Site icon Vistara News

Ind vs Aus : ಭಾರತ- ಆಸೀಸ್​ 3ನೇ ಪಂದ್ಯಕ್ಕೆ ಮಳೆಯ ಅಡಚಣೆ ಆಗಬಹುದೇ?

Barsapara Cricket stadium

ಗುವಾಹಟಿ: ಇಲ್ಲಿನ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ನವೆಂಬರ್ 28) ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ ಮೂರನೇ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆಗಳಿವೆ. ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪರಾಕ್ರಮದ ಪ್ರಭಾವಶಾಲಿ ಪ್ರದರ್ಶನದೊಂದಿಗೆ ಗೆಲುವುಗಳನ್ನು ಗಳಿಸಿರುವ ಸೂರ್ಯಕುಮಾರ್​ ಬಳಗ ಈ ಪಂದ್ಯವನ್ನೂ ಗೆದ್ದು ಸರಣಿಯನ್ನೂ ಗೆಲ್ಲುವ ಗುರಿಯನ್ನು ಹೊಂದಿದೆ.

ಎರಡು ಸೋಲುಗಳೊಂದಿಗೆ ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ಕಠಿಣ ಹೋರಾಟವನ್ನು ಎದುರಿಸುತ್ತಿದೆ. ತಮ್ಮ ಭರವಸೆಗಳನ್ನು ಜೀವಂತವಾಗಿಡಲು, ಅವರು ತಮ್ಮ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಬೇಕು. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಬೇಕಾದರೆ ಅವರ ಬೌಲಿಂಗ್ ದಾಳಿ ಬದಲಾವಣೆ ಮಾಡಬೇಕಾಗಿದೆ. ಟೆಸ್ಟ್ ಬ್ಯಾಟಿಂಗ್ಗೆ ಹೆಸರುವಾಸಿಯಾದ ಸ್ಟೀವನ್ ಸ್ಮಿತ್ ಈ ಸರಣಿಯಲ್ಲಿ ಗಮನಾರ್ಹ ಅರ್ಧಶತಕವನ್ನು ಗಳಿಸುವ ಮೂಲಕ ಟಿ 20 ಪಂದ್ಯಗಳಲ್ಲಿ ತಮ್ಮ ಹೊಂದಾಣಿಕೆಯನ್ನು ಪ್ರದರ್ಶಿಸಿದ್ದಾರೆ. ಅವರ ಪ್ರದರ್ಶನವು ಆಸ್ಟ್ರೇಲಿಯಾ ತಂಡಕ್ಕೆ ಆಧಾರಸ್ತಂಭವಾಗಬಹುದು. ಉಳಿದಂತೆ ವಿಶ್ವಾಸದಲ್ಲಿರುವ ಭಾರತ ತಂಡದ ಸರಣಿಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಅಮೋಘ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆಗಳಿವೆ.

ಮಳೆ ಬರಬಹುದೇ?

ನವೆಂಬರ್ 28 ರ ಹವಾಮಾನ ಮುನ್ಸೂಚನೆಯು ಗುವಾಹಟಿಯಲ್ಲಿ ಯಾವುದೇ ಮಳೆಯ ಸಾಧ್ಯತೆಗಳು ಇಲ್ಲ. ಭಾರತೀಯ ಕಾಲಮಾನ ಸಂಜೆ 7:00 ರ ಆರಂಭದಲ್ಲಿ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ನಿಂದ ಪ್ರಾರಂಭವಾಗುತ್ತದೆ. ರಾತ್ರಿ 10:30 ಕ್ಕೆ ಆಟದ ಅಂತ್ಯದ ವೇಳೆಗೆ ತಾಪಮಾಣ 19 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿಲ್ಲ ಹಾಗೂ ನಿರಂತರ ಪಂದ್ಯವನ್ನು ಖಚಿತಪಡಿಸುತ್ತದೆ.

ಬ್ಯಾಟರ್​ಗಳ ಸ್ವರ್ಗ

ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಕ್ರೀಡಾಂಗಣವು ನಿಧಾನಗತಿಯ ಪಿಚ್​​ಗೆ ಹೆಸರುವಾಸಿಯಾಗಿದೆ. ಮಧ್ಯಮ ವೇಗದ ಬೌಲರ್​ಗಳಿಗೆ ಸಹಾಯ ಒದಗಿಸುತ್ತದೆ. ಮೇಲ್ಮೈಯ ನಿಧಾನಗತಿಯ ಸ್ವಭಾವದ ಹೊರತಾಗಿಯೂ, ಬ್ಯಾಟರ್​ಗಳಿಗೆ ಸ್ಪರ್ಧಾತ್ಮಕ ಸ್ಕೋರ್​ಗಳನ್ನು ಪೇರಿಸಲು ಸಾಧ್ಯವಿದೆ. ಆಟ ಮುಂದುವರಿದಂತೆ ಇಬ್ಬನಿಯ ಸಂಭಾವ್ಯ ಪರಿಣಾಮವನ್ನು ಪರಿಗಣಿಸಿ, ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವುದು ನಿಶ್ಚಿತ.

ಸಂಭಾವ್ಯ ತಂಡಗಳು ಇಂತಿವೆ

ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆರೋನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ / ವಿಕೆಟ್​ ಕೀಪರ್​), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ.

ಇದನ್ನೂ ಓದಿ : Ind vs Aus : ಭಾರತ- ಆಸ್ಟ್ರೇಲಿಯಾ ಪಂದ್ಯ ನಡೆಯುವ ಗುವಾಹಟಿ ಪಿಚ್​ ಹೇಗಿದೆ?

ಭಾರತ ಆಸ್ಟ್ರೇಲಿಯಾ ಟಿ20 ಮುಖಾಮುಖಿ ವಿವರ

ಸಂಭಾವ್ಯ ತಂಡಗಳು ಇಂತಿವೆ

ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆರೋನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ / ವಿಕೆಟ್​ ಕೀಪರ್​), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ.

ಭಾರತ ಆಸ್ಟ್ರೇಲಿಯಾ ಟಿ20 ಮುಖಾಮುಖಿ ವಿವರ

Exit mobile version