಿತವಾಗಿ, ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಕಿಂಗ್ ಕೊಹ್ಲಿಗಾಗಿ ವಿಶೇಷ ಕೇಕ್ ಕತ್ತರಿಸುವ ಸಮಾರಂಭವನ್ನು ಆಯೋಜಿಸಲಿದೆ ಎಂಬುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಅವರು ವಿರಾಟ್ ಕೊಹ್ಲಿಗಾಗಿ ವಿಶೇಷವಾದದ್ದನ್ನು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. “ನವೆಂಬರ್ 5ರಂದು ವಿರಾಟ್ ಕೊಹ್ಲಿಯ ಹುಟ್ಟುಹಬ್ಬಕ್ಕಾಗಿ ಈಡನ್ ಗಾರ್ಡನ್ಸ್​ನಲ್ಲಿ ವಿಶೇಷ ಸಮಾರಂಭ ನಡೆಯಲಿದೆ.

ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ವಿಶೇಷ ಕೇಕ್ ಕತ್ತರಿಸುವ ಸಮಾರಂಭ ನಡೆಯಲಿದೆ ಎಂದು ಮತ್ತೊಂದು ಕ್ರೀಡಾ ವೆಬ್​ಸೈಟ್​ನಲ್ಲಿ ವರದಿಯಾಗಿದೆ. ಭಾರತ ತಂಡದ ಮಾಜಿ ನಾಯಕ ಶತಕ ಬಾರಿಸಿದ ನಂತರ ಅತ್ಯುತ್ತಮ ಫಾರ್ಮ್ ಅನ್ನು ಆನಂದಿಸುತ್ತಿದ್ದಾರೆ. ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದ್ದಾರೆ.

ಭಾರತ ತಂಡದ ರಕ್ಷಣೆಗೆ ನಿಂತಿರುವ ಕೊಹ್ಲಿ

ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಮೊದಲ ಪಂದ್ಯದಿಂದಲೇ ಭಾರತದ ರಕ್ಷಣೆಗೆ ನಿಂತಿದ್ದಾರೆ. ಆಸೀಸ್ ವಿರುದ್ಧ ಭಾರತ 2 ರನ್​ಗೆ 3 ವಿಕೆಟ್​ ಕಳೆದುಕೊಂಡಾಗ , ಕೊಹ್ಲಿ ಕ್ರೀಸ್ ಗೆ ಬಂದಿದ್ದರು. ತಮ್ಮ ತಂಡವನ್ನು ಸುರಕ್ಷಿತವಾಗಿ ಗೆಲುವಿನತ್ತ ಮುನ್ನಡೆಸಿದ್ದರ. ನಂತರ ಅವರು ಬಾಂಗ್ಲಾದೇಶದ ವಿರುದ್ಧ ಅದ್ಭುತ ಶತಕವನ್ನು ಬಾರಿಸಿದರು. ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಅಂಕಿಯ ಗಡಿಯನ್ನು ದಾಟಲು ವಿಫಲರಾದರು. 95 ರನ್ ಬಾರಿಸಿ ಔಟಾದರು.

48 ಏಕದಿನ ಶತಕಗಳನ್ನು ಗಳಿಸಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಲು ಕೇವಲ ಒಂದು ಶತಕ ಹಿಂದಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ತಮ್ಮ ಹುಟ್ಟುಹಬ್ಬದಂದು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 49 ನೇ ಶತಕವನ್ನು ಹೊಡೆಯಲು ಕೊಹ್ಲಿಗೆ ಅದ್ಭುತ ಅವಕಾಶವಿದೆ ಎಂದು ಪಂಡಿತರು ಸುಳಿವು ನೀಡಿದ್ದಾರೆ.

ಮೆನ್ ಇನ್ ಬ್ಲೂ ತಂಡದ ಬಗ್ಗೆ ಹೇಳುವುದಾದರೆ, ಭಾರತವು ತನ್ನ 5 ಪಂದ್ಯಗಳನ್ನು ಗೆದ್ದಿದೆ. ಲಕ್ನೋದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಈ ಪಂದ್ಯವನ್ನು ಅತ್ಯಂತ ಕ್ಲಿಷ್ಟಕರವೆಂದು ಪರಿಗಣಿಸಬಹುದಾದರೂ, ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪ್ರಸ್ತುತ ಹಾರ್ದಿಕ್ ಪಾಂಡ್ಯ ಅವರ ಸೇವೆಯನ್ನು ಭಾರತ ಕಳೆದುಕೊಳ್ಳಲಿದೆ ಎಂಬುದನ್ನು ಗಮನಿಸಬೇಕು.

Exit mobile version